ಬಿಜೆಪಿಗೆ ಶಾಕ್ ಸರದಿ ; ಮಾಜಿ ಸಚಿವ ಎಬಿ ಮಾಲಕರೆಡ್ಡಿ, ಹಾಲಿ ಸಚಿವ ಸೋಮಣ್ಣ ಕಾಂಗ್ರೆಸ್ ಸೇರಲು ಮುಹೂರ್ತ ಫಿಕ್ಸ್, ಉತ್ತರ- ದಕ್ಷಿಣ ಕರ್ನಾಟಕದಲ್ಲಿ ಕಾಂಗ್ರೆಸ್ ಬಿಗ್ ಆಪರೇಶನ್ ! 

23-03-23 11:31 am       Bangalore Correspondent   ಕರ್ನಾಟಕ

ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಳೆದ ಬಾರಿ ಬಿಜೆಪಿ ಸೇರಿದ್ದ ಹಳೆಯ ಕಾಂಗ್ರೆಸ್ ನಾಯಕರು ಮರಳಿ ಮೂಲ ಪಕ್ಷಕ್ಕೆ ಸೇರಲು ತಯಾರಾಗಿದ್ದಾರೆ.‌

ಬೆಂಗಳೂರು, ಮಾ.23: ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಳೆದ ಬಾರಿ ಬಿಜೆಪಿ ಸೇರಿದ್ದ ಹಳೆಯ ಕಾಂಗ್ರೆಸ್ ನಾಯಕರು ಮರಳಿ ಮೂಲ ಪಕ್ಷಕ್ಕೆ ಸೇರಲು ತಯಾರಾಗಿದ್ದಾರೆ.‌ ಕಳೆದ ಬಾರಿ ಲೋಕಸಭೆ ಚುನಾವಣೆ ವೇಳೆ ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಲು ಬಿಜೆಪಿ ಸೇರಿದ್ದ ಮಾಜಿ ಸಚಿವ ಎ.ಬಿ. ಮಾಲಕರೆಡ್ಡಿ ಬಿಜೆಪಿಗೆ ಗುಡ್ ಬೈ ಹೇಳಲು ಸಿದ್ಧತೆ ನಡೆಸಿದ್ದಾರೆ.‌

ಲೋಕಸಭೆ ಚುನಾವಣೆ ವೇಳೆ ಈಗಿನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸುವಲ್ಲಿ ಮಾಲಕರೆಡ್ಡಿ ಬಿಜೆಪಿ ಪರವಾಗಿ ಕೆಲಸ ಮಾಡಿದ್ದರು. ಇದೀಗ ಮತ್ತೆ ಮಾಲಕರೆಡ್ಡಿ ಕಾಂಗ್ರೆಸ್ ಸೇರ್ಪಡೆಯಾಗುವ ಸಾಧ್ಯತೆ ಇದೆ. ಕಾಂಗ್ರೆಸ್ ನಿಂದ ಐದು ಬಾರಿ ಶಾಸಕರಾಗಿ, ಒಂದು ಬಾರಿ ಸಚಿವರಾಗಿದ್ದ ಮಾಲಕರೆಡ್ಡಿ ತಮ್ಮ ಪುತ್ರಿಯನ್ನು ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ. 

I’ll hang myself in front of Vidhana Soudha: V Somanna | Deccan Herald

ಸಚಿವ ಸೋಮಣ್ಣ ಕಾಂಗ್ರೆಸ್ ಸೇರಲು ಮುಹೂರ್ತ 

ಈ ನಡುವೆ, ಬೆಂಗಳೂರು ಭಾಗದಲ್ಲಿ ಪ್ರಭಾವಿ ಲಿಂಗಾಯತ ಮುಖಂಡರಾಗಿರುವ ಸಚಿವ ವಿ.ಸೋಮಣ್ಣ ಕಾಂಗ್ರೆಸ್ ಪಕ್ಷ ಸೇರ್ಪಡೆಗೆ ಮುಹೂರ್ತ ಫಿಕ್ಸ್ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿಯಿದೆ. ಮಾರ್ಚ್ 27ರಂದು ಕಾಂಗ್ರೆಸ್ ಸೇರಲಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಸಚಿವ ವಿ.ಸೋಮಣ್ಣ ರಾಜಾಜಿನಗರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗುವುದು ದೃಢಪಟ್ಟ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರೊಬ್ಬರು ತಮಗೆ ನೀಡಿದ್ ಜವಾಬ್ದಾರಿಗೆ ರಾಜೀನಾಮೆ ದೂರ ನಿಂತಿದ್ದಾರೆ. 

ಹೀಗಾಗಿ ಸಚಿವ ವಿ.ಸೋಮಣ್ಣ ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಾರೆ ಎಂಬುದು ಖಚಿತ ಎನ್ನಲಾಗುತ್ತಿದೆ. ನಿನ್ನೆಯಷ್ಟೇ ಬಿಜೆಪಿ ಎಂಎಲ್ಸಿಯಾಗಿದ್ದ ಬಾಬುರಾವ್ ಚಿಂಚನಸೂರ್, ಪಕ್ಷಕ್ಕೆ ಮತ್ತು ಪರಿಷತ್ ಸ್ಥಾನಕ್ಕೆ ಗುಡ್ ಬೈ ಹೇಳಿ ಅಧಿಕೃತವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ್ದಾರೆ. ಇದರ ಬೆನ್ನಲ್ಲೇ ಬಿಜೆಪಿಗೆ ಬಿಗ್ ಶಾಕ್ ಎನ್ನುವಂತೆ ಸಚಿವ ವಿ.ಸೋಮಣ್ಣ ಸೇರಿದಂತೆ ಪಕ್ಷದಲ್ಲಿ ಮುಂಚೂಣಿ ನಾಯಕರಾಗಿರುವ ಒಂದು ಮತ್ತು ಎರಡನೇ ಹಂತದ ನಾಯಕರು ಸರದಿಯಲ್ಲಿ ನಿಂತಿದ್ದಾರೆ. 

Congress veteran Mallikarjun Kharge faces historic defeat at the hands ...

ಕಲಬುರಗಿಯಲ್ಲಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಸೇರಿದ್ದ ಉಮೇಶ್ ಜಾಧವ್, ಮಾಲೀಕಯ್ಯ ಗುತ್ತೇದಾರ್ ಅವರನ್ನೂ ಮತ್ತೆ ಕಾಂಗ್ರೆಸಿನತ್ತ ಸೆಳೆಯಲು ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಭಾರೀ ಪ್ರಯತ್ನ ಸಾಗಿದೆ. ದಕ್ಷಿಣ ಕರ್ನಾಟಕದಲ್ಲಿ ಎಚ್. ವಿಶ್ವನಾಥ್ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುವುದು ಖಾತ್ರಿಯಾಗಿದೆ. ಸಚಿವರಾದ ನಾರಾಯಣ ಗೌಡ, ಭೈರತಿ ಸುರೇಶ್, ಸೋಮಶೇಖರ್ ಕೂಡ ಕಾಂಗ್ರೆಸ್ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ ಎನ್ನುವ ಮಾತುಗಳಿವೆ. ಉತ್ತರ ಮತ್ತು ದಕ್ಷಿಣ ಕರ್ನಾಟಕದಲ್ಲಿ ಬಿಜೆಪಿ ಕಳೆದ ಬಾರಿ ಮಾಡಿದ ರೀತಿಯಲ್ಲೇ ಭಾರೀ ಆಪರೇಶನ್ ಮಾಡಲು ಕೈಹಾಕಿದೆ. 

Ramesh Jarkiholi reinduction talks on the cards- The New Indian Express

ಬೆಳಗಾವಿಯಲ್ಲೂ ಬಿಜೆಪಿಯಲ್ಲಿ ಟಿಕೆಟ್ ಸಿಗದ ಹಳಬರಿಗೆ ಕಾಂಗ್ರೆಸ್ ಗಾಳ ಹಾಕಿದೆ. ಸವದಿ ವಿರುದ್ಧ ಗುದ್ದಾಟದಲ್ಲಿರುವ ರಮೇಶ ಜಾರಕಿಹೊಳಿ, ಕತ್ತಿ ಸೋದರರು, ಕುಮಟಳ್ಳಿ ಟೀಮ್ ನಡೆ ನಿಗೂಢವಾಗಿದೆ. ಈ ಹಿಂದೆ ಮುನಿಸಿನಲ್ಲಿದ್ದವರನ್ನೆಲ್ಲ ಶತಾಯಗತಾಯ ಮತ್ತೆ ಕಾಂಗ್ರೆಸ್ ಕರೆತರಲು ನಾಯಕರು ಮುಂದಾಗಿದ್ದಾರೆ. ಕಾಂಗ್ರೆಸ್ ನಾಯಕರ ಈ ರೀತಿಯ ತೀವ್ರಗಾಮಿ ನಡೆಯಿಂದ ಬಿಜೆಪಿ ಮುಖ್ಯಮಂತ್ರಿ ಆದಿಯಾಗಿ ರಾಜ್ಯ ನಾಯಕರು ತತ್ತರಿಸಿದ್ದಾರೆ. ನಾಯಕರನ್ನು ಪಕ್ಷದಲ್ಲಿ ಹಿಡಿದಿಟ್ಟುಕೊಳ್ಳುವುದೇ ದೊಡ್ಡ ಸವಾಲು ಎನ್ನುವಂತಾಗಿದೆ.

Former Minister Dr AB Malakareddy Likely Join to Congress from BJP including Somanna.