ಬೆಂಗಳೂರಿನಲ್ಲಿ ಡಾ.ಪುನೀತ್‌ ರಾಜ್‌ಕುಮಾರ್‌ ಮೆಲ್ಟಿಸ್ಪೆಷಾಲಿಟಿ ಆಸ್ಪತ್ರೆ ಲೋಕಾರ್ಪಣೆ ; 50 ಕೋಟಿ ವೆಚ್ಚದಲ್ಲಿ ನಿರ್ಮಾಣ 

24-03-23 11:39 am       Bangalore Correspondent   ಕರ್ನಾಟಕ

ಚುನಾವಣಾ ನೀತಿ ಸಂಹಿತೆ ಜಾರಿಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಸಾರ್ವಜನಿಕ ಯೋಜನೆಗಳ ಉದ್ಘಾಟನೆ ಮತ್ತು ಲೋಕಾರ್ಪಣೆ ಕಾರ್ಯದಲ್ಲಿ ನಿರತರಾಗಿದ್ದಾರೆ.

ಬೆಂಗಳೂರು, ಮಾ.24: ಚುನಾವಣಾ ನೀತಿ ಸಂಹಿತೆ ಜಾರಿಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಸಾರ್ವಜನಿಕ ಯೋಜನೆಗಳ ಉದ್ಘಾಟನೆ ಮತ್ತು ಲೋಕಾರ್ಪಣೆ ಕಾರ್ಯದಲ್ಲಿ ನಿರತರಾಗಿದ್ದಾರೆ.

ಬಿಬಿಎಂಪಿಯಿಂದ ಪಂತರಪಾಳ್ಯದಲ್ಲಿ ನಿರ್ಮಿಸಲಾದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಡಾ.ಪುನೀತ್ ರಾಜ್ ಕುಮಾರ್ ಹೆಸರು ನಾಮಕರಣ ಮಾಡಿ ಚಾಲನೆ ನೀಡಿದ ಮಾತನಾಡಿದ ಬೊಮ್ಮಾಯಿಯವರು, ಡಬಲ್ ಇಂಜಿನ್ ಸರ್ಕಾರದ ಸಾಧನೆಗಳನ್ನು ಕೊಂಡಾಡಲು ಈ ವೇದಿಕೆಯನ್ನು ಬಳಸಿಕೊಂಡರು.

CM Bommai promises a memorial for Puneeth Rajkumar this year | Deccan Herald

ಆಸ್ಪತ್ರೆಯನ್ನು ರೂ.50 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಆಸ್ಪತ್ರೆಯಲ್ಲಿ ಮೂಲ ಸೌಕರ್ಯ, ತುರ್ತು ಚಿಕಿತ್ಸಾ ಘಟಕ, ಔಷಧಾಲಯ, ಕಚೇರಿಗಳು, ನರ್ಸ್ ಗಳಿಗೆ ಕೊಠಡಿ, ಸ್ತ್ರೀರೋಗ ವಿಭಾಗ, ಪ್ರಯೋಗಾಲಯ, ಶಸ್ತ್ರಚಿಕಿತ್ಸೆ ವಿಭಾಗ, ರಕ್ತ ಸಂಗ್ರಹ ಕೊಠಡಿ, ನವಜಾತ ಶಿಶುಗಳ ತೀವ್ರ ನಿಗಾ ಘಟಕ, ಆಪರೇಷನ್ ಥಿಯೇಟರ್, ಮಕ್ಕಳ ತೀವ್ರ ನಿಗಾ ಘಟಕಗಳನ್ನು ಸ್ಥಾಪಿಸಲಾಗಿದೆ. ಅದೇ ರೀತಿ, 15 ಎಕರೆ 08 ಗುಂಟಾ ವಿಸ್ತೀರ್ಣದ ನಾಯಂಡಹಳ್ಳಿ ಕೆರೆಯನ್ನು 7.50 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದರು.

Puneeth Rajkumar Hospital : ರಾಜಧಾನಿಯಲ್ಲಿ ಡಾ.ಪುನೀತ್‌ ರಾಜ್‌ಕುಮಾರ್‌  ಮೆಲ್ಟಿಸ್ಪೆಷಾಲಿಟಿ ಆಸ್ಪತ್ರೆ ಲೋಕಾರ್ಪಣೆ; ರಾಘವೇಂದ್ರ ರಾಜ್‌ಕುಮಾರ್‌ ಭಾಗಿ -  inauguration of dr. puneeth ...

Puneeth Rajkumar Hospital : ರಾಜಧಾನಿಯಲ್ಲಿ ಡಾ.ಪುನೀತ್‌ ರಾಜ್‌ಕುಮಾರ್‌  ಮೆಲ್ಟಿಸ್ಪೆಷಾಲಿಟಿ ಆಸ್ಪತ್ರೆ ಲೋಕಾರ್ಪಣೆ; ರಾಘವೇಂದ್ರ ರಾಜ್‌ಕುಮಾರ್‌ ಭಾಗಿ -  inauguration of dr. puneeth ...

ಆಸ್ಪತ್ರೆ ಪುನೀತ್‌ಗೆ ಅರ್ಪಣೆ ; 

ಸಚಿವ ವಿ.ಸೋಮಣ್ಣ ರವರು ಮಾತನಾಡಿ, ಕರ್ನಾಟಕ ರತ್ನ ಪವರ್ ಸ್ಚಾರ್ ಪುನೀತ್ ರಾಜ್ ಕುಮಾರ್‌ರವರ ಸ್ಮರಣೆಯಲ್ಲಿ ಪಂತರಪಾಳ್ಯ ಸುತ್ತಮುತ್ತಲ ನಿವಾಸಿಗಳಿಗೆ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ. ಸ್ಲಂ ಪ್ರದೇಶ, ಕಳ್ಳಕಾರರು ಪ್ರದೇಶವಾಗಿದ್ದ ಸ್ಥಳೀಯರ ಜನರ ಆಶೀರ್ವಾದದಿಂದ ಡಾ.ಪುನೀತ್ ರಾಜ್ ಕುಮಾರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲಾಗಿದೆ. ದಾಸರಹಳ್ಳಿಯಲ್ಲಿ ಡಾ.ಬಾಲಗಂಗಾಧರ ನಾಥ ಸ್ವಾಮೀಜಿಗಳ ಹೆಸರಿನಲ್ಲಿ 300 ಹಾಸಿಗೆ ಮತ್ತು ಪಂತರಪಾಳ್ಯದಲ್ಲಿ 205 ಹಾಸಿಗೆಗಳ ಆಸ್ಪತ್ರೆ ಮತ್ತು 10 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಶಾಲಾ ಕಾಲೇಜುಗಳು, ದೇವಸ್ಥಾನಗಳು, ಉದ್ಯಾನಗಳು, 10೦ ಕ್ಕೂ ಅಧಿಕ ಶುದ್ದ ಕುಡಿಯುವ ನೀರಿನ ಘಟಕ, ನೂತನ ಪೊಲೀಸ್ ಠಾಣೆ ಹಾಗೂ 60ಕ್ಕೂ ಉದ್ಯಾನವನಗಳ ನವೀಕರಿಸಲಾಗಿದೆ. ನಾಯಂಡಹಳ್ಳಿ ಕೆರೆಯನ್ನು ಅಭಿವೃದ್ದಿಗೊಳಿಸಿದ್ದೇವೆ. ಸಾಮಾನ್ಯ ಜನರ ಒಡನಾಡಿಯಾಗಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ವಸತಿ ಸಚಿವ ವಿ.ಸೋಮಣ್ಣ, ದಿವಂಗತ ನಟ ಪುನೀತರಾಜ್‌ಕುಮಾರ್ ಅವರ

All the preparations are in place to build a memorial for Puneeth Rajkumar this year and develop it along with his father Dr Rajkumar’s memorial, said Chief Minister Basavaraj Bommai. Bommai was speaking after inaugurating the 14th Bengaluru International Film Festival (BIFFes) 2023 in front of the Vidhana Soudha on Thursday.