ಬ್ರೇಕಿಂಗ್ ನ್ಯೂಸ್
24-03-23 01:39 pm Bangalore Correspondent ಕರ್ನಾಟಕ
Photo credits : Economic Times
ಬೆಂಗಳೂರು, ಮಾ.24 : ಚುನಾವಣೆ ಹೊತ್ತಲ್ಲಿ ರಣತಂತ್ರ ರೂಪಿಸಲು ರಾಜ್ಯಕ್ಕೆ ಆಗಮಿಸಿರುವ ಗೃಹ ಸಚಿವ ಅಮಿತ್ ಷಾ ರಾಜ್ಯ ಬಿಜೆಪಿ ನಾಯಕರಿಗೆ ಶಾಕ್ ನೀಡಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಮನೆಗೆ ಬೆಳಗ್ಗಿನ ಉಪಹಾರಕ್ಕೆ ತೆರಳಿದ್ದ ಅಮಿತ್ ಷಾ ಅಲ್ಲಿ ವಿಜಯೇಂದ್ರ ಬೆನ್ನು ತಟ್ಟಿ ವಿಭಿನ್ನ ಸಂದೇಶ ನೀಡಿದ್ದಾರೆ.
ಅಮಿತ್ ಷಾ ಅವರನ್ನ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಮ್ಮ ನಿವಾಸಕ್ಕೆ ಉಪಾಹಾರಕ್ಕೆ ಆಹ್ವಾನಿಸಿದ್ದರು. ಶುಕ್ರವಾರ ಬೆಳಗ್ಗೆ ಯಡಿಯೂರಪ್ಪ ನಿವಾಸದ ಮುಂದೆ ಕಾರಿನಿಂದ ಇಳಿದ ಕೂಡಲೇ ಅಮಿತ್ ಶಾ, ಯಡಿಯೂರಪ್ಪ ಕಡೆಗೆ ನಗುಮೊಗ ಬೀರಿದರಾದರೂ ಕಾರು ಇಳಿಯುತ್ತಲೇ, ಯಡಿಯೂರಪ್ಪ ಅವರಿಗೆ ನಿಮ್ಮ ಕೈಯ್ಯಲ್ಲಿರುವ ಹೂಗುಚ್ಛವನ್ನು ನಿಮ್ಮ ಮಗನ ಕೈಗೆ ನೀಡಿ ಎಂದರು.
ಇದನ್ನು ನಿರೀಕ್ಷಸದ ಯಡಿಯೂರಪ್ಪನವರಿಗೆ ಮೊದಲಿಗೆ ಅರ್ಥವಾಗಲೇ ಇಲ್ಲ. ಅದನ್ನು ಗಮನಿಸಿದ ಶಾ, ಮತ್ತೆ ಹೂಗುಚ್ಛವನ್ನು ಅವರಿಗೆ ಕೊಡಿ, ಅವರಿಗೆ ಕೊಡಿ ಅಂತ ಕೈ ತೋರಿಸಿ ಹೇಳಿದರು. ಆಗ ಯಡಿಯೂರಪ್ಪನವರು ತಮ್ಮ ಕೈಯ್ಯಲ್ಲಿದ್ದ ಗುಲಾಬಿ ಹೂಗುಚ್ಛವನ್ನು ವಿಜಯೇಂದ್ರ ಅವರಿಗೆ ಕೊಟ್ಟರು. ನಂತ್ರ ವಿಜಯೇಂದ್ರ ಅವರಿಂದ ಹೂಗುಚ್ಚ ಪಡೆದು ವಿಜಯೇಂದ್ರ ಬೆನ್ನು ತಟ್ಟಿ, ಖುಷಿಯಿಂದ ಯಡಯೂರಪ್ಪ ನಿವಾಸಕ್ಕೆ ಆಗಮಿಸಿದರು.
ಅಮಿತ್ ಶಾ ಬ್ರೇಕ್ ಫಾಸ್ಟ್ ಮಿಟೀಂಗ್ ನಂತರ ಬಿ.ವೈ. ವಿಜಯೇಂದ್ರ ಮಾತನಾಡಿ, ಅಮಿತ್ ಶಾ ಅವರು ನನ್ನ ಬೆನ್ನು ತಟ್ಟಿ ಮಾತಾಡಿಸಿದ್ದು ಆನೆ ಬಲ ಬಂದಂತಾಗಿದೆ ಎಂದು ವಿಜಯೇಂದ್ರ ಹೇಳಿದ್ದಾರೆ. ಇದು ರಾಜಕೀಯ ಸಂದೇಶವೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಸಹಜ, ಇದು ರಾಜಕೀಯದಲ್ಲಿ ಸಹಜ ಎಂದರು. ಆನೆ ಬಲ ಬಂದಂತಾಗಿದೆ ಎನ್ನುವ ಮೂಲಕ ಸ್ವಪಕ್ಷದಲ್ಲೆ ಇರುವ ವಿರೋಧಿಗಳಿಗೆ ವಿಜಯೇಂದ್ರ ಟಾಂಗ್ ನೀಡಿದ್ದಾರೆ.
ಮುಂದಿನ ದಿನಗಳಲ್ಲಿ ಚುನಾವಣೆ ನಂತರ ರಾಜ್ಯದಲ್ಲಿ ಅತಂತ್ರ ಸ್ಥಿತಿ ಸೃಷ್ಟಿಯಾಗಲು ಬಿಡಲ್ಲ, ಕೇಂದ್ರ, ರಾಜ್ಯ ಸರ್ಕಾರದ ಯೊಜನೆ ಮನೆ ಮನೆಗೆ ತಲುಪಿಸುವ ಮೂಲಕ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು ಎಂಬ ಬಗ್ಗೆ ಚರ್ಚೆ ನಡೆಸಲಾಯಿತು ಎಂದು ವಿಜಯೇಂದ್ರ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯಕ್ಕೆ ಭೇಟಿ ನೀಡುತ್ತಿರುವ @BJP4India ದ ಹಿರಿಯ ನಾಯಕರು, ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಸನ್ಮಾನ್ಯ ಶ್ರೀ @AmitShah ಜೀ ಅವರಿಗೆ ಆದರದ ಸ್ವಾಗತ.
— Smt. Kanthi Shetty (@ShettyKanthi) March 24, 2023
Warm welcome to our senior leader, Union Home & Cooperation Minister Amith Shah Ji to Karnataka.#KarnatakaWelcomesAmitShah pic.twitter.com/oO4GyJhr28
Union Home Minister Amit Shah, who arrived in Karnataka on Friday, visited former Chief Minister and BJP Central Parliamentary Board Member B.S. Yediyurappa's residence and had breakfast there. The visit is analyzed as a message to the BJP leaders who are openly expressing their reservations on high command giving prominence to Yediyurappa.
07-02-25 11:00 pm
Bangalore Correspondent
ಮುಡಾ ಹಗರಣ ; ಸಿಎಂ ಸಿದ್ದರಾಮಯ್ಯಗೆ ಹೈಕೋರ್ಟ್ ರಿಲೀಫ...
07-02-25 08:09 pm
Microfinance Karnataka, Governor, Siddaramai...
07-02-25 04:22 pm
National aerobic Championship Karnataka: ಜಮ್ಮ...
06-02-25 07:55 pm
Yadagiri Accident, Five Killed: ಯಾದಗಿರಿ; ಸಾರಿ...
05-02-25 06:39 pm
08-02-25 02:23 pm
HK News Desk
BJP Delhi, AAP, Live result, Election: 27 ವರ್...
08-02-25 12:14 pm
Mahakumbh accident, Jaipur: ಜೈಪುರದಲ್ಲಿ ಭೀಕರ ರ...
07-02-25 05:27 pm
Zamfara school fire accident: SHOCKING; ತರಗತ...
07-02-25 05:23 pm
Telangana, student suicide: ಪ್ರಾಂಶುಪಾಲರು ಬೈದರ...
06-02-25 05:37 pm
08-02-25 10:46 pm
Mangalore Correspondent
Mines, Krishnaveni Mangalore, Dinesh gundrao;...
08-02-25 01:08 pm
Covid 19 death, Karnataka CM Siddaramaiah: ಕೋ...
07-02-25 10:13 pm
Brijesh Chowta, DK MP, Piyush Goyal: ದ.ಕ.ದಲ್ಲ...
07-02-25 08:24 pm
Belthangady, House, Evil spirit: ಬೆಳ್ತಂಗಡಿ ;...
07-02-25 03:12 pm
08-02-25 10:16 pm
Bangalore Correspondent
ಕಲಬುರಗಿ | ಪರಸ್ತ್ರೀ ಜೊತೆ ಸುತ್ತಾಡುತ್ತಿದ್ದ ಪತಿಯ...
08-02-25 06:21 pm
Mangalore Mayor raid, slaughterhouse Kudroli:...
08-02-25 04:36 pm
Bidar murder crime: ಬೀದರ್ ; ಮನೆಮಂದಿ ನೋಡಿದ ಹುಡ...
08-02-25 01:00 pm
Mangalore court, Crime: ಕುಡಿದ ಮತ್ತಿನಲ್ಲಿ ಪತ್ನ...
07-02-25 11:55 am