ಬ್ರೇಕಿಂಗ್ ನ್ಯೂಸ್
25-03-23 01:15 pm HK News Desk ಕರ್ನಾಟಕ
ಚಿಕ್ಕಬಳ್ಳಾಪುರ, ಮಾ.25: 2047ರ ಹೊತ್ತಿಗೆ ಭಾರತಕ್ಕೆ ಸ್ವಾತಂತ್ರ್ಯ ಬಂದು 100 ವರ್ಷಗಳು ಪೂರೈಸುವ ಹೊತ್ತಿಗೆ, ಭಾರತವನ್ನು ಸಮೃದ್ಧ ರಾಷ್ಟ್ರವನ್ನಾಗಿಸಲು ಶ್ರಮಿಸಲಾಗುತ್ತಿದೆ. ಕರ್ನಾಟಕದಲ್ಲಿ ಬಡವರ ಮಕ್ಕಳು ವೈದ್ಯರಾಗುವ ಕನಸು ನನಸಾಗುವುದು ಇನ್ನು ಮುಂದೆ ಸುಲಭವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯಲ್ಲಿ ಶ್ರೀ ಸತ್ಯ ಸಾಯಿ ಸಂಸ್ಥೆಯ ವತಿಯಿಂದ ನೂತನವಾಗಿ ನಿರ್ಮಾಣಗೊಂಡಿರುವ ಮಧುಸೂಧನ್ ಸಾಯಿ ವೈದ್ಯಕೀಯ ವಿಜ್ಞಾನ ಹಾಗೂ ಸಂಶೋಧನಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಡವರನ್ನು ವೋಟ್ ಬ್ಯಾಂಕ್ ಎಂದು ಪರಿಗಣಸಿದ್ದ ದೇಶದ ಪರಿಸ್ಥಿತಿಯನ್ನು ಬಿಜೆಪಿ ಸರ್ಕಾರ ಬದಲಾಯಿಸಿದೆ. ಬಡವರ ಮಕ್ಕಳು ಕನ್ನಡದಲ್ಲಿ ವೈದ್ಯಕೀಯ ಓದುವಂತ ಸೌಲಭ್ಯಗಳನ್ನು ನಾವು ಕಲ್ಪಿಸಿದ್ದೇವೆ. ಕನ್ನಡ ಮಾತ್ರವಲ್ಲದೆ, ಅನೇಕ ಪ್ರಾಂತೀಯ ಭಾಷೆಗಳಲ್ಲಿ ಮಕ್ಕಳು ಇಂದು ವೈದ್ಯಕೀಯ ವಿಜ್ಞಾನ ಓದುವಂತೆ ನಾವು ಹೊಸ ವ್ಯವಸ್ಥೆಯನ್ನು ಸದ್ಯದಲ್ಲೇ ಎಲ್ಲಾ ಕಡೆಗೂ ತರಲಿದ್ದೇವೆ’’ ಎಂದು ಹೇಳಿದರು.
ಇದೇ ವೇಳೆ, ದೇಶದ ಬಡವರ ಹಾಗೂ ಮಧ್ಯಮ ವರ್ಗದವರ ಆರೋಗ್ಯ ಕಾಪಾಡಲು ನಾವು ಹಲವಾರು ಕ್ರಮಗಳನ್ನು ಕೈಗೊಂಡಿದ್ದೇವೆ. “ಬಡವರ, ಮಧ್ಯಮವರ್ಗದ ಹಿತಕ್ಕಾಗಿ ಜನೌಷಧ ಕೇಂದ್ರಗಳನ್ನು ಸ್ಥಾಪಿಸಿದ್ದೇವೆ. ಕರ್ನಾಟಕದಲ್ಲಿ 1000ಕ್ಕೂ ಜನೌಷಧಿ ಕೇಂದ್ರಗಳು ಇವೆ. ಇದರಿಂದ ಬಡವರ ಎಷ್ಟೋ ದುಡ್ಡು ಉಳಿತಾಯವಾಗಿದೆ. ಭಾಜಪ ಸರ್ಕಾರ, ಬಡವರ ಕಷ್ಟಕ್ಕೆ ಸ್ಪಂದಿಸಿದೆ. 5 ಲಕ್ಷ ರೂ.ಗಳಿಗಿಂತ ಉಚಿತ ಆರೋಗ್ಯ ಚಿಕಿತ್ಸೆಯನ್ನು ನಾವು ವಿಮೆಯ ಮೂಲಕ ನೀಡುತ್ತಿದ್ದೇವೆ. ಇದಲ್ಲದೆ, ಹೃದಯದ ಶಸ್ತ್ರಚಿಕಿತ್ಸೆ, ಮೊಣಕಾಲು ಚಿಪ್ಪು ಬದಲಾವಣೆ ಶಸ್ತ್ರಚಿಕಿತ್ಸೆ ಮುಂತಾದ ದುಬಾರಿ ಶಸ್ತ್ರಚಿಕಿತ್ಸೆಗಳು ಕಡಿಮೆ ಖರ್ಚಿನಲ್ಲಿ ಆಗುವಂತೆ ಮಾಡಿದ್ದೇವೆ ಎಂದರು.
ಚಿಕ್ಕಬಳ್ಳಾಪುರ ಪ್ರಾಂತ್ಯವನ್ನು ಹೊಗಳಿದ ಮೋದಿ ;
ಕರ್ನಾಟಕದ ಎಲ್ಲಾ ಸಹೋದರ, ಸಹೋದರಿಯವರಿಗೆ ನನ್ನ ನಮಸ್ಕಾರಗಳು ಎನ್ನುತ್ತಲೇ ಮಾತು ಆರಂಭಿಸಿದ ಮೋದಿ, ನೀವೆಲ್ಲರೂ ಅಪರಿಮಿತ ಉತ್ಸಾಹದಿಂದ ಸೇವೆಯೊಂದಿಗೆ ಸಮ್ಮಿಳಿತವಾಗಿದ್ದೀರಿ. ನಿಮ್ಮ ದರ್ಶನ ಮಾಡಿರುವುದೇ ನನ್ನ ಸೌಭಾಗ್ಯ ಎಂದು ಹೇಳಿದರು. ಚಿಕ್ಕಬಳ್ಳಾಪುರ ಆಧುನಿಕ ಭಾರತದ ಭಾಗ ಎಂದು ಬಣ್ಣಿಸಿದ ಅವರು, ಈ ಭೂಮಿಯು ಭಾರತರತ್ನ ಎಂ. ವಿಶ್ವೇಶ್ವರಯ್ಯನವರ ಜನ್ಮಸ್ಥಳ. ಮಧುಸೂಧನ್ ಸಾಯಿ ಆಸ್ಪತ್ರೆಯನ್ನು ಉದ್ಘಾಟಿಸಲು ಬರುವ ಮುನ್ನ ನನಗೆ ವಿಶ್ವೇಶ್ವರಯ್ಯನವರ ಸಮಾಧಿಗೆ ಪುಷ್ಪಮ ಸಲ್ಲಿಸುವ ಅಕವಾಶ ಸಿಕ್ಕಿತು. ಸರ್ ಎಂವಿ ಅವರಿಗೆ ಪುಷ್ಪನಮನ ಸಲ್ಲಿಸಿದಾಗ ನನ್ನಲ್ಲಿ ಧನ್ಯತೆಯ ಭಾವ ಆವರಿಸಿತು ಎಂದು ಅವರು ಹೇಳಿದರು.
ಚಿಕ್ಕಬಳ್ಳಾಪುರದ ಮಗನಾದ ಸರ್ ಎಂ ವಿಶ್ವೇಶ್ವರಯ್ಯನವರು ಸಾಮಾನ್ಯರಿಗೆ ಉಪಯೋಗುವಂಥ ಅನೇಕ ಆವಿಷ್ಕಾರಗಳನ್ನು ಮಾಡಿದ್ದಾರೆ. ಇಂಜಿನಿಯರಿಂಗ್ ಯೋಜನೆಗಳನ್ನು ಪೂರ್ಣಗೊಳಿಸಿದ್ದಾರೆ. ಇದಲ್ಲದೆ, ಈ ಭೂಮಿಯಲ್ಲಿರುವ ಸತ್ಯಸಾಯಿ ಸೇವಾ ಸಂಸ್ಥೆಯು ಈ ಪ್ರಾಂತ್ಯದಲ್ಲಿ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಮಾನವೀಯ ಸೇವೆಗಳನ್ನು ನೀಡುತ್ತಿದೆ ಎಂದು ಅವರು ಹಾಡಿ ಹೊಗಳಿದರು.
Prime Minister Narendra Modi on 25th March 2023, Saturday inaugurated Sri Madhusudan Sai Institute of Medical Sciences and Research at Muddenahalli in Chikkaballapur district of Karnataka. Established by Sri Sathya Sai University for Human Excellence, the Institute will provide free medical education and offer free medical treatment to the poor. The Medical college has 100 MBBS seats. The Prime Minister visited the birthplace of Bharat Ratna Sir M Visvesvaraya in Muddenahalli and paid floral tribute at his Samadhi. A museum on the renowned engineer and illustrious administrator comprising of photographs and awards won by the stalwart are on display here.
16-07-25 09:36 pm
HK News Desk
ಕೋವಿಡ್ ಮುಗಿದರೂ, ಅದರ ಪರಿಣಾಮ ನಿಂತಿಲ್ಲ..! ನರಮಂಡಲ...
16-07-25 07:05 pm
BESCOM, Cybercrime, Digital Arrest: ಡಿಜಿಟಲ್ ಅ...
16-07-25 03:58 pm
ಕಾವೇರಿ ಆರತಿ ದುಡ್ಡು ಹೊಡೆಯುವ ಸ್ಕೀಮ್, ನೂರು ಕೋಟಿ...
16-07-25 11:47 am
35 IPS Officers Transfer: ರಾಜ್ಯದಲ್ಲಿ 35 ಐಪಿಎಸ...
15-07-25 01:32 pm
16-07-25 09:58 pm
HK News Desk
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
16-07-25 10:52 pm
Mangalore Correspondent
ಕೆಂಪು ಕಲ್ಲು, ಮರಳು ಸಮಸ್ಯೆಗೆ ಕಾಂಗ್ರೆಸ್ ಸರ್ಕಾರದ...
16-07-25 01:01 pm
Dharmasthala Missing case, Ananya Bhat, Compl...
15-07-25 10:40 pm
Udupi Rain, Fishermen Missing: ಉಡುಪಿ ; ಭಾರೀ ಗ...
15-07-25 10:13 pm
Kmc Manipal Hospital, Mangalore, Health Card:...
15-07-25 07:19 pm
16-07-25 11:04 pm
Mangalore Correspondent
Mangalore Crime, Konaje Murder: ಒಂಟಿ ಮಹಿಳೆಯ ಅ...
16-07-25 09:48 pm
Sexual Harassment Odisha News; ಪ್ರಾಧ್ಯಾಪಕನಿಂದ...
16-07-25 04:37 pm
Kavoor police constable arrest, Mangalore: ದೂ...
16-07-25 11:42 am
ಸುಂದರವಾಗಿದ್ದಕ್ಕೆ ತಲೆ ಬೋಳಿಸಿ ಮನೆಯಲ್ಲಿ ಕೂಡಿಹಾಕಿ...
15-07-25 10:57 pm