ಬ್ರೇಕಿಂಗ್ ನ್ಯೂಸ್
25-03-23 02:38 pm Bangalore Correspondent ಕರ್ನಾಟಕ
ಬೆಂಗಳೂರು, ಮಾ.25 : ಪ್ರಧಾನಿ ನರೇಂದ್ರ ಮೋದಿಯವರು, ನೂತನವಾಗಿ ನಿರ್ಮಿಸಲಾಗಿರುವ ಕೆಆರ್ ಪುರಂ - ಬೈಯ್ಯಪ್ಪನ ಹಳ್ಳಿ ಮೆಟ್ರೋ ರೈಲು ಮಾರ್ಗವನ್ನು ಶನಿವಾರ ಲೋಕಾರ್ಪಣೆಗೊಳಿಸಿದರು. ಬೆಂಗಳೂರಿನ ಸಾರಿಗೆ ವ್ಯವಸ್ಥೆಯಲ್ಲಿ ಮಹತ್ವದ ಪಾತ್ರ ವಹಿಸಿರುವ ಬೆಂಗಳೂರು ಮೆಟ್ರೋಕ್ಕೆ ಈ ರೈಲು ಮಾರ್ಗವು ಹೊಸ ಹೆಗ್ಗಳಿಕೆಯಾಗಿದ್ದು, ಇದು ನೇರಳೆ ಮಾರ್ಗದಲ್ಲಿ ತೆರಳುವ ಮೆಟ್ರೋ ಪ್ರಯಾಣಿಕರ ಪ್ರಯಾಣವನ್ನು ವಿಸ್ತರಿಸಲು ಸಹಕಾರಿಯಾಗಿದೆ. ಅದರಲ್ಲೂ ವಿಶೇಷವಾಗಿ ಎಲೆಕ್ಟ್ರಾನಿಕ್ ಸಿಟಿ ಪ್ರಾಂತ್ಯದಲ್ಲಿರುವ ಐಟಿ ಕಂಪನಿಗಳ ಉದ್ಯೋಗಿಗಳಿಗೆ ಹೆಚ್ಚು ಅನುಕೂಲ ಕಲ್ಪಿಸುತ್ತದೆ.
ಮಾ. 25ರಂದು ದೆಹಲಿಯಿಂದ ನೇರವಾಗಿ ಬೆಂಗಳೂರಿಗೆ ಆಗಮಿಸಿದ್ದ ಅವರು, ಅಲ್ಲಿಂದ ಚಿಕ್ಕಬಳ್ಳಾಪುರಕ್ಕೆ ಹೋಗಿದ್ದರು. ಅಲ್ಲಿ, ಸರ್ ಎಂ. ವಿಶ್ವೇಶ್ವರಯ್ಯನವರ ಸ್ವಂತ ಊರಾದ ಮುದ್ದೇನಹಳ್ಳಿಯಲ್ಲಿ ಶ್ರೀ ಸತ್ಯಸಾಯಿ ಸಂಸ್ಥೆ ನಿರ್ಮಿಸಿರುವ ಮಧುಸೂದನ್ ಸಾಯಿ ವೈದ್ಯಕೀಯ ವಿಜ್ಞಾನ ಹಾಗೂ ಸಂಶೋಧನಾ ಸಂಸ್ಥೆಯನ್ನು ಉದ್ಘಾಟಿಸಿದರು. ಅದಕ್ಕೂ ಮುನ್ನ ಅವರು, ಸರ್. ಎಂ. ವಿಶ್ವೇಶ್ವರಯ್ಯನವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು.
ಚಿಕ್ಕಬಳ್ಳಾಪುರದಿಂದ ನೇರವಾಗಿ ಸೇನಾ ವಿಮಾನದಲ್ಲಿ ಬೆಂಗಳೂರಿಗೆ ಹಿಂದಿರುಗಿದ ಅವರು, ಅಲ್ಲಿಂದ ನೇರವಾಗಿ ವೈಟ್ ಫೀಲ್ಡ್ ಮೆಟ್ರೋ ನಿಲ್ದಾಣಕ್ಕೆ ಬಂದು ಮೆಟ್ರೋ ರೈಲು ಸೇವೆಯನ್ನು ಲೋಕಾರ್ಪಣೆ ಮಾಡಿದರು.
ವಿದ್ಯಾರ್ಥಿಗಳೊಂದಿಗೆ ಮೆಟ್ರೋ ರೈಲಿನಲ್ಲಿ ಪ್ರಯಾಣ ;
ಬೆಂಗಳೂರಿನ ಕೆಆರ್‌ಪುರಂ-ವೈಟ್‌ಫೀಲ್ಡ್ ಮೆಟ್ರೋ ಮಾರ್ಗ ಉದ್ಘಾಟನೆ ಮಾಡಿದ ಬಳಿಕ ಮೋದಿಯವರು, ನಾಲ್ಕು ಕಿ.ಮೀ ವರೆಗೂ ಮೆಟ್ರೋದಲ್ಲಿ ಪ್ರಯಾಣ ಮಾಡಿದರು.
ಮೆಟ್ರೋ ಸಿಬ್ಬಂದಿಗಳು, ಮಕ್ಕಳು, ವಿದ್ಯಾರ್ಥಿಗಳ ಜೊತೆಗೆ ಮೋದಿಯವರು ಪ್ರಯಾಣ ಮಾಡಲಿದ್ದಾರೆ. ಈ ವೇಳೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳೊಂದಿಗೆ ಮೋದಿಯವರು ಮಾತುಕತೆ ನಡೆಸಿದರುು.
13.71 ಕಿ.ಮೀ. ಉದ್ದದ ಕೆ ಆರ್ ಪುರಂ-ವೈಟ್‌ಫೀಲ್ಡ್ ಮೆಟ್ರೋ ಮಾರ್ಗವನ್ನು 4,500 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಇದು ದೇಶದ ಎರಡನೇ ಅತಿ ದೂರ ಕ್ರಮಿಸುವ ಮೆಟ್ರೋ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ದೆಹಲಿ ಮೆಟ್ರೋ ಪ್ರಸ್ತುತ 390 ಕಿ.ಮೀ. ಸಂಚಾರ ಮಾರ್ಗ ಹೊಂದಿದ್ದು, ದೇಶದಲ್ಲಿಯೇ ನಂಬರ್ ಒನ್ ಸ್ಥಾನದಲ್ಲಿದೆ.
ಮೋದಿಯವರು ತಮ್ಮ ಕಾರಿನಲ್ಲಿ ಜನರತ್ತ ಕೈ ಬೀಸುತ್ತಲೇ ವೈಟ್ ಫೀಲ್ಡ್ ಮೆಟ್ರೋಕ್ಕೆ ಬಂದ ಮೋದಿ, ಅಲ್ಲಿ ಮೆಟ್ರೋ ನಿಲ್ದಾಣವನ್ನು ಉದ್ಘಾಟಿಸಿದರು. ಅಲ್ಲಿ ನಿಯೋಜಿಸಲಾಗಿದ್ದ ಮೆಟ್ರೋ ನಿಲ್ದಾಣದ, ಕಾಮಗಾರಿಯ ವಿವರಣೆಗಳನ್ನು ಅವರು ವೀಕ್ಷಿಸಿದರು. ಒಟ್ಟು 4,500 ಕೋಟಿ ರೂ. ವೆಚ್ಚದಲ್ಲಿ ಈ ರೈಲು ಮಾರ್ಗ ನಿರ್ಮಾಣವಾಗಿದ್ದು, 13.71 ಕಿ.ಮೀ.ನಷ್ಟು ದೂರವನ್ನು ಇದು ಕ್ರಮಿಸಲಿದೆ ಎಂದು ಅಧಿಕಾರಿಗಳು ಮೋದಿಯವರಿಗೆ ಮಾಹಿತಿ ನೀಡಿದರು. ಅಲ್ಲದೆ, ದೇಶದ ಅತಿ ಉದ್ದದ ವಿಸ್ತರಿತ ಮೆಟ್ರೋ ರೈಲು ಮಾರ್ಗ (ಬೆಂಗಳೂರು ಮೆಟ್ರೋದ ನೇರಳೆ ಮಾರ್ಗ) ಇದು ಎಂಬ ಹೆಗ್ಗಳಿಕೆಯನ್ನೂ ಮೋದಿಯವರಿಗೆ ವಿವರಿಸಿದರು.
#WATCH | Karnataka: Prime Minister Narendra Modi inaugurates Whitefield (Kadugodi) to Krishnarajapura line of Bengaluru Metro.
— ANI (@ANI) March 25, 2023
(Source: DD) pic.twitter.com/OANqOoHGyz
Prime Minister Narendra Modi is set to inaugurate a 13.71 km stretch of the Bengaluru Metro Phase II project in poll-bound Karnataka on Saturday. Inaugurating the stretch from the Whitefield (Kadugodi) Metro to Krishnarajapura (KR Puram) Metro Line of the Reach-1 extension project will be inaugurated at Whitefield (Kadugodi) Metro Station around 1 pm, Modi will also undertake a ride in the train.
15-09-25 08:53 pm
Bangalore Correspondent
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
16-09-25 02:46 pm
HK News Desk
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
16-09-25 07:48 pm
Mangalore Correspondent
Ex IPS Kempaiah, Professor Umeshchandra, Mang...
16-09-25 07:02 pm
Mangalore BJP Protest, UT khader, Red Stone:...
16-09-25 06:51 pm
UT Khader, Mangalore, Ullal: ಉಳ್ಳಾಲ ಕ್ಷೇತ್ರದಲ...
16-09-25 06:06 pm
ಕೆಂಪು ಕಲ್ಲು ನಿಯಮ ಸರಳೀಕರಣಕ್ಕೆ ಸಂಪುಟದಲ್ಲಿ ಒಪ್ಪಿ...
16-09-25 05:12 pm
16-09-25 07:12 pm
HK News Desk
Bangalore Police, Inspector Suspend, Crime, D...
15-09-25 10:47 pm
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm