ಒಳ ಮೀಸಲಾತಿ ಕಿಚ್ಚು ; ಶಿಕಾರಿಪುರದಲ್ಲಿ ಹಿಂಸೆಗೆ ತಿರುಗಿದ ಪ್ರತಿಭಟನೆ, ಯಡಿಯೂರಪ್ಪ ನಿವಾಸಕ್ಕೆ ಕಲ್ಲು ತೂರಾಟ, ಲಾಠಿಚಾರ್ಜ್, ಸೆಕ್ಷನ್ ಜಾರಿ

27-03-23 03:34 pm       HK News Desk   ಕರ್ನಾಟಕ

ರಾಜ್ಯ ಸರಕಾರದ ಒಳ ಮೀಸಲಾತಿ ವಿರೋಧಿಸಿ ಶಿಕಾರಿಪುರದಲ್ಲಿ ಪ್ರತಿಭಟನೆ ಹಿಂಸೆಗೆ ತಿರುಗಿದ್ದು, ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಶಿಕಾರಿಪುರ ತಾಲೂಕಿನಲ್ಲಿ ಪೊಲೀಸರು 144 ಸೆಕ್ಷನ್ ಜಾರಿಗೊಳಿಸಿದ್ದಾರೆ.

ಶಿವಮೊಗ್ಗ, ಮಾ.27: ರಾಜ್ಯ ಸರಕಾರದ ಒಳ ಮೀಸಲಾತಿ ವಿರೋಧಿಸಿ ಶಿಕಾರಿಪುರದಲ್ಲಿ ಪ್ರತಿಭಟನೆ ಹಿಂಸೆಗೆ ತಿರುಗಿದ್ದು, ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಶಿಕಾರಿಪುರ ತಾಲೂಕಿನಲ್ಲಿ ಪೊಲೀಸರು 144 ಸೆಕ್ಷನ್ ಜಾರಿಗೊಳಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಶಿಕಾರಿಪುರದ ಮನೆಗೆ ಕಲ್ಲು ತೂರಾಟ ನಡೆಸಲಾಗಿದೆ. ಎಸ್ಸಿ ಸಮುದಾಯದ ಮೀಸಲಾತಿ ತೆಗೆದು ಒಳ ಪಂಗಡಗಳಿಗೆ ಹಂಚಿಕೆ ಮಾಡಿರುವುದನ್ನು ವಿರೋಧಿಸಿ ವಿವಿಧ ಸಮುದಾಯಗಳ ಮಹಿಳೆಯರು ಸೇರಿದಂತೆ ನೂರಾರು ಮಂದಿ ಯಡಿಯೂರಪ್ಪ ಮನೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದರು. ಇದೇ ವೇಳೆ, ಯಡಿಯೂರಪ್ಪ ಜನ್ಮದಿನದ ಅಂಗವಾಗಿ ನೀಡಿದ್ದ ಸೀರೆಗಳನ್ನು ಪ್ರತಿಭಟನಾಕಾರರು ಬೆಂಕಿ ಹಾಕಿ ಸುಟ್ಟಿದ್ದಾರೆ.

ಪ್ರತಿಭಟನೆ ಹಿನ್ನೆಲೆಯಲ್ಲಿ ಪೊಲೀಸರು ಸರ್ಪಗಾವಲು ಹಾಕಿದ್ದರು. ಆದರೆ ಪೊಲೀಸರಿದ್ದ ಜಾಗಕ್ಕೇ ಪ್ರತಿಭಟನೆ ನಡೆಸುತ್ತಿದ್ದಲ್ಲಿಂದ ಜನರು ಕಲ್ಲು ತೂರಿದ್ದಾರೆ. ಇದರಿಂದ ಪೊಲೀಸರು ಲಾಠಿ ಕೈಗೆತ್ತಿಕೊಂಡಿದ್ದು, ಲಾಠಿ ಬೀಸುತ್ತಾ ಮುನ್ನುಗ್ಗಿದ್ದಾರೆ. ಲಾಠಿ ಏಟಿಗೆ ಹಲವಾರು ಮಂದಿ ಗಾಯಗೊಂಡಿದ್ದಾರೆ. ಪೊಲೀಸರ ವಿರುದ್ಧ ಜನರು ಆಕ್ರೋಶಗೊಂಡಿದ್ದರಿಂದ ಮತ್ತಷ್ಟು ಹಿಂಸಾಚಾರ ನಡೆಯುವ ಸೂಚನೆ ಹಿನ್ನೆಲೆಯಲ್ಲಿ ಇಡೀ ಶಿಕಾರಿಪುರ ತಾಲೂಕಿನಲ್ಲಿ ಸೆಕ್ಷನ್ ಹಾಕಲಾಗಿದೆ.

ಎರಡು ದಿನಗಳ ಹಿಂದಷ್ಟೇ ರಾಜ್ಯ ಸರಕಾರ ಪರಿಶಿಷ್ಟ ಸಮುದಾಯಕ್ಕಿದ್ದ 17 ಪರ್ಸೆಂಟ್ ಮೀಸಲಾತಿಯನ್ನು ವಿಭಾಗಿಸಿ ಒಳ ಮೀಸಲಾತಿ ನೀಡಿತ್ತು. ಬೋವಿ, ಲಂಬಾಣಿ, ಕೊರಮ, ಅರೆ ಅಲೆಮಾರಿ ಸಮುದಾಯಕ್ಕೆ ಪ್ರತ್ಯೇಕ ಒಳ ಮೀಸಲಾತಿ ನೀಡಿದ್ದು ಕೆಲವು ಸಮುದಾಯಗಳ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನು ವಿರೋಧಿಸಿ ಬೋವಿ, ಲಂಬಾಣಿ ಸೇರಿದಂತೆ ಕೆಲವು ಸಮುದಾಯದ ಜನರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ, ಹಿಂಸಾಚಾರ ನಡೆದಿದ್ದು ಪೊಲೀಸರು ಮತ್ತು ಯಡಿಯೂರಪ್ಪ ನಿವಾಸದ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

Protesters on Monday allegedly pelted stones at former Karnataka Chief Minister and BJP leader BS Yeddyurappa’s house in Shivamogga’s Shikaripura. The protests were held by the Banjara Community opposing the internal reservation recommended by the state government to the Centre.Protesters reportedly clashed with police deployed at Yediyurappa’s residence, TV9 Kannada reported. Some policemen were injured after protesters threw stones and slippers at them.