ನನ್ನ ಅಪ್ಪನನ್ನು ಯಾಕೆ ಮರೆತಿರಿ? ಅವರ ಕೊಡುಗೆ ಕ್ಷುಲ್ಲಕವೇ? ಬಿಜೆಪಿ ಸರ್ಕಾರಕ್ಕೆ ದಿ. ಅನಂತ ಕುಮಾರ್ ಪುತ್ರಿ ಪ್ರಶ್ನೆ 

28-03-23 09:48 pm       Bangalore Correspondent   ಕರ್ನಾಟಕ

ರಾಜಧಾನಿ ಬೆಂಗಳೂರಿನ ರಸ್ತೆಗಳಿಗೆ ಇತ್ತೀಚೆಗೆ ನಟರ ಹೆಸರುಗಳನ್ನು ಇಡುವ ಹೊಸ ಟ್ರೆಂಡ್ ಆರಂಭವಾಗಿರುವ ನಡುವೆಯೇ ಬಿಜೆಪಿಯ ಮಾಜಿ ಸಚಿವ, ದಿವಂಗತ ಅನಂತ್ ಕುಮಾರ್ ರವರ ಪುತ್ರಿ ವಿಜೇತಾ ಅನಂತ್ ಕುಮಾರ್ ಈ ಬಗ್ಗೆ ನೋವಿನ ಧ್ವನಿ ಎತ್ತಿದ್ದು, ನನ್ನ ಅಪ್ಪನನ್ನು ಮರೆತಿರಾ ಎಂದು ಬಿಜೆಪಿ ನಾಯಕರನ್ನು ಪ್ರಶ್ನಿಸಿದ್ದಾರೆ. 

ಬೆಂಗಳೂರು, ಮಾ.28 : ರಾಜಧಾನಿ ಬೆಂಗಳೂರಿನ ರಸ್ತೆಗಳಿಗೆ ಇತ್ತೀಚೆಗೆ ನಟರ ಹೆಸರುಗಳನ್ನು ಇಡುವ ಹೊಸ ಟ್ರೆಂಡ್ ಆರಂಭವಾಗಿರುವ ನಡುವೆಯೇ ಬಿಜೆಪಿಯ ಮಾಜಿ ಸಚಿವ, ದಿವಂಗತ ಅನಂತ್ ಕುಮಾರ್ ರವರ ಪುತ್ರಿ ವಿಜೇತಾ ಅನಂತ್ ಕುಮಾರ್ ಈ ಬಗ್ಗೆ ನೋವಿನ ಧ್ವನಿ ಎತ್ತಿದ್ದು, ನನ್ನ ಅಪ್ಪನನ್ನು ಮರೆತಿರಾ ಎಂದು ಬಿಜೆಪಿ ನಾಯಕರನ್ನು ಪ್ರಶ್ನಿಸಿದ್ದಾರೆ. 

ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, “ನನ್ನ ಅಪ್ಪ (ಅನಂತ್ ಕುಮಾರ್) 1987ರಲ್ಲಿ ಬಿಜೆಪಿಯನ್ನು ವಿದ್ಯುಕ್ತವಾಗಿ ಸೇರ್ಪಡೆಯಾದರು. ಅಲ್ಲಿಂದ ತಮ್ಮ ಕೊನೆಯ ಉಸಿರಿನವರೆಗೆ ಅವರು ಬಿಜೆಪಿಗಾಗಿಯೇ ದುಡಿದರು. ಅನೇಕ ರಸ್ತೆಗಳಿಗೆ, ರೈಲು ಮಾರ್ಗಗಳಿಗೆ ಹಲವಾರು ಸಾಧಕರ ಹೆಸರಿಡುತ್ತಿದ್ದೀರಿ. ಹಲವಾರು ಯೋಜನೆಗಳ ಉದ್ಘಾಟನಾ ಭಾಷಣಗಳಲ್ಲಿ ಬಿಜೆಪಿಗಾಗಿ ದುಡಿದವರನ್ನು ಸ್ಮರಿಸುತ್ತಿದ್ದೀರಿ. ಆದರೆ, ಬಿಜೆಪಿಗಾಗಿ ಜೀವನಪೂರ್ತಿಯಾಗಿ ದುಡಿದ, ಪಕ್ಷಕ್ಕೆ ಅನೇಕ ಸೇವೆಗಳನ್ನು ಮಾಡಿದ ನನ್ನ ಅಪ್ಪನ ಹೆಸರು ಮಾತ್ರ ನಿಮಗೆ ನೆನಪಿಗೆ ಬರುವುದಿಲ್ಲವೇ?’’ ಎಂದು ಅವರು ಪ್ರಶ್ನಿಸಿದ್ದಾರೆ.

ಅಲ್ಲದೆ, “ವಿವಿಧ ಕಾರ್ಯಕ್ರಮಗಳಲ್ಲಿ ನನ್ನ ಅಪ್ಪನ ಹೆಸರನ್ನು ನೆಪಮಾತ್ರಕ್ಕೂ ಸ್ಮರಿಸದೇ ಇರುವುದು ಸರಿಯೇ ಅಥವಾ ನನ್ನ ಅಪ್ಪನ ಸೇವೆಯು ಕ್ಷುಲ್ಲಕವಾದದ್ದು ಎಂದು ತಿಳಿಯಲಾಗಿದೆಯೇ? ಅವರು ಇಂದಿಗೂ ಲಕ್ಷಾಂತರ ಜನರ ಹೃದಯದಲ್ಲಿ ಜೀವಂತವಾಗಿದ್ದಾರೆ. ಅವರನ್ನು ಮರೆತ ಪಕ್ಷವು ಒಮ್ಮೆ ಆತ್ಮವಿಮರ್ಶೆ ಮಾಡಿಕೊಳ್ಳಲಿ’’ ಎಂದು ಅವರು ಹೇಳಿದ್ದಾರೆ.

ಅವರ ಈ ಬೇಸರಕ್ಕೆ ಕಾರಣವಾಗಿದ್ದು ಪತ್ರಿಕೆಯೊಂದರಲ್ಲಿ ಬಂದಿರುವ ಅನಂತ್ ಕುಮಾರ್ ಬಗೆಗಿನ ವರದಿ. ಆ ಪತ್ರಿಕೆಯ ವರದಿಯನ್ನು ಟ್ವೀಟ್ ಮಾಡಿರುವ ವಿಜೇತಾ, ಬಿಜೆಪಿ ಸರ್ಕಾರಕ್ಕೆ ಪ್ರಶ್ನೆ ಮುಂದಿಟ್ಟಿದ್ದಾರೆ. ಸೋಮವಾರಷ್ಟೇ, ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಗೆ ನಟ ಅಂಬರೀಷ್ ಅವರ ಹೆಸರನ್ನು ಇಡಲಾಗಿದೆ. ಇತ್ತೀಚೆಗೆ 12 ಕಿ.ಮೀ. ಉದ್ದದ ಹೊರವರ್ತುಲ ರಸ್ತೆಗೂ ಹೆಸರಿಡಲಾಗಿದೆ. ಜಯನಗರದ ರಸ್ತೆಗೆ ನಟ ವಜ್ರಮುನಿಯವರ ಹೆಸರನ್ನು ಇಡಲಾಗಿದೆ. ಆದರೆ, ಕರ್ನಾಟಕದಲ್ಲಿ ಬಿಜೆಪಿಯನ್ನು ಬೇರು ಮಟ್ಟದಿಂದ ಕಟ್ಟಿದ, ಕೇಂದ್ರದೊಂದಿಗೆ ಕರ್ನಾಟಕದ ಕೊಂಡಿಯಾಗಿ ದಶಕಗಳ ಕಾಲ ಕಾರ್ಯನಿರ್ವಹಿಸಿದ ಕೇಂದ್ರದ ಮಾಜಿ ಸಚಿವ ದಿ. ಅನಂತ ಕುಮಾರ್ ಅವರ ಹೆಸರನ್ನು ಮಾತ್ರ ಈ ರೀತಿ ಯಾವುದೇ ಪ್ರಮುಖ ರಸ್ತೆಗಳಿಗೆ ಇಡುತ್ತಿಲ್ಲ” ಎಂದು ವರದಿಯಲ್ಲಿ ಹೇಳಲಾಗಿತ್ತು. 

‘ನಗರದ ಪ್ರಮುಖ ರಸ್ತೆ ಅಥವಾ ವೃತ್ತಗಳಿಗೆ ಅವರ ಹೆಸರನ್ನು ಇಡಬಹುದಾಗಿತ್ತು. ಆದರೆ, ಈ ರೀತಿ ಅವರನ್ನು ನಿರ್ಲಕ್ಷ್ಯ ಮಾಡುತ್ತಿರುವುದೇಕೆ ಎಂದು ಬಿಜೆಪಿ ಕಾರ್ಯಕರ್ತರು ಕೇಳುತ್ತಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಹತ್ತು ಹಲವು ಯೋಜನೆಗಳನ್ನು ಅನಂತ್ ಕುಮಾರ್ ಅವರು ರಾಜ್ಯಕ್ಕೆ ತಂದಿದ್ದರು’ ಎಂದು ವರದಿಯಲ್ಲಿ ಹೇಳಲಾಗಿದೆ.

Former union minister of chemicals and fertilizers in Prime Minister Narendra Modi's cabinet, Ananth Kumar served in Bharatiya Janata Party (BJP) for over 30 years before passing away in 2018. Now, Ananth's daughter Vijeta has taken to Twitter and claimed that BJP has forgotten about the contributions made by her father to the party. She went on urge the party for 'self-reflection.'