ಬ್ರೇಕಿಂಗ್ ನ್ಯೂಸ್
28-03-23 10:39 pm HK News Desk ಕರ್ನಾಟಕ
ಮಂಡ್ಯ, ಮಾ.28: ಕಾಂಗ್ರೆಸ್ ವತಿಯಿಂದ ಮಂಡ್ಯ ತಾಲೂಕಿನ ಬೇವಿನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬಸ್ ಮೇಲಿಂದಲೇ ಜಾನಪದ ಕಲಾವಿದರಿಗೆ ಹಣವನ್ನು ಎರಚುವ ಮೂಲಕ ಚುನಾವಣೆ ಸಂದರ್ಭದಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ.
ಮಂಡ್ಯ ತಾಲೂಕಿನ ಹಾಗೂ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬೇವಿನಹಳ್ಳಿ ಗ್ರಾಮದಲ್ಲಿ ಇಂದು ಅದ್ಧೂರಿಯಾಗಿ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಇನ್ನು ಅಲ್ಲಿನ ಅಭ್ಯರ್ಥಿ ರಮೇಶ್ ಬಂಡಿಸಿದ್ದೇಗೌಡ ಅವರ ಪರವಾಗಿ ಬೇವಿನಹಳ್ಳಿಯಲ್ಲಿ ಬಸ್ ಮೇಲಿಂದಲೇ ರೋಡ್ ಶೋ ಮೂಲಕ ಭರ್ಜರಿ ಚುನಾವಣಾ ಪ್ರಚಾರ ಮಾಡುತ್ತಿದ್ದರು. ಈ ವೇಳೆ ಬೇವಿನಹಳ್ಳಿ ಬಸ್ ನಿಲ್ದಾಣದ ಬಳಿ ಹಲವು ಜಾನಪದ ಕಲಾತಂಡಗಳು ಪೂಜಾಕುಣಿತ ಹಾಗೂ ಪಟ ಕುಣಿತದ ದೇವರು ಹೊತ್ತುಕೊಂಡು ಕುಣಿಯುತ್ತಿದ್ದವು. ಇದನ್ನು ನೊಡಿದ ಡಿ.ಕೆ. ಶಿವಕುಮಾರ್ ಬಸ್ ಮೇಲಿಂದಲೇ ನೋಟಿನ ಕಂತೆಯನ್ನು ತೆರೆದು ಕಲಾ ತಂಡಗಳತ್ತ ಎಸೆದು ದರ್ಪ ತೋರಿದ್ದಾರೆ.
500 ಮುಖಬೆಲೆಯ ನೋಟುಗಳು;
ಇನ್ನು ಬಸ್ ಮೇಲಿಂದಲೇ ರೋಡ್ ಶೋ ಮೂಲಕ ಜನರತ್ತ ಕೈಬೀಸಿ ಮಾತನಾಡುತ್ತಾ ಸಾಗುತ್ತಿದ್ದ ವೇಳೆ ಡಿ.ಕೆ. ಶಿವಕುಮಾರ್ 500 ರೂ. ಮುಖಬೆಲೆಯ ಹಲವು ನೋಟುಗಳನ್ನು ಎರಚಿದ್ದಾರೆ. ಇನ್ನು ಜಾನಪದ ಕಲಾವಿದರಿಗೆ ಈ ಹಣ ಎರಚಲಾಗಿದೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದರೂ, ಕಲಾವಿದರು ಪೂಜಾ ಕುಣಿತದ ದೇವರು ಹೊತ್ತುಕೊಂಡಿದ್ದು, ಇದು ಕಾಂಗ್ರೆಸ್ ಕಾರ್ಯಕರ್ತರ ಪಾಲಾಗಿದೆ ಎಂದು ಸ್ಥಳೀಯರು ಹಾಗೂ ಕಲಾತಂಡದ ಸದಸ್ಯರು ಹೇಳಿದ್ದಾರೆ. ಆದರೆ, ಕಲಾವಿದರ ಮೇಲೆ ಹಣವನ್ನು ಎರಚಿ ದರ್ಪ ತೋರಿಸಿದ ಡಿ.ಕೆ. ಶಿವಕುಮಾರ್ ಅವರ ಮೇಲೆ ಸ್ಥಳೀಯ ಮತದಾರರು ಮಾತ್ರ ಆಕ್ರೋಶ ಹೊರಹಾಕಿದ್ದಾರೆ.
ಅಂದು ರಮೇಶ್ ಕುಮಾರ್ ಅವರು ನಾಲ್ಕು ತಲೆಮಾರಿಗಾಗುವಷ್ಟು ನಾವು ಕಾಂಗ್ರೆಸ್ನಿಂದ ಪಡೆದಿದ್ದೇವೆ ಎಂದಿದ್ದರು. ಇಂದು ಅದೇ ಕಾಂಗ್ರೆಸ್ಸಿನ ಅಧ್ಯಕ್ಷ @DKShivakumar ಅವರು ಪ್ರಜಾದ್ರೋಹಿ ಯಾತ್ರೆಯಲ್ಲಿ ಹಣವನ್ನು ಎಸೆಯುತ್ತಿರುವುದನ್ನು ನೋಡಿದರೆ ಎಲ್ಲರಿಗೂ ಅರ್ಥ ಆಗುತ್ತದೆ.#ಪ್ರಜಾದ್ರೋಹಯಾತ್ರೆ pic.twitter.com/vG6NaeArES
— BJP Karnataka (@BJP4Karnataka) March 28, 2023
Karnataka Congress president DK Shivakumar, on the campaign trail in Mandya, threw money on people during a rally on Wednesday. In a video, Shivakumar was seen throwing currency notes on people part of a chariot procession near Bevinahalli.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 10:33 pm
Mangalore Correspondent
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm