ಚುನಾವಣೆ ಹಿನ್ನಲೆ ಬೆಂಗಳೂರು ಪೊಲೀಸರ ಭರ್ಜರಿ ಬೇಟೆ ; ಒಂದೇ ದಿನಕ್ಕೆ 1.85 ಕೋಟಿ ರೂ. ನಗದು, 3 ಕೆಜಿ ಚಿನ್ನ, 536 ಸೀರೆ, 504 ಕುಕ್ಕರ್ ವಶಕ್ಕೆ 

29-03-23 05:37 pm       Bangalore Correspondent   ಕರ್ನಾಟಕ

ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಫಲಿತಾಂಶ ಹೊರಬೀಳಲಿದೆ. ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕುರುಡು ಕಾಂಚಾಣ ಸದ್ದು ಜೋರಾಗಿದ್ದು, ಮಾ.28 ಒಂದೇ ದಿನ ಬೆಂಗಳೂರು ಪೊಲೀಸರು ಭರ್ಜರಿ ಬೇಟೆ ಆಡಿದ್ದಾರೆ.

ಬೆಂಗಳೂರು, ಮಾ.29: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಫಲಿತಾಂಶ ಹೊರಬೀಳಲಿದೆ. ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕುರುಡು ಕಾಂಚಾಣ ಸದ್ದು ಜೋರಾಗಿದ್ದು, ಮಾ.28 ಒಂದೇ ದಿನ ಬೆಂಗಳೂರು ಪೊಲೀಸರು ಭರ್ಜರಿ ಬೇಟೆ ಆಡಿದ್ದಾರೆ.

ನಿನ್ನೆ ಒಂದೇ ದಿನಕ್ಕೆ 1.85 ಕೋಟಿ ರೂ. ನಗದು, 3.4 ಕೆಜಿ ಚಿನ್ನಾಭರಣ ಹಾಗೂ 36 ಕೆಜಿ ಬೆಳ್ಳಿಯಾಭರಣಗಳನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇಷ್ಟೇ ಅಲ್ಲದೆ, ಕೋಟ್ಯಾಂತರ ಮೌಲ್ಯದ ಗೃಹೋಪಯೋಗಿ ವಸ್ತುಗಳನ್ನು ಸಹ ಪೊಲೀಸರು ಸೀಜ್​ ಮಾಡಿದ್ದಾರೆ.

ಲಗ್ಗೆರೆಯ ಬಳಿ 1 ಕೋಟಿ ರೂ. ಹಣವನ್ನು ಐಟಿ ಅಧಿಕಾರಿಗಳು ವಶಕ್ಕೆ ಪಡೆದರೆ, ಹಲಸೂರು ಗೇಟ್ ಬಳಿ 35 ಲಕ್ಷ ರೂ., ಎಸ್ ಜೆ ಪಾರ್ಕ್ ಬಳಿ 10 ಲಕ್ಷ ರೂ., ಅಮೃತಹಳ್ಳಿಯ ಬಳಿ 30 ಲಕ್ಷ ರೂ., ಹಾಗೂ ಬೆಂಗಳೂರು ಗಡಿ ಭಾಗದಲ್ಲಿ 10 ಲಕ್ಷ ರೂ. ಹಣವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಕೋರಮಂಗಲದಲ್ಲಿ 504 ಕುಕ್ಕರ್​ಗಳು, ದೇವನಹಳ್ಳಿಯ ಬಳಿ 536 ಸೀರೆಗಳು, ಡಿಜೆ ಹಳ್ಳಿಯ ಬಳಿ ಲಕ್ಷಾಂತರ ಮೌಲ್ಯದ ಕೊಕೇನ್ ಅನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಸಾಕಷ್ಟು ಹಣ, ಚಿನ್ನಾಭರಣ ಹಾಗೂ ವಸ್ತುಗಳು ಅಕ್ರಮ ಸಾಗಾಟ ನಡೆಯುತ್ತಿದ್ದು, ಪೊಲೀಸ್​ ಇಲಾಖೆ ತೀವ್ರ ಕಟ್ಟೆಚ್ಚರ ವಹಿಸಿದೆ.

In the wake of the approaching assembly polls, state police have stepped up security to put an end to election irregularities. For this, check posts have been made across the state and every vehicle is being inspected.