ಬ್ರೇಕಿಂಗ್ ನ್ಯೂಸ್
03-04-23 08:55 pm HK News Desk ಕರ್ನಾಟಕ
ಹಾಸನ, ಎ.3: ಹಿಂದು ಸಂಘಟನೆಗಳ ವಿರೋಧ ಮಧ್ಯೆಯೂ ಬೇಲೂರು ಚೆನ್ನಕೇಶವ ದೇವಸ್ಥಾನದ ರಥೋತ್ಸವ ವೇಳೆ ಖುರಾನ್ ಪಠಣಕ್ಕೆ ಹಾಸನ ಜಿಲ್ಲಾಡಳಿತ ಅವಕಾಶ ನೀಡಿದೆ. ರೂಢಿಯಿಂದ ಬಂದ ಪದ್ಧತಿ ಪ್ರಕಾರ ಖುರಾನ್ ಪಠಣ ಆಚರಣೆಗೆ ಕ್ರಮ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಆದರೆ ರಥದ ಎದುರಿನ ಬದಲಾಗಿ ಆರು ವರ್ಷಗಳ ಹಿಂದೆ ಆಚರಣೆಯಲ್ಲಿದ್ದ ದೇಗುಲದ ಮೆಟ್ಟಿಲ ಮೇಲೆ ಖುರಾನ್ ಓದಲು ಅವಕಾಶ ನೀಡಿದ್ದು ಎ.4ರಂದು ರಥೋತ್ಸವಕ್ಕೂ ಮೊದಲು ಮೇದೂರಿನ ಖಾಜಿ ಸಾಹೇಬರ ಕುಟುಂಬ ಸದಸ್ಯರು ಖುರಾನ್ ಪಠಣ ಮಾಡಲಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಹಾಸನ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಮಾಹಿತಿ ನೀಡಿದ್ದಾರೆ.
ಹಿಂದಿನಿಂದ ನಡೆದುಕೊಂಡು ಬಂದ ಆಚರಣೆಯಂತೆ ದೇಗುಲದ ಮ್ಯಾನ್ಯುಯಲ್ ನಲ್ಲಿ ಮುಸಲ್ಮಾನ್ ಸಮುದಾಯದ ಖಾಜಿ ಸಾಹೇಬರಿಂದ ದೇವರಿಗೆ ವಂದನೆ ಸಲ್ಲಿಸುವ ಉಲ್ಲೇಖ ಇದೆ. ಹಾಗಾಗಿ ರೂಢಿ ಸಂಪ್ರದಾಯದಂತೆ ಖುರಾನ್ ಪಠಣಕ್ಕೆ ಅವಕಾಶ ನೀಡುತ್ತೇವೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಇದೇ ವೇಳೆ, ದೇವಸ್ಥಾನದ ರಥೋತ್ಸವ ಸಂದರ್ಭದಲ್ಲಿ ದೇಗುಲದಲ್ಲಿ ಖುರಾನ್ ಪಠಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಹಿಂದೂ ಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದು ಈ ಹಿನ್ನೆಲೆಯಲ್ಲಿ ಪೊಲೀಸರ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಈ ಬಗ್ಗೆ ರಾಜ್ಯ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಸುತ್ತೋಲೆಯಂತೆ ಕ್ರಮ ಕೈಗೊಳ್ಳಲಾಗಿದೆ.
ಸುತ್ತೋಲೆಯೇ ಗೊಂದಲಕಾರಿ
ಆದರೆ ಧಾರ್ಮಿಕ ದತ್ತಿ ಇಲಾಖೆಯ ಸುತ್ತೋಲೆಯೇ ಗೊಂದಲದಿಂದ ಕೂಡಿದ್ದು ಇಲಾಖೆ ಕ್ರಮದಿಂದ ಅಧಿಕಾರಿಗಳು ಇಕ್ಕಟ್ಟಿಗೆ ಸಿಲುಕಿದ್ದಾರೆ. ಖುರಾನ್ ಪಠಣ ಬೇಕೆ, ಬೇಡವೇ ಎಂಬ ಬಗ್ಗೆ ಸ್ಪಷ್ಟ ನಿರ್ದೇಶನ ನೀಡಿಲ್ಲ. ಮ್ಯಾನ್ಯುಯಲ್ ನಲ್ಲಿ ದೇಗುಲಕ್ಕೆ ಬ್ರಾಹ್ಮಣರ ಜೊತೆಗೆ ಇತರೆ ವರ್ಗದ ಭಕ್ತರು ಇದ್ದಾರೆ. ರಥೋತ್ಸವ ಕಾಲದಲ್ಲಿ ಮುಸಲ್ಮಾನ್ ಜನಗಳ ಪ್ರತಿನಿಧಿಯಾಗಿ ಖಾಜಿ ಸಾಹೇಬರು ಬಂದು ದೇವಸ್ಥಾನದಿಂದ ಮರ್ಯಾದೆ ಸ್ವೀಕಾರ ಮಾಡಿ ದೇವರಿಗೆ ವಂದನೆ ಸಲ್ಲಿಸುವ ವಾಡಿಕೆ ಇದೆ ಎಂದು ಉಲ್ಲೇಖಿಸಲಾಗಿದೆ.
ಹಿಂದು ಸಂಘಟನೆಗಳ ವಿರೋಧ ಹಿನ್ನೆಲೆಯಲ್ಲಿ ಮಾರ್ಚ್ 30ರಂದು ಹಿರಿಯ ಆಗಮ ಪಂಡಿತರು ದೇಗುಲಕ್ಕೆ ಬಂದು ನೀಡಿದ್ದ ವರದಿ ಆಧರಿಸಿ ಹೊಸ ಸುತ್ತೋಲೆ ಹೊರಡಿಸಲಾಗಿದೆ ಎನ್ನಲಾಗಿದೆ. ಬೇಲೂರು ಶ್ರೀ ಚನ್ನಕೇಶವ ದೇವಾಲಯದ ಕೈಪಿಡಿಯಂತೆ ರಥೋತ್ಸವ ದಿನದಂದು ಮೇದೂರಿನ ಖಾಜಿ ಸಾಹೇಬರ ಕುಟುಂಬ ಸದಸ್ಯರು ದೇಗುಲದಿಂದ ಗೌರವ ಕಾಣಿಕೆ ಸ್ವೀಕಾರ ಮಾಡಬೇಕು. ಧಾನ್ಯ ಕಾಣಿಕೆ ಸ್ವೀಕರಿಸಿ ದೇವರಿಗೆ ವಂದಿಸಬೇಕು ಎಂದು ಸುತ್ತೋಲೆಯಲ್ಲಿ ಸೂಚನೆ ನೀಡಲಾಗಿದೆ. 1997 ಅಧಿನಿಯಮ ಸೆಕ್ಷನ್ 58 ಪ್ರಕಾರ, ದೇವಾಲಯದಲ್ಲಿ ಹಿಂದಿನಿಂದಲೂ ನಡೆದು ಬರುತ್ತಿರುವ ಪದ್ಧತಿಗಳಲ್ಲಿ ಯಾವುದೇ ವ್ಯತ್ಯಾಸ ಆಗದಂತೆ ಕ್ರಮ ವಹಿಸಿ ಎಂದು ಸೂಚಿಸಲಾಗಿದೆ. ಆದರೆ ಖುರಾನ್ ಓದಲು ಅವಕಾಶ ನೀಡಿದರೆ ಹಿಂದು ಪರ ಸಂಘಟನೆಗಳು ಹೋರಾಟದ ಎಚ್ಚರಿಕೆ ನೀಡಿವೆ.
Belur MLA K.S. Lingesh said the Channakeshava Rathotsava (annual chariot festival) in Belur will be held as per the temple manual. There will be no change in the annual festival that will begin on April 4. Speaking to mediapersons in Hassan on April 3, the MLA said that recitation of the Quran (Koran) had been going on for many years.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 10:33 pm
Mangalore Correspondent
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm