ಬ್ರೇಕಿಂಗ್ ನ್ಯೂಸ್
04-04-23 11:02 pm HK News Desk ಕರ್ನಾಟಕ
ಹಾಸನ, ಎ.4 : ಅತ್ತ ಕೋಲು ಮುರಿಯಲೂ ಇಲ್ಲ, ಇತ್ತ ಹಾವು ಸಾಯಲೂ ಇಲ್ಲ. ಹೌದು.. ಇತಿಹಾಸ ಪ್ರಸಿದ್ಧ ಬೇಲೂರು ಚೆನ್ನಕೇಶವ ಸನ್ನಿಧಿಯಲ್ಲಿ ರಥೋತ್ಸವವೂ ನಡೀತು. ಸಂಪ್ರದಾಯಕ್ಕೆ ತಕ್ಕಂತೆ ಮುಸ್ಲಿಮರ ಪ್ರಾರ್ಥನೆಯೂ ನೆರವೇರಿತು. ಇವರು ಗೆಲ್ಲಲಿಲ್ಲ, ಅವರು ಸೋಲಲಿಲ್ಲ ಅನ್ನೋ ಹಾಗೆ.
ಹಿಂದು ಸಂಘಟನೆಗಳ ಬೆದರಿಕೆಯ ಕಾರಣ ರಥೋತ್ಸವ ನಡೆಯುತ್ತಾ ಅಥವಾ ಗಲಾಟೆ ತಲೆದೋರುತ್ತಾ ಎನ್ನುವ ಆತಂಕ ಎದುರಾಗಿತ್ತು. ಇದಕ್ಕಾಗಿ ಅರೆ ಮಿಲಿಟರಿ ಪಡೆಯ ಬಂದೋಬಸ್ತ್ ಮಾಡಲಾಗಿತ್ತು. ರಥೋತ್ಸವ ಸಂದರ್ಭದಲ್ಲೇ ಖುರಾನ್ ಪಠಣ ಮಾಡಲು ಮುಸ್ಲಿಂ ಮುಖಂಡರೂ ಆಗಮಿಸಿದ್ದರು. ಹಿಂದಿನಿಂದ ನಡೆದುಬಂದ ಪದ್ಧತಿಯೆಂದು ಜಿಲ್ಲಾಡಳಿತವೂ ಒಪ್ಪಿಗೆ ಸೂಚಿಸಿತ್ತು. ಆದರೆ ದೇವಸ್ಥಾನದ ಮುಂದೆ ಮುಸ್ಲಿಮರ ಪ್ರಾರ್ಥನೆ ನೆರವೇರಿದೆ, ಜೊತೆಗೆ ರಥೋತ್ಸವವೂ ಜರಗಿದೆ.
ಚೆನ್ನಕೇಶವ ರಥೋತ್ಸವದಲ್ಲಿ 'ಕುರಾನ್ ಪಠಣ' ಮಾಡಬಾರದು ಎಂದು ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದವು. ಪ್ರತಿ ವರ್ಷದಂತೆ ಕುರಾನ್ ಪಠಣ ಮಾಡಲು ಬಂದಿದ್ದ, ದೊಡ್ಡ ಮೇದೂರು ಗ್ರಾಮದ ಸೈಯದ್ ಸಜಾದ್ ಭಾಷಾ ಖಾದ್ರಿ ಈ ಬಾರಿ ಜಿಲ್ಲಾಧಿಕಾರಿ ಸೂಚನೆಯಂತೆ ದೇವಸ್ಥಾನದ ಮುಂಭಾಗದ ಮೆಟ್ಟಿಲಿನ ಬಳಿ ನಿಂತು ಪ್ರಾರ್ಥನೆ ಸಲ್ಲಿಸಿದರು. ಆದರೆ ಹಿಂದು ಸಂಘಟನೆಗಳ ಕಾರ್ಯಕರ್ತರು ಜೈಶ್ರೀರಾಮ್ ಘೋಷಣೆ ಕೂಗಿದ್ದಾರೆ. ಹೀಗಾಗಿ ಇಸ್ಲಾಂ ಧರ್ಮದ ರೀತಿಯಲ್ಲಿ ಶ್ಲೋಕ ಹೇಳಿ ನಮಸ್ಕರಿಸಿ ಸಂಕ್ಷಿಪ್ತವಾಗಿ ಮುಸ್ಲಿಂ ಮುಖಂಡರು ಪ್ರಾರ್ಥನೆ ಮುಗಿಸಿದ್ದಾರೆ, ಈ ಹಿಂದಿನಂತೆ ಖುರಾನ್ ಪಠಣ ಮಾಡಲು ಸಾಧ್ಯವಾಗಿಲ್ಲ.
ದೊಡ್ಡ ಮೇದೂರಿನ ಖಾಜಿ ಸಾಹೇಬರು ಶ್ಲೋಕ ಹೇಳಲು ಮುಂದಾದ ವೇಳೆ ವಿವಿಧ ಹಿಂದು ಪರ ಸಂಘಟನೆಗಳ ಮುಖಂಡರು 'ಜೈ ಶ್ರೀರಾಮ್... ನಾವೆಲ್ಲ ಹಿಂದೂ, ನಾವೆಲ್ಲ ಒಂದು' ಎಂಬ ಘೋಷಣೆಗಳನ್ನು ಕೂಗಿದರು. ಗೊಂದಲದ ವಾತಾವರಣ ನಿರ್ಮಾಣ ಆದರೂ, ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಶ್ಲೋಕ ಹೇಳುವುದಕ್ಕೆ ಅವಕಾಶ ನೀಡಿದ ಜಿಲ್ಲಾಡಳಿತದ ವಿರುದ್ಧ ಹಿಂದೂ ಸಂಘಟನೆಗಳು ಧಿಕ್ಕಾರ ಕೂಗುವ ಮೂಲಕ ಪ್ರತಿಭಟನೆ ನಡೆಸಿದ್ದೂ ಆಯ್ತು.
ಈ ಎಲ್ಲದರ ಮಧ್ಯೆ ಬೇಲೂರು ಚೆನ್ನಕೇಶವ ರಥೋತ್ಸವ ಹೊರಗಡೆ ವಿಜೃಂಭಣೆಯಿಂದ ನಡೆದಿದೆ. ರಥೋತ್ಸವದಲ್ಲಿ ಲಕ್ಷಾಂತರ ಭಕ್ತರು ಭಾಗಿಯಾದರು. ಒಳಗಡೆ ಗೊಂದಲ ಇದ್ದರೂ, ಹೊರಗಡೆ ಎಲ್ಲವೂ ಸಾಂಗವಾಗಿ ನಡೆಯಿತು.
Due to threats from Hindu organisations, there were apprehensions whether the rathotsava would take place or there would be a ruckus. A paramilitary force was deployed for this purpose. Muslim leaders had also come to recite the Quran during the rathotsava. The district administration had also accepted it as a practice from the past. But in front of the temple, muslim prayers were offered and a rathotsava was also held.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 10:33 pm
Mangalore Correspondent
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm