ಅನ್ನ ಕೊಟ್ಟ ಅಜ್ಜ ಸತ್ತಾಗ ಮುತ್ತು ಕೊಟ್ಟು ಕಣ್ಣೀರು ಹಾಕಿದ ಕೋತಿ ; ಮೂಕ ಪ್ರಾಣಿಗೂ ಇದೆ ನೋವು, ನಲಿವು, ಅನ್ನದ ಋಣ ! 

10-04-23 12:47 pm       HK News Desk   ಕರ್ನಾಟಕ

ಮನುಷ್ಯ ಸತ್ತಾಗ ಸಂಬಂಧಿಕರು, ಸ್ನೇಹಿತರು ಅಂತಿಮ ಗೌರವ ಸಲ್ಲಿಸುವುದು ನಡೆದುಕೊಂಡು ಬಂದ ವಾಡಿಕೆ. ಆದರೆ ಇಲ್ಲೊಂದು ಮಂಗ ತನಗೆ ಅನ್ನ ಹಾಕುತ್ತಿದ್ದ ವ್ಯಕ್ತಿ ಸತ್ತಾಗ ಅಂತಿಮ ದರ್ಶನಕ್ಕೆ ಬಂದಿದ್ದಲ್ಲದೆ, ಆತನ ತಲೆಗೆ ಮುತ್ತುಕೊಟ್ಟು ವಿದಾಯ ಹೇಳಿದ್ದು ನೋಡಿದವರನ್ನು ಬೆರಗಾಗಿಸಿದೆ. 

ವಿಜಯನಗರ, ಎ.10: ಮನುಷ್ಯ ಸತ್ತಾಗ ಸಂಬಂಧಿಕರು, ಸ್ನೇಹಿತರು ಅಂತಿಮ ಗೌರವ ಸಲ್ಲಿಸುವುದು ನಡೆದುಕೊಂಡು ಬಂದ ವಾಡಿಕೆ. ಆದರೆ ಇಲ್ಲೊಂದು ಮಂಗ ತನಗೆ ಅನ್ನ ಹಾಕುತ್ತಿದ್ದ ವ್ಯಕ್ತಿ ಸತ್ತಾಗ ಅಂತಿಮ ದರ್ಶನಕ್ಕೆ ಬಂದಿದ್ದಲ್ಲದೆ, ಆತನ ತಲೆಗೆ ಮುತ್ತುಕೊಟ್ಟು ವಿದಾಯ ಹೇಳಿದ್ದು ನೋಡಿದವರನ್ನು ಬೆರಗಾಗಿಸಿದೆ. 

ವಿಜಯನಗರ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಹೊಟೆಲ್ ಉದ್ಯಮಿ ಶವಕ್ಕೆ ಮಂಗ ಮುತ್ತು ಕೊಟ್ಟು ನಮನ ಸಲ್ಲಿಸಿ ತನಗೆ ಅನ್ನ ಕೊಟ್ಟವರ ಋಣ ತೀರಿಸಿದೆ. ಹಗರಿಬೊಮ್ಮನಹಳ್ಳಿ ಪಟ್ಟಣದ ಹೊಟೇಲ್ ಉದ್ಯಮಿ ಪರಶುರಾಮ ಪೋಮುಸಾ ಹಬೀಬ್ ಸಾವಜಿ ಎಂಬ ವೃದ್ಧ ವ್ಯಕ್ತಿ ಏಪ್ರಿಲ್ 3 ರಂದು ಇಹಲೋಕ ತ್ಯಜಿಸಿದ್ದರು. ಸಾವಜಿ ಸಣ್ಣಂದಿನಿಂದಲೂ ಪ್ರಾಣಿ - ಪಕ್ಷಿ ಪ್ರಿಯರಾಗಿದ್ದರು. ತಮ್ಮ ಜೀವನದುದ್ದಕ್ಕೂ ಪ್ರಾಣಿ ಪಕ್ಷಿಗಳಿಗೆ ಕೈಲಾದ ನೆರವು ನೀಡುತ್ತಿದ್ದರು. ಅದರಲ್ಲೂ ಈ ಕೋತಿಗೆ ನಿತ್ಯವೂ ಹೊಟೇಲಿನಿಂದ ಹಣ್ಣು, ರೊಟ್ಟಿ ನೀಡಿ ಆರೈಕೆ ಮಾಡುತ್ತಿದ್ದರು. ಮನೆಯ ಬಳಿ ಬರುತ್ತಿದ್ದ ಕೋತಿ ಕಿಟಕಿ ಬಳಿ ಬಂದು ಈ ಅಜ್ಜನನ್ನು ನೋಡುತ್ತಿತ್ತು. ಇದನ್ನು ಗಮನಿಸಿದ ಅಜ್ಜ ಮನೆಯವರಿಗೆ ಹೇಳಿ ಅದಕ್ಕೆ ಆಹಾರ ಕೊಡಿಸುತ್ತಿದ್ದರು. 

ಅಜ್ಜನ ಸೂಚನೆಯಂತೆ ಮನೆಯವರು ಕೋತಿಗೆ ನಿತ್ಯವೂ ಆಹಾರ ನೀಡುತ್ತಿದ್ದರು. ಅದನ್ನು ತಿಂದ ಕೋತಿ ಸಂತೃಪ್ತಿಯಿಂದ ಮರಳುತ್ತಿತ್ತು. ಆದರೆ ಇಂದು ಅಜ್ಜ ಇಹಲೋಕ ತ್ಯಜಿಸಿದ್ದನ್ನು ತಿಳಿದ ಮಂಗ ತನ್ನ ಆಪತ್ಬಾಂಧವ ಆಗಲಿದ್ದಾನೆಂದು ಮರುಗಿದೆ.‌ ಅಲ್ಲದೆ, ನಿತ್ಯ ತನಗೆ ಆಹಾರ ಹಾಕುತ್ತಿದ್ದ ಅಜ್ಜನ ಹಣೆಗೆ ಮುತ್ತು ಕೊಟ್ಟು ವಿದಾಯ ಹೇಳಿದ್ದು ಮಂಗನಿಗೂ ದುಃಖ, ಸಂತಸದ ಭಾವನೆ ಇದೆಯೆಂಬುದನ್ನು ಸಾರಿದೆ. 

ಗೌರವ ಸಲ್ಲಿಸಿದ ಬಳಿಕ ಬಂದಷ್ಟೇ ವೇಗವಾಗಿ ಮಂಗ ಅಲ್ಲಿಂದ ತೆರಳಿದ್ದೂ ಆಗಿದೆ. ಈ ಮೂಲಕ ಅನ್ನ ಕೊಟ್ಟವರನ್ನು ಮುಪ್ಪಿನ ವರೆಗೂ ನೆನೆಯಬೇಕು ಎಂಬ ಸಂದೇಶವನ್ನು ಕೋತಿ ಸಾರಿದೆ. ಇದರ ವಿಡಿಯೋ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದ್ದು ಜನರ ಗಮನ ಸೆಳೆದಿದೆ.

Monkey kisses forehead of dead man during the last rites who feed it with rice, shocks people in Vijayanagara.