ರಾಜ್ಯ ಬಿಜೆಪಿ ಅಭ್ಯರ್ಥಿ ಪಟ್ಟಿ ತಿರಸ್ಕರಿಸಿದ ಹೈಕಮಾಂಡ್ ; ದೊಡ್ಡ ಬದಲಾವಣೆ ಬಯಸಿದ ಮೋದಿ, 50 ಕ್ಷೇತ್ರಗಳಲ್ಲಿ ಮತ್ತೆ ಸರ್ವೆಗಿಳಿದ ಅಮಿತ್ ಷಾ !  

10-04-23 10:05 pm       Bengaluru Correspondent   ಕರ್ನಾಟಕ

ಅಸೆಂಬ್ಲಿ ಚುನಾವಣೆಗೆ ಇನ್ನೇನು ನಾಮಪತ್ರ ಸಲ್ಲಿಕೆ ಕೊನೆಯಾಗಲು ಹತ್ತು ದಿನವಷ್ಟೇ ಬಾಕಿ. ಕಾಂಗ್ರೆಸ್, ಜೆಡಿಎಸ್ ಬಹುತೇಕ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ.

ಬೆಂಗಳೂರು, ಎ.10: ಅಸೆಂಬ್ಲಿ ಚುನಾವಣೆಗೆ ಇನ್ನೇನು ನಾಮಪತ್ರ ಸಲ್ಲಿಕೆ ಕೊನೆಯಾಗಲು ಹತ್ತು ದಿನವಷ್ಟೇ ಬಾಕಿ. ಕಾಂಗ್ರೆಸ್, ಜೆಡಿಎಸ್ ಬಹುತೇಕ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ಆದರೆ ಆಡಳಿತಾರೂಢ ಬಿಜೆಪಿ ಇನ್ನೂ ಅಭ್ಯರ್ಥಿಗಳನ್ನು ಘೋಷಿಸಿಲ್ಲ. ಹಾಲಿ ಶಾಸಕರ ಬದಲಾವಣೆ ಮಾಡುತ್ತಾರೆ ಎಂಬ ಗುಮ್ಮದ ನಡುವೆಯೇ ಬಿಜೆಪಿ ಅಭ್ಯರ್ಥಿ ಆಯ್ಕೆಯಲ್ಲಿ ಗೊಂದಲದಲ್ಲಿದೆ. ಸರ್ವೆ ಮೇಲೆ ಸರ್ವೆ ನಡೆಸಿದರೂ, ರಾಜ್ಯ ಬಿಜೆಪಿ ತಯಾರಿಸಿದ್ದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಧಾನಿ ಮೋದಿ ತಿರಸ್ಕರಿಸಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.

ಎಪ್ರಿಲ್ 9ರಂದು ದೆಹಲಿಯಲ್ಲಿ ಇಡೀ ದಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮನೆಯಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಮಾತುಕತೆ ನಡೆಸಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕೂಡ ಸಭೆಯಲ್ಲಿ ಹಾಜರಾಗಿದ್ದರು. ಕೊನೆಗೆ, ಸಂಜೆ ವೇಳೆಗೆ ಸಂಸದೀಯ ಕಮಿಟಿ ಸಭೆ ನಡೆದಿದ್ದು, ಸಭೆಯಲ್ಲಿ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಪಾಲ್ಗೊಂಡಿದ್ದರು. ಕೇಂದ್ರ ನಾಯಕರು ಕರ್ನಾಟಕದ ಪ್ರತಿ ಕ್ಷೇತ್ರಗಳ ಮೇಲೆ ಎರಡು ಸರ್ವೆ ರಿಪೋರ್ಟ್ ತಯಾರಿಸಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿ ಎರಡು ಸರ್ವೆ ವರದಿ ಮಾಡಿಕೊಂಡಿದ್ದಾರೆ. ರಾಜ್ಯ ಬಿಜೆಪಿ ವತಿಯಿಂದಲೂ ಪ್ರತ್ಯೇಕ ಸರ್ವೆ ರಿಪೋರ್ಟ್ ನಡೆದಿತ್ತು. ರಾಜ್ಯ ಬಿಜೆಪಿ ಮತ್ತು ಮುಖ್ಯಮಂತ್ರಿ ಸರ್ವೆ ರಿಪೋರ್ಟ್ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆದಿದ್ದಲ್ಲದೆ, ರಾಜ್ಯದಿಂದ ಕಳಿಸಿಕೊಟ್ಟಿದ್ದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಧಾನಿ ಮೋದಿ ಮತ್ತು ಅಮಿತ್ ಷಾ ಪರಿಶೀಲಿಸಿದ್ದಾರೆ.

Easter 2023: PM Modi Greets People On Easter

Amit Shah to visit Arunachal Pradesh amid China border row | Latest News  India - Hindustan Times

ಅಮಿತ್ ಷಾ ಅಧ್ಯಕ್ಷತೆಯಲ್ಲಿ ಪಟ್ಟಿ ರೆಡಿ ಮಾಡಿಕೊಂಡಿದ್ದರೂ, ಮೋದಿ ಅದಕ್ಕೆ ಒಪ್ಪಿಗೆ ಸೂಚಿಸಿಲ್ಲ ಎನ್ನುವ ಮಾಹಿತಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ. ರಾಜ್ಯದಿಂದ ಕಳಿಸಿಕೊಟ್ಟಿದ್ದ ಪಟ್ಟಿಯಲ್ಲಿ ಆರೋಪ ಹೊತ್ತ 12 ಮಂದಿ ಹಾಲಿ ಶಾಸಕರನ್ನು ಮಾತ್ರ ಬದಲಾವಣೆಗೆ ಸೂಚಿಸಿದ್ದರು. ಅಲ್ಲದೆ, ಕೆಲವು ಶಾಸಕರನ್ನು ಬದಲಾಯಿಸಲು ಜಾತಿ ಕಾರಣದಿಂದ ಕಷ್ಟ ಎನ್ನುವ ವರದಿಯನ್ನು ರಾಜ್ಯ ನಾಯಕರು ಸಭೆಯಲ್ಲಿ ಮಂಡಿಸಿದ್ದರು. ಆದರೆ ಇದ್ಯಾವುದನ್ನೂ ಲೆಕ್ಕಿಸದ ಮೋದಿ, ದೊಡ್ಡ ಬದಲಾವಣೆಗೆ ಸೂಚನೆ ನೀಡಿದ್ದಾರೆ. ಅದರಂತೆ, ಗೃಹ ಸಚಿವ ಅಮಿತ್ ಷಾ ತುರ್ತಾಗಿ ಮತ್ತೆರಡು ಸರ್ವೆ ನಡೆಸಲು ಮುಂದಾಗಿದ್ದಾರೆ. 50 ಕ್ಷೇತ್ರಗಳ ಮೇಲೆ ಸರ್ವೆ ನಡೆಸಲಿದ್ದು, ಅದನ್ನು ಆಧರಿಸಿ ಬದಲಾವಣೆಗೆ ಕೈಹಾಕಿದ್ದಾರೆ. ಇದರ ಉಸ್ತುವಾರಿಯನ್ನು ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ, ರಾಜ್ಯ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಮತ್ತು ಸಚಿವ ಮನ್ಸುಖ್ ಮಾಂಡವೀಯಗೆ ಕೊಟ್ಟಿದ್ದಾರೆ. ಉಳಿದಂತೆ, 170ರಷ್ಟು ಕ್ಷೇತ್ರಗಳ ಅಭ್ಯರ್ಥಿ ಅಂತಿಮಗೊಳಿಸಲು ಸೋಮವಾರ ಇಡೀ ದಿನ ನಡ್ಡಾ, ಬೊಮ್ಮಾಯಿ, ಯಡಿಯೂರಪ್ಪ ತೀವ್ರ ಚರ್ಚೆ ನಡೆಸಿದ್ದಾರೆ.

JP Nadda - Bharatiya Janata Party national president Jagat Prakash Nadda to  visit Karnataka on March 17,18 - Telegraph India

Nalin Kumar Kateel is Karnataka BJP chief | India News,The Indian Express

Yediyurappa may be down, but not yet out in Karnataka's BJP

ಮತ್ತೆ ಅಧಿಕಾರಕ್ಕೆ ಬರಲೇಬೇಕೆಂಬ ಹಠ

ಬಿಜೆಪಿ ಹೈಕಮಾಂಡ್ ರಾಜ್ಯ ನಾಯಕರಿಗೆ ಮತ್ತೆ ಅಧಿಕಾರಕ್ಕೆ ಬರಲೇಬೇಕೆಂದು ಸೂಚನೆ ಕೊಟ್ಟಿದೆ. ಏನು ಬೇಕಾದರೂ ಮಾಡಿ, ನಾವು ಅಧಿಕಾರಕ್ಕೆ ಬರಲೇಬೇಕು. ಬಹುಮತ ಪಡೆಯಲೇಬೇಕು. ಅದಕ್ಕಾಗಿ ಸರ್ವೆ ರಿಪೋರ್ಟ್ ಆಧರಿಸಿ ಬದಲಾವಣೆ ಮಾಡಲೇಬೇಕು ಎಂದು ಕೇಂದ್ರ ನಾಯಕರು ರಾಜ್ಯ ಬಿಜೆಪಿಗೆ ಸ್ಪಷ್ಟ ಸೂಚನೆ ಕೊಟ್ಟಿದ್ದಾರೆ. ಹೀಗಾಗಿ ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಕ್ಷೇತ್ರಗಳಲ್ಲಿ ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಣೆಗೆ ಸೂಚಿಸಿದ್ದಾರೆ. ಪ್ರಧಾನಿ ಮೋದಿ ಸೂಚನೆಯಿಂದಾಗಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಭಾರೀ ಬದಲಾವಣೆ ನಿರೀಕ್ಷೆ ಇದೆ.

ರಾಜ್ಯ ನಾಯಕರ ಅಭ್ಯರ್ಥಿ ಪಟ್ಟಿಗೆ ತಿರಸ್ಕಾರ

ರಾಜ್ಯ ನಾಯಕರು ನೀಡಿರುವ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಹೈಕಮಾಂಡ್ ತಿರಸ್ಕರಿಸಿದೆ. ರಾಜ್ಯ ಬಿಜೆಪಿ ಪಟ್ಟಿಯಲ್ಲಿ ಕಲಘಟಗಿ, ಕನಕಪುರ, ಪುತ್ತೂರು, ಚನ್ನಗಿರಿ, ಬೈಂದೂರು, ಕುಂದಾಪುರ, ಕಾಪು, ದಾವಣಗೆರೆ ಉತ್ತರ, ಹಾವೇರಿ, ರಾಣೆಬೆನ್ನೂರು ಸೇರಿ 10ರಿಂದ 12 ಕ್ಷೇತ್ರಗಳಲ್ಲಿ ಮಾತ್ರ ಬದಲಾವಣೆ ಬಯಸಿದ್ದರಂತೆ. ಆದರೆ, ಚುನಾವಣೆ ಗೆಲ್ಲಲು ಈ ರೀತಿಯ ಬದಲಾವಣೆ ಸಾಧ್ಯವಿಲ್ಲ ಎನ್ನುವ ಮಾತನ್ನು ಮೋದಿ ಹೇಳಿದ್ದಾರೆ. ಸಿದ್ದರಾಮಯ್ಯ, ಡಿಕೆಶಿ ಸೇರಿ ಪ್ರಭಾವಿ ಕಾಂಗ್ರೆಸ್ ನಾಯಕರನ್ನು ಸೋಲಿಸಲು ಮಾಡಿಕೊಂಡ ತಯಾರಿ, ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಶಾಸಕರ ಪಟ್ಟಿ ಕೇಳಿದ್ದಾರೆ. ಅಮಿತ್ ಷಾ ಮತ್ತು ಮೋದಿ ತಂಡ ಕಳೆದ ಮೂರು ತಿಂಗಳ ಅವಧಿಯಲ್ಲಿ ಪ್ರತ್ಯೇಕವಾಗಿ ಎರಡು ಸರ್ವೆ ವರದಿ ರೆಡಿ ಮಾಡಿಕೊಂಡಿದ್ದು, ವ್ಯತಿರಿಕ್ತ ಮಾಹಿತಿ ಅನುಸರಿಸಿ ರಾಜ್ಯ ನಾಯಕರ ಬಗ್ಗೆಯೇ ಸಿಟ್ಟಾಗಿದ್ದಾರೆ.

Siddaramaiah fighting several battles within and outside Congress - The Week

So many film stars come and go: DK Shivakumar on Kichcha Sudeep's support  to BJP | Bengaluru - Hindustan Times

ಇದೇ ಕಾರಣಕ್ಕೆ ಖಚಿತ ಇರುವ ನೂರು ಶಾಸಕರ ಪಟ್ಟಿಯನ್ನೂ ಬಿಡುಗಡೆ ಮಾಡಲು ಹೈಕಮಾಂಡ್ ನಾಯಕರು ಒಪ್ಪಿಗೆ ಸೂಚಿಸಿಲ್ಲ. ಗುಜರಾತಿನಲ್ಲಿ ಕಳೆದ ಬಾರಿ 40 ಹಾಲಿ ಶಾಸಕರನ್ನು ಬದಲಾಯಿಸಿ ಅದರಲ್ಲಿ ಯಶಸ್ಸು ಪಡೆದಿದ್ದರು. ಎಲ್ಲಿ ಆಡಳಿತ ವಿರೋಧಿ ಅಲೆ ಇದೆ, ಯಾವ ಶಾಸಕನ ಮೇಲೆ ಆರೋಪಗಳಿವೆ, ಯಾವ ಶಾಸಕ ಕಾರ್ಯಕರ್ತರ ಒಡನಾಟ ಹೊಂದಿದ್ದಾನೆ, ಕ್ಷೇತ್ರದ ಜನರ ಜೊತೆಗೆ ಸಂಪರ್ಕದಲ್ಲಿದ್ದಾನೆ ಎನ್ನುವ ಬಗ್ಗೆ ಪ್ರಧಾನಿ ಮೋದಿ ರಿಪೋರ್ಟ್ ತರಿಸಿಕೊಂಡಿದ್ದಾರೆ. ಅದರ ಆಧಾರದಲ್ಲಿ ರಾಜ್ಯ ನಾಯಕರನ್ನು ರೈಟ್ ಲೆಫ್ಟ್ ಮಾಡಿದ್ದಾರೆ ಎನ್ನುವ ಮಾಹಿತಿ ದೆಹಲಿಯಿಂದ ಲಭಿಸಿದೆ. ರಾಜ್ಯ ಬಿಜೆಪಿಯ ಒಟ್ಟು ತಂಡ ದುರ್ಬಲ ಇರುವ ಬಗ್ಗೆಯೂ ಮೋದಿ ತರಾಟೆಗೆತ್ತಿಕೊಂಡಿದ್ದಾರೆ ಎನ್ನುವ ಮಾತು ದೆಹಲಿ ಅಂಗಳದಲ್ಲಿ ಸದ್ದು ಮಾಡಿದೆ.

ಬಿಜೆಪಿ ಹೈಕಮಾಂಡ್ ತುಂಬ ಸ್ಟ್ರಾಂಗ್ ಆಗಿರುವುದು, ಪ್ರತಿ ಚುನಾವಣೆಯನ್ನೂ ಗಂಭೀರವಾಗಿ ತೆಗೆದುಕೊಳ್ಳುವುದು, ಸೋಲು- ಗೆಲುವಿನ ಲೆಕ್ಕಾಚಾರ ಹಾಕುವುದು, ಅತಂತ್ರ ಫಲಿತಾಂಶ ಬರುವ ಬಗೆಗಿನ ಸರ್ವೆ ವರದಿ, ಬಿಜೆಪಿ ಗೆಲುವು 90 ಕ್ಷೇತ್ರಗಳನ್ನು ದಾಟದು ಎಂಬ ವರದಿ, ಕಾಂಗ್ರೆಸ್ ಬಹುಮತ ಪಡೆಯುತ್ತೆ ಅನ್ನುವ ವರದಿ ಇತ್ಯಾದಿ ಅಂಶಗಳನ್ನು ಆಧರಿಸಿ ಮೋದಿ ಟೀಮ್ ಕರ್ನಾಟಕದ ಚುನಾವಣೆಯ ಬಗ್ಗೆ ಗಂಭೀರ ಚಿಂತನೆ ನಡೆಸಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಬಹುಮತ ಪಡೆದಲ್ಲಿ ಮೋದಿ ಬಗ್ಗೆ ವಿಶ್ವ ಮಟ್ಟದಲ್ಲಿ ಮೈನಸ್ ಆಗುವುದು, ದಕ್ಷಿಣ ಭಾರತದಲ್ಲಿ ಅಧಿಕಾರ ಕಳಕೊಂಡರೆ ಲೋಕಸಭೆ ಚುನಾವಣೆ ಮೇಲೆ ಬೀರಬಹುದಾದ ಪ್ರಭಾವದ ಬಗ್ಗೆಯೂ ಕೇಂದ್ರ ಹೈಕಮಾಂಡ್ ಚಿಂತನೆ ನಡೆಸಿದೆ.

After Pai's outburst, CM Bommai assures extensive road repair works in  Bengaluru soon | Deccan Herald

ಎಪ್ರಿಲ್ 11ರಂದೇ ಅಭ್ಯರ್ಥಿ ಪಟ್ಟಿ- ಬೊಮ್ಮಾಯಿ

ಇವೆಲ್ಲ ತಾಳ-ಮೇಳಗಳ ನಡುವೆ ದೆಹಲಿಯಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬೊಮ್ಮಾಯಿ, ಎ.11ರ ಸಂಜೆ ವೇಳೆಗೆ ಮೊದಲ ಪಟ್ಟಿ ಬಿಡುಗಡೆ ಮಾಡಲಾಗುವುದು. ಅದರಲ್ಲಿ ಬಹುತೇಕ 150ರಿಂದ 170 ಅಭ್ಯರ್ಥಿಗಳ ಪಟ್ಟಿ ರೆಡಿಯಾಗಲಿದೆ ಎಂದಿದ್ದಾರೆ. ಇನ್ನೊಂದೆಡೆ ಎಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಳ್ಳಲಿದ್ದು ಈಗಾಗಲೇ ಅಭ್ಯರ್ಥಿ ಘೋಷಣೆಯಾಗಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಗೆ ಸಿದ್ಧತೆ ನಡೆಸಿದ್ದಾರೆ.

Karnataka Bjp candidate list rejected by high command, 50 constituency survey to be held by Amit shah once again as PM Modi wants clean and efficient leaders. Several sitting MLAs have been dropped and Congress turncoats chosen in the BJP's first list of candidates for Karnataka election likely to be released tonight or tomorrow, party sources have said.