ಬ್ರೇಕಿಂಗ್ ನ್ಯೂಸ್
12-04-23 12:26 pm HK News Desk ಕರ್ನಾಟಕ
ಬೆಳಗಾವಿ, ಎ.12: ಟಿಕೆಟ್ ತಪ್ಪಿಸಿಕೊಂಡಿರುವ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಈಗ ಬಿಜೆಪಿ ಪಕ್ಷದ ಸದಸ್ಯತ್ವಕ್ಕೆ ರಾಜಿನಾಮೆ ನೀಡುವ ನಿರ್ಧಾರ ತೆಗೆದುಕೊಂಡಿದ್ದಾರೆ.
ಬುಧವಾರ ಅಥಣಿ ಪಟ್ಟಣದಲ್ಲಿ ಸುದ್ದಿಗೋಷ್ಟಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ನಿಷ್ಠಾವಂತನಿಗೆ ಗೌರವ ಇರದ ಪಕ್ಷದಲ್ಲಿ ಇರುವ ಅಗತ್ಯತೆ ಇಲ್ಲ. ವಿಧಾನಪರಿಷತ್ ಸ್ಥಾನಕ್ಕೂ ರಾಜಿನಾಮೆ ನೀಡುವಂತೆ ಕ್ಷೇತ್ರದ ಜನತೆ ಸಲಹೆ ನೀಡಿದ್ದಾರೆ. ನಾನೂ ಕೂಡ ಸ್ವಾಭಿಮಾನಿ ರಾಜಕಾರಣಿ. ಲಜ್ಜೆಗೆಟ್ಟ ರಾಜಕಾರಣಿ ಅಲ್ಲ. ಅಧಿಕಾರದ ಅಮಲಿನಲ್ಲೂ ನಾನಿಲ್ಲ. ನಾನು ಯಾರ ಬೆನ್ನಿಗೂ ಚೂರಿ ಹಾಕಿಲ್ಲ ಎಂದರು.
ನನ್ನ ಹೈ ಕಮಾಂಡ್ ನನ್ನ ಜನತೆ. ಜನತೆ ತೀರ್ಮಾನಕ್ಕೆ ಬದ್ಧನಾಗಿದ್ದು ತಕ್ಷಣ ವಿಧಾನಪರಿಷತ್ ಸದಸ್ಯತ್ವ ಸೇರಿದಂತೆ ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ರಾಜಿನಾಮೆ ನೀಡುವ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದರು.


ರಮೇಶ್ ಜಾರಕಿಹೊಳಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಲಕ್ಷ್ಮಣ ಸವದಿ, 'ನನ್ನೊಂದಿಗೆ ಸ್ನೇಹದಿಂದ ಇದ್ದ, ಪ್ರೀತಿಯಿಂದ ನೋಡುತ್ತಿದ್ದ ಸಿಎಂ ಬಸವರಾಜ ಬೊಮ್ಮಾಯಿಗೆ ಈಗ ಎರಡನೇ ಬಾರಿಗೆ ಸಿಎಂ ಆಗುವ ಭಾಗ್ಯ ಇಲ್ಲ. ಪ್ರಧಾನಿ ಆಗುವ ಯೋಗ ಇದೆ. ಇದೆಲ್ಲದರ ನಡುವೆ ನನಗೂ ಒಬ್ಬರು ಗುರು ಇದ್ದಾರೆ. ಅವರ ಮಾತು ಮೀರುವ ಪರಿಸ್ಥಿತಿ ಬಂದಿದೆ. ಕ್ಷಮಿಸಿ ಗುರುವೇ' ಎಂದು ಸಿಎಂ ವಿರುದ್ಧವೂ ಪರೋಕ್ಷವಾಗಿ ಮಾತಿನ ತಿರುಗೇಟು ಕೊಟ್ಟರು.
ಪಕ್ಷಾಂತರ ವಿಷಯವಾಗಿ ಪ್ರತಿಕ್ರಿಯಿಸಿದ ಸವದಿ, 'ಇಷ್ಟೆಲ್ಲ ಆದರೂ ಬಿಜೆಪಿ ವರಿಷ್ಟರಾರೂ ನನ್ನನ್ನು ಸಂಪರ್ಕಿಸಿಲ್ಲ. ಆದರೆ, ಇತರ ಪಕ್ಷಗಳ ಅನೇಕ ಮುಖಂಡರು ಸಂಪರ್ಕದಲ್ಲಿದ್ದಾರೆ. ನಾಳೆಯೇ ಗಟ್ಟಿ, ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇನೆ' ಎಂದು ಪಕ್ಷ ಬದಲಾವಣೆಯ ಮುನ್ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ಲಕ್ಷ್ಮಣ ಸವದಿ ಮನೆಗೆ ಮಾಜಿ ಶಾಸಕ ಹಾಗೂ ಸವದಿ ಸ್ನೇಹಿತ ಕಾಗವಾಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ ಭೇಟಿ ನೀಡಿ ಚರ್ಚಿಸಿದ್ದಾರೆ. ಅರ್ಧ ಗಂಟೆಗಯೂ ಹೆಚ್ಚು ಹೊತ್ತು ಮಾತುಕತೆ ನಡೆಸಿದ ಹಳೇ ಸ್ನೇಹಿತರು ಹೊಸ ಲೆಕ್ಕಾಚಾರ ಹಾಕಿದ್ದು, ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆ ಪಕ್ಕಾ ಎನ್ನುವಂತೆ ಮಾಡಿದೆ.
20 ವರ್ಷಗಳಿಂದ ಕ್ಷೇತ್ರದ ಜನ ನನ್ನ ಮಾತು ಕೇಳಿದ್ದಾರೆ. ಈಗ ನಾನು ಜನತೆ ಮಾತು ಕೇಳುತ್ತೇನೆ. ಸ್ವತಂತ್ರವಾಗಿ ಸ್ಪರ್ಧಿಸು ಎಂದರೆ ಅದಕ್ಕೂ ಸಿದ್ಧ. ನಾನೀಗ ರಾಜಕೀಯದ ಸಂಕಷ್ಟ ಕಾಲದಲ್ಲಿದ್ದೇನೆ. ಈಗ ನನ್ನ ಕೈ ಬಿಡಬೇಡಿ'', ಎಂದು ಕ್ಷೇತ್ರದ ಮತದಾರರಲ್ಲಿ ಮನವಿ ಮಾಡುತ್ತ ಲಕ್ಷ್ಮಣ ಸವದಿ ಕಣ್ಣೀರು ಹಾಕಿದರು.
A day after former Deputy Chief Minister of Karnataka Laxman Savadi was denied ticket to fight the state Assembly elections, the BJP MLC announced his decision to quit the party
26-12-25 01:35 pm
HK News Desk
ಸದ್ಯಕ್ಕಿಲ್ಲ ಸಿಎಂ ಬದಲಾವಣೆ ! ರಾಜ್ಯದಿಂದ ಕೇಂದ್ರ ನ...
25-12-25 08:00 pm
Chitradurga Seabird Bus accident: ಚಿತ್ರದುರ್ಗ...
25-12-25 06:26 pm
SeaBird Bus Fire Accident, Chitradurga: ಕಂಟೈನ...
25-12-25 12:12 pm
ತಡರಾತ್ರಿ ವರೆಗೂ ವಹಿವಾಟು ; ಹೊಟೇಲ್ ವ್ಯವಸ್ಥಾಪಕರಿಂ...
24-12-25 11:20 pm
26-12-25 05:50 pm
HK News Desk
ರೈಲ್ವೆಯಲ್ಲಿ ಒಂದೇ ವರ್ಷಕ್ಕೆ ಎರಡನೇ ಬಾರಿ ಪ್ರಯಾಣ ದ...
26-12-25 03:04 pm
ಹೆತ್ತವರು ಮನೆಯಲ್ಲಿ ಆತ್ಮಹತ್ಯೆ ; ಬೆಳೆದು ನಿಂತ ಪುತ...
26-12-25 02:50 pm
ಜಗತ್ತಿನ ಅತಿ ದೊಡ್ಡ ಮುಸ್ಲಿಂ ದೇಶದಲ್ಲಿ 4500 ವರ್ಷ...
24-12-25 11:13 pm
ಅಯೋಧ್ಯೆ ಮಂದಿರಕ್ಕೆ ಚಿನ್ನ, ವಜ್ರ, ಪಚ್ಚೆ ಕಲ್ಲುಗಳಿ...
24-12-25 07:38 pm
25-12-25 10:54 pm
Mangalore Correspondent
ಡಿ.27ರಂದು 9ನೇ ವರ್ಷದ ಮಂಗಳೂರು ಕಂಬಳ ; ನವ ವರ್ಷ- ನ...
24-12-25 10:30 pm
ಬಜಪೆಯಲ್ಲಿ ಕಾಂಗ್ರೆಸ್ ಓಟಕ್ಕೆ ಎಸ್ಡಿಪಿಐ ಅಡ್ಡಗಾಲು...
24-12-25 06:07 pm
ವಿದ್ಯಾರ್ಥಿಗಳ ಕುಸಿತ, ಅಸ್ತಿತ್ವ ಕಳಕೊಂಡ ಸಣ್ಣ ಕಾಲೇ...
24-12-25 12:23 pm
ಬಜಪೆ ಪಟ್ಟಣ ಪಂಚಾಯತ್ ಚುನಾವಣೆ ; ಬಿಜೆಪಿಗೆ ಸ್ಪಷ್ಟ...
24-12-25 12:02 pm
26-12-25 03:31 pm
HK News Desk
ಶಂಕಿತ ಬಾಂಗ್ಲಾ ವ್ಯಕ್ತಿಗೆ ಪಾಸ್ಪೋರ್ಟ್ ; ಸಹೋದ್ಯೋಗ...
23-12-25 01:41 pm
ನೀವು 24 ಸಾವಿರ ಕಟ್ಟಿದರೆ ತಿಂಗಳಿಗೆ 20 ಲಕ್ಷ, ಕೇಂದ...
22-12-25 04:00 pm
ಹುಬ್ಬಳ್ಳಿಯಲ್ಲಿ ಮರ್ಯಾದಾ ಹತ್ಯೆ ; 19 ವರ್ಷದ ಗರ್ಭಿ...
22-12-25 02:18 pm
Udupi Arrest, Pakistan: ಕೊಚ್ಚಿನ್ ಶಿಪ್ ಯಾರ್ಡ್...
22-12-25 01:06 pm