ಸಿಎಂ ಬೊಮ್ಮಾಯಿ 1500 ಕೋಟಿ ಹಗರಣ ಬಿಚ್ಚಿಡುತ್ತೇನೆ, ನನಗೆ ಟಿಕೆಟ್ ತಪ್ಪಿಸಲು ಅವರೇ ಕಾರಣ ; ನೆಹರು ಓಲೆಕಾರ್ ವಾಗ್ದಾಳಿ 

13-04-23 03:14 pm       HK Desk   ಕರ್ನಾಟಕ

ಹಾವೇರಿ ಜಿಲ್ಲೆಯ ಮೀಸಲು ಕ್ಷೇತ್ರದಲ್ಲಿ ಟಿಕೆಟ್‌ ಕಳಕೊಂಡಿರುವ ಬಿಜೆಪಿ ಶಾಸಕ ನೆಹರು ಓಲೆಕಾರ್‌ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೇಲೆ ತಿರುಗಿ ಬಿದ್ದಿದ್ದಾರೆ. ಬೊಮ್ಮಾಯಿ ಅಧಿಕಾರ ಪಡೆದು ಏನೇನು ಮಾಡಿದ್ದಾರೆಂದು ಗೊತ್ತಿದೆ. ಹನಿ ನೀರಾವರಿ ಯೋಜನೆಯಲ್ಲಿ 1500 ಕೋಟಿ ಅನುದಾನ ಕೊಳ್ಳೆ ಹೊಡೆದಿದ್ದಾರೆ. ಎಲ್ಲ ಹಗರಣ ಬಿಚ್ಚಿಡುವುದಾಗಿ ಹರಿಹಾಯ್ದಿದ್ದಾರೆ.

ಬೆಂಗಳೂರು, ಎ.13: ಹಾವೇರಿ ಜಿಲ್ಲೆಯ ಮೀಸಲು ಕ್ಷೇತ್ರದಲ್ಲಿ ಟಿಕೆಟ್‌ ಕಳಕೊಂಡಿರುವ ಬಿಜೆಪಿ ಶಾಸಕ ನೆಹರು ಓಲೆಕಾರ್‌ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೇಲೆ ತಿರುಗಿ ಬಿದ್ದಿದ್ದಾರೆ. ಬೊಮ್ಮಾಯಿ ಅಧಿಕಾರ ಪಡೆದು ಏನೇನು ಮಾಡಿದ್ದಾರೆಂದು ಗೊತ್ತಿದೆ. ಹನಿ ನೀರಾವರಿ ಯೋಜನೆಯಲ್ಲಿ 1500 ಕೋಟಿ ಅನುದಾನ ಕೊಳ್ಳೆ ಹೊಡೆದಿದ್ದಾರೆ. ಎಲ್ಲ ಹಗರಣ ಬಿಚ್ಚಿಡುವುದಾಗಿ ಹರಿಹಾಯ್ದಿದ್ದಾರೆ. 

ಟಿಕೆಟ್‌ ಸಿಗದೆ ಬೇಸರಗೊಂಡಿರುವ ನೆಹರು ಓಲೆಕಾರ್‌ ಅವರು, ಹಾವೇರಿಯಲ್ಲಿ ನನ್ನನ್ನು ಬಿಟ್ಟು ಬೇರೆ ಯಾರಿಗೂ ಟಿಕೆಟ್ ಕೊಡಲ್ಲ ಎನ್ನುವ ನಿರೀಕ್ಷೆಯಲ್ಲಿದ್ದೆ. ಬಸವರಾಜ ಬೊಮ್ಮಾಯಿ ಬದಲಾವಣೆ ಮಾಡಿ ಬೇರೆಯವರಿಗೆ ಟಿಕೆಟ್ ಕೊಡಿಸಿದ್ದಾರೆ. ಇದರ ಪರಿಣಾಮ ಮುಂದಿನ ದಿನಗಳಲ್ಲಿ ಅವರು ಎದುರಿಸುತ್ತಾರೆ ಎಂದರು.

Basavaraj Bommai - Karnataka polls: BJP's candidates first list to be  expected today, says Chief Minister Basavaraj Bommai - Telegraph India

ನನ್ನ ಟಿಕೆಟ್ ಮಿಸ್ಸಾಗಲು ಬಸವರಾಜ ಬೊಮ್ಮಾಯಿ ಕಾರಣ. ರಾಜಕೀಯವಾಗಿ ನನ್ನನ್ನು ಮುಗಿಸಲು ಬೊಮ್ಮಾಯಿ ಹೀಗೆ ಮಾಡಿದ್ದಾರೆ. ಇವತ್ತು‌ ಕಾರ್ಯಕರ್ತರ ಸಭೆ ಕರೆದಿದ್ದೇನೆ. ಸಭೆಯಲ್ಲಿ ಮುಂದಿನ‌ ನಿರ್ಧಾರ ಮಾಡುತ್ತೇನೆ ಎಂದು ಹೇಳಿದರು. 

ಹಾವೇರಿ ಜಿಲ್ಲೆಯಲ್ಲಿ ಬಿಜೆಪಿ ಮುಗಿಸುವ ಕೆಲಸವನ್ನು ಬೊಮ್ಮಾಯಿ ಮಾಡುತ್ತಿದ್ದಾರೆ. ನನ್ನ ಮೇಲಿರುವ ಪ್ರಕರಣದಿಂದಾಗಿ ನನಗೆ ಟಿಕೆಟ್ ತಪ್ಪಿಲ್ಲ. ಶಿಕ್ಷೆ ವಿಧಿಸುವ ಸಂದರ್ಭದಲ್ಲಿ ಅಡ್ವೊಕೇಟ್ ಜನರಲ್ ಅವರನ್ನು ಆಸಕ್ತಿ ವಹಿಸಿ ಬೊಮ್ಮಾಯಿ ಕಳುಹಿಸಿದ್ದರು. 

ಹಾವೇರಿ ನಗರಸಭೆ ಕಾಮಗಾರಿಯಲ್ಲಿ ನಕಲಿ ಬಿಲ್ ಸೃಷ್ಟಿಸಿ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ. ಹಣ ನಷ್ಟ ಉಂಟುಮಾಡಿದ ಪ್ರಕರಣದಲ್ಲಿ ಜನಪ್ರತಿನಿಧಿಗಳ ನ್ಯಾಯಾಲಯ ಶಾಸಕ ನೆಹರೂ ಓಲೆಕಾರ್‌ ಅವರನ್ನು ದೋಷಿ ಎಂದು ತೀರ್ಪು ನೀಡಿತ್ತು‌.‌ ಅಲ್ಲದೆ, ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಕ್ರಿಮಿನಲ್‌ ಪ್ರಕರಣದಲ್ಲಿ ಎರಡು ವರ್ಷ ಶಿಕ್ಷೆಗೆ ಒಳಗಾದರೆ ಕಾಯ್ದೆ ಪ್ರಕಾರ ಶಾಸಕ ಸ್ಥಾನ‌ ಅನರ್ಹ ಮಾಡಬೇಕಿತ್ತು. ಬಿಜೆಪಿ ಸರ್ಕಾರ ಇದ್ದುದರಿಂದ ಕ್ರಮ ಆಗಿರಲಿಲ್ಲ. ರಾಹುಲ್‌ ಗಾಂಧಿ ಪ್ರಕರಣದಲ್ಲಿ ಸಂಸದ ಸ್ಥಾನದಿಂದ ಅನರ್ಹಗೊಂಡ ಬೆನ್ನಲ್ಲೇ ನೆಹರೂ ಓಲೆಕಾರ್‌ ಮೇಲ್ಮನವಿ ಸಲ್ಲಿಸಿದ್ದರು. ಮುಂದೆ ಕೋರ್ಟ್‌ ಶಿಕ್ಷೆಯನ್ನು ತಾತ್ಕಾಲಿಕವಾಗಿ ತಡೆಹಿಡಿದಿತ್ತು. 

ನೆಹರು ಓಲೆಕಾರ್ ಆರೋಪಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬೊಮ್ಮಾಯಿ, ನೆಹರೂ ಓಲೆಕಾರ್ ಯಾವ ಆರೋಪ ಬೇಕಾದ್ರೂ ಮಾಡಲಿ. 1500 ಕೋಟಿ ಅಲ್ಲ, ಯಾವುದೇ ಆರೋಪ ಇದ್ದರೂ ದಾಖಲೆ ಸಮೇತ ಮಾಡಲಿ. ಹೇಳಿಕೆಗಳಿಂದ ಹಗರಣ ಆಗಲ್ಲ, ದಾಖಲೆ ಸಹಿತ ಮಾಡಲಿ, ಸತ್ಯಾಸತ್ಯತೆ ಹೊರಬರಲಿ ಎಂದು ಮಂಗಳೂರಿನಲ್ಲಿ ತಿರುಗೇಟು ನೀಡಿದ್ದಾರೆ.

Haveri Nehru Olekar quits BJP, says will expose Rs 1500 scam of Cm Bommai. My ticket has missed because of Bommai. I shall expose all the scams of CM Bommai.