ಬ್ರೇಕಿಂಗ್ ನ್ಯೂಸ್
14-04-23 06:50 pm Bangalore Correspondent ಕರ್ನಾಟಕ
ಬೆಂಗಳೂರು, ಎ.14: ಬಿಜೆಪಿ ಟಿಕೆಟ್ ವಂಚಿತ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರನ್ನು ಶುಕ್ರವಾರ ಕಾಂಗ್ರೆಸ್ ಸ್ವಾಗತಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು, ಮುಂದಿನ ದಿನಗಳಲ್ಲಿ ಆಡಳಿತ ಪಕ್ಷದ ಹಲವಾರು ನಾಯಕರು ವಿರೋಧ ಪಕ್ಷ ಸೇರಲಿದ್ದಾರೆ ಎಂದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶಿವಕುಮಾರ್, ''ಲಕ್ಷ್ಮಣ ಸವದಿ ಅವರು ಹಿರಿಯ ನಾಯಕರು, ಯಾವುದೇ ಷರತ್ತುಗಳಿಲ್ಲದೆ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ ಮತ್ತು ನಮ್ಮ ಕುಟುಂಬದ ಸದಸ್ಯರಾಗುತ್ತಿದ್ದಾರೆ. ಅವರು ನಮ್ಮ ನಾಯಕತ್ವ ಮತ್ತು ಸಿದ್ಧಾಂತದೊಂದಿಗೆ ಹೊಂದಿಕೊಳ್ಳುತ್ತಾರೆ" ಎಂದರು.
ಇಂದು ಪಕ್ಷದ ಎಲ್ಲಾ ಮುಖಂಡರು ಲಕ್ಷ್ಮಣ ಸವದಿ ಅವರೊಂದಿಗೆ ಚರ್ಚೆ ನಡೆಸಿದರು. ಪಕ್ಷದ ಎಲ್ಲಾ ಸದಸ್ಯರು ಅವರಿಗೆ ಹೃತ್ಪೂರ್ವಕ ಸ್ವಾಗತವನ್ನು ನೀಡಿದರು" ಎಂದು ಡಿಕೆಶಿ ಹೇಳಿದರು.
ಲಕ್ಷ್ಮಣ ಸವದಿ ಅವರ ಜೊತೆಗೆ ಇನ್ನೂ ಹಲವು ಬಿಜೆಪಿ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಎಲ್ಲರನ್ನು ಪಕ್ಷಕ್ಕೆ ಒಮ್ಮತದಿಂದ ಸ್ವಾಗತಿಸುತ್ತೇವೆ. ಸವದಿ ಅವರು ಇಂದು ಸಂಜೆ 4 ಗಂಟೆಗೆ ವಿಧಾನ ಪರಿಷತ್ ಸಭಾಪತಿಯನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಲಿದ್ದಾರೆ.
ಬಿಜೆಪಿ ಕೊಟ್ಟ ಮಾತನ್ನು ತಪ್ಪಿದೆ. ಪಕ್ಷ ಬಿಡುತ್ತೇನೆ ಎಂದು ಹೇಳಿದಾಗಲೂ ಬಿಎಸ್‌ವೈ ಅವರು ನನಗೆ ಕಾಲ್ ಮಾಡಿಲ್ಲ. ನನ್ನನ್ನು ಸಂಪರ್ಕಿಸಿಲ್ಲ. ಒಂದೇ ಒಂದು ಸಮಧಾನದ ಮಾತುಗಳನ್ನು ಆಡಿಲ್ಲ. ನನಗೆ ಡಿಸಿಎಂ ಸ್ಥಾನ ನೀಡಿ ತೆಗೆದಿದ್ದು ನನಗೆ ಅವಮಾನ ಅಲ್ಲವೇ? ನಾನೇನಾದ್ರೂ ಉಪಮುಖ್ಯಮಂತ್ರಿ ಸ್ಥಾನ ಕೊಡಿ ಎಂದು ಕೇಳಿದ್ನಾ? ಅವರು ಕೊಟ್ಟಿದ್ದು ಯಾಕೆ? ವಾಪಸ್ಸು ಪಡೆದು ಯಾಕೆ? ಇದರಿಂದ ನನಗೆ ಬೇಸರ ಆಗುವುದಿಲ್ಲವೇ. ನಾನು ಅಥಣಿಯಿಂದಲೇ ಸ್ಪರ್ಧೆ ಮಾಡುತ್ತೇನೆ' ಎಂದು ಲಕ್ಷ್ಮಣ ಸವದಿ ಹೇಳಿದ್ದಾರೆ.
'ನನ್ನ ನಡೆಸಿಕೊಂಡ ರೀತಿ ಕೂಡ ನನಗೆ ಬೇಸರಿವಿದೆ. ಆ ಸಂದರ್ಭದಲ್ಲಿ ಸೋತಿದ್ದರೂ ದೊಡ್ಡ ಜವಬ್ದಾರಿಯನ್ನು ನೀಡಲಾಯಿತ್ತು. ಪಕ್ಷ ಬಿಡುತ್ತೇನೆ ಎಂದು ಹೇಳಿದಾಗಲೂ ಪಕ್ಷದ ಹಿರಿಯ ನಾಯಕರು ನನಗೆ ಕರೆ ಮಾಡಿ ಮಾತನಾಡಿಲ್ಲ. ಹೆಚ್ ನಾಗೇಶ್, ಶಂಕರ್ ಅವರಿಗೊಂದು ನ್ಯಾಯ. ನನಗೊಂದು ನ್ಯಾಯಾನಾ ಎಂದು ಲಕ್ಷ್ಮಣ ಸವದಿ ಪ್ರಶ್ನೆ ಮಾಡಿದ್ದಾರೆ. ಟಿಕೆಟ್ ಹಂಚಿಕೆಯಲ್ಲಿ ನನಗೆ ಮೋಸವಾಗಿದೆ' ಎಂದು ಸಿಡಿಗುಂಡಿನ ಮಾತುಗಳನ್ನು ಆಡಿದ್ದಾರೆ.
ಅಥಣಿ ಕ್ಷೇತ್ರದ ಟಿಕೆಟ್ ಸಿಗದ ಕಾರಣಕ್ಕೆ ಬಿಜೆಪಿ ವಿರುದ್ಧ ಅಸಮಾಧಾನಗೊಂಡಿರುವ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಬಿಜೆಪಿಗೆ ರಾಜಿನಾಮೆ ಘೋಷಿಸಿರುವ ಬೆನ್ನಲ್ಲೇ ಬೆಳಗಾವಿಯ ಇನ್ನೋರ್ವ ಬಿಜೆಪಿ ನಾಯಕ ರಾಜೀನಾಮೆಗೆ ಮುಂದಾಗಿದ್ದಾರೆ. ಬೈಲಹೊಂಗಲ ಟಿಕೆಟ್ ಆಕಾಂಕ್ಷಿಯಾಗಿದ್ದು ಮಾಜಿ ಸಿಎಂ ಯಡಿಯೂರಪ್ಪ ಅವರ ಆಪ್ತ ಡಾ. ವಿಶ್ವನಾಥ್, ಬಿಜೆಪಿಗೆ ರಾಜೀನಾಮೆ ನೀಡಲು ತೀರ್ಮಾನಿಸಿದ್ದಾರೆ.
In a major blow to the ruling BJP ahead of the May 10 Karnakata elections, former deputy chief minister Laxman Savadi joins the Congress on Friday. His decision came after a meeting with Karnataka Congress chief D K Shivakumar, Leader of the Opposition in the Assembly Siddaramaiah and Congress general secretary and party in-charge of Karnataka, Randeep Singh Surjewala.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 10:33 pm
Mangalore Correspondent
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm