ಯಡಿಯೂರಪ್ಪ ಬಲಗೈ ಬಂಟ ಎನ್.ಆರ್ ಸಂತೋಷ್ ಗೆ ಜೆಡಿಎಸ್ ಗಾಳ ; ಅರಸೀಕೆರೆ ಟಿಕೆಟ್ ಫಿಕ್ಸ್ , ಬಿಜೆಪಿಗೆ ಠಕ್ಕರ್ ! 

14-04-23 09:45 pm       HK News Desk   ಕರ್ನಾಟಕ

ಮಾಜಿ ಸಿಎಂ ಯಡಿಯೂರಪ್ಪ ಬಲಗೈ ಬಂಟನಂತಿದ್ದ ಯುವ ಮುಖಂಡ ಎನ್.ಆರ್ ಸಂತೋಷ್ ಜೆಡಿಎಸ್ ಕಡೆಗೆ ತಿರುಗಿದ್ದಾರೆ. ಅರಸೀಕೆರೆ ಬಿಜೆಪಿ ಟಿಕೆಟ್ ಸಿಗದೆ ಬಂಡಾಯ ಎದ್ದಿದ್ದ ಸಂತೋಷ್ ಅವರನ್ನು ತಮ್ಮ ಪಕ್ಷಕ್ಕೆ ಸೆಳೆಯಲು ರೇವಣ್ಣ ಮತ್ತು ಪ್ರಜ್ವಲ್ ಮುಂದಾಗಿದ್ದಾರೆ.   

ಹಾಸನ, ಎ.14 : ಮಾಜಿ ಸಿಎಂ ಯಡಿಯೂರಪ್ಪ ಬಲಗೈ ಬಂಟನಂತಿದ್ದ ಯುವ ಮುಖಂಡ ಎನ್.ಆರ್ ಸಂತೋಷ್ ಜೆಡಿಎಸ್ ಕಡೆಗೆ ತಿರುಗಿದ್ದಾರೆ. ಅರಸೀಕೆರೆ ಬಿಜೆಪಿ ಟಿಕೆಟ್ ಸಿಗದೆ ಬಂಡಾಯ ಎದ್ದಿದ್ದ ಸಂತೋಷ್ ಅವರನ್ನು ತಮ್ಮ ಪಕ್ಷಕ್ಕೆ ಸೆಳೆಯಲು ರೇವಣ್ಣ ಮತ್ತು ಪ್ರಜ್ವಲ್ ಮುಂದಾಗಿದ್ದಾರೆ.   

ಕಡೂರಿನಲ್ಲಿ ವೈಎಸ್ವಿ ದತ್ತಾ ಅವರನ್ನು ಸೆಳೆದುಕೊಂಡ ಮಾದರಿಯಲ್ಲಿ ಅರಸೀಕೆರೆಯಲ್ಲೂ ರೇವಣ್ಣ ಬಿಜೆಪಿ ಟಿಕೆಟ್ ಆಕಾಂಕ್ಷಿಗೆ ಗಾಳ ಹಾಕಿದ್ದು ಯಶಸ್ಸು ಸಾಧಿಸಿದ್ದಾರೆ ಎನ್ನಲಾಗುತ್ತಿದೆ.‌ ಬಿಜೆಪಿ ಟಿಕೆಟ್ ಸಿಗದೆ ಬಂಡಾಯದ ಮುನ್ಸೂಚನೆ ನೀಡಿದ್ದ ಎನ್.ಆರ್.ಸಂತೋಷ ಜೆಡಿಎಸ್ ಸೇರುವ ಸುಳಿವು ನೀಡಿದ್ದಾರೆ. ಇದರ ಬೆನ್ನಲ್ಲೇ ಸಂತೋಷ್ ಬೆಂಬಲಿಗರು ತೆನೆಹೊತ್ತ ಮಹಿಳೆಯ ಚಿಹ್ನೆಯ ಜೊತೆಗೆ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.‌

ನಾಲ್ಕು ವರ್ಷಗಳ ಹಿಂದೆ ಸಮ್ಮಿಶ್ರ ಸರ್ಕಾರ ಕೆಡವಿ ಯಡಿಯೂರಪ್ಪ ಅವರನ್ನು ಸಿಎಂ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎನ್.ಆರ್.ಸಂತೋಷ್ ಅವರನ್ನೇ ಜೆಡಿಎಸ್ ಕಡೆ ಸೆಳೆದು ಸಂಸದ ಪ್ರಜ್ವಲ್ ಮತ್ತು ಮಾಜಿ ಸಚಿವ ರೇವಣ್ಣ ವಿರೋಧಿಗಳಿಗೆ ದೊಡ್ಡ ಟಾಂಗ್ ನೀಡಿದ್ದಾರೆ.‌ ಅರಸೀಕೆರೆ ಕ್ಷೇತ್ರದಲ್ಲಿ ಎನ್.ಆರ್ ಸಂತೋಷ್ ಪ್ರಭಾವಿಯಾಗಿದ್ದು ಈ ಬಾರಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು.‌

ನಿನ್ನೆ ತಮ್ಮ ನಿವಾಸದೆದುರಿನ ಬೆಂಬಲಿಗರ ಸಭೆಯಲ್ಲಿ ಸಂತೋಷ್ ಅವರನ್ನು ಜೆಡಿಎಸ್ ಸೇರಿ ಎಂದು ಬೆಂಬಲಿಗರು ಒತ್ತಾಯ ಮಾಡಿದ್ದರು.‌ ಬೆಂಬಲಿಗರ ಒತ್ತಾಯದಂತೆ ಜೆಡಿಎಸ್ ಸೇರಲು ಸಂತೋಷ್ ಓಕೆ ಎಂದಿದ್ದರು.‌ ಕುಮಾರಸ್ವಾಮಿ ಬದಿಗಿಟ್ಟು ಮಾಜಿ ಸಚಿವ ರೇವಣ್ಣ ಮತ್ತು ಮಗ ಪ್ರಜ್ವಲ್ ಸೇರಿ ಆಪರೇಶನ್ ನಡೆಸಿದ್ದು ಬೆಂಗಳೂರಿನಲ್ಲಿ ದೇವೇಗೌಡರ ಭೇಟಿ ಮಸಡಿಸಿದ್ದಾರೆ. ಇದಲ್ಲದೆ, ಈಗಾಗಲೇ ಕ್ಷೇತ್ರದ ಅಭ್ಯರ್ಥಿ ಎಂದು ಬಿಂಬಿತವಾಗಿದ್ದ ಬಾಣಾವರ ಅಶೋಕ್ ಜೊತೆಗೆ ರೇವಣ್ಣ ಮತ್ತು ಪ್ರಜ್ವಲ್ ಮಾತನಾಡಿ ಮನವೊಲಿಕೆ ಮಾಡಿದ್ದಾರೆ.‌ ನಿಮ್ಮ ತೀರ್ಮಾನಕ್ಕೆ ಬದ್ದ ಎಂದು ಬಾಣಾವರ ಅಶೋಕ್ ತಿಳಿಸಿದ್ದಾರೆ ಎನ್ನಲಾಗಿದೆ. ‌

Former Chief Minister B.S. Yediyurappa’s relative N.R. Santhosh, an aspirant for the Arsikere seat in Hassan district, has been denied the ticket by the BJP. The BJP has nominated G.V. Basavaraj in the constituency. N R Santosh is likely to join JDS.