ಕುಮಟಾದಲ್ಲಿ ನಿವೇದಿತ್ ಆಳ್ವಾಗೆ ಟಿಕೆಟ್ ಫಿಕ್ಸ್ ; ಕುಮಟಾದಲ್ಲೇ ವಾಸ್ತವ್ಯ ಹೂಡಿದ ಮಾರ್ಗರೆಟ್ ಆಳ್ವಾ 

14-04-23 10:59 pm       HK News Desk   ಕರ್ನಾಟಕ

ಕುಮಟಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ತನ್ನ ಪುತ್ರ ನಿವೇದಿತಾ ಆಳ್ವಾಗೆ ಸಿಗೋದು ಖಚಿತ ಎಂದು ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವ ಹೇಳಿದ್ದಾರೆ. ಪುತ್ರ ನಿವೇದಿತಾ ಆಳ್ವಾಗೆ ಕಾಂಗ್ರೆಸ್ ಟಿಕೆಟ್ ಖಚಿತಗೊಂಡಿರುವ ಬಗ್ಗೆ ಮಾರ್ಗರೆಟ್ ಸುಳಿವು ನೀಡಿದ್ದಾರೆ. 

ಕಾರವಾರ, ಎ.14 : ಕುಮಟಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ತನ್ನ ಪುತ್ರ ನಿವೇದಿತಾ ಆಳ್ವಾಗೆ ಸಿಗೋದು ಖಚಿತ ಎಂದು ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವ ಹೇಳಿದ್ದಾರೆ. ಪುತ್ರ ನಿವೇದಿತಾ ಆಳ್ವಾಗೆ ಕಾಂಗ್ರೆಸ್ ಟಿಕೆಟ್ ಖಚಿತಗೊಂಡಿರುವ ಬಗ್ಗೆ ಮಾರ್ಗರೆಟ್ ಸುಳಿವು ನೀಡಿದ್ದಾರೆ. 

ಐವತ್ತು ವರ್ಷದಿಂದ ರಾಜಕೀಯವಾಗಿ ಎಲ್ಲಾ ಸೇವೆ ಮಾಡಿದ್ದೇನೆ.‌ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದೇನೆ. ಈ ಬಾರಿ ಒಮ್ಮೆ ಅವಕಾಶ ನೀಡಿ, ಗೆಲ್ಲಿಸಿ ತನ್ನಿ ಎಂದು ಆಳ್ವಾ ಮತದಾರರಲ್ಲಿ ಮನವಿ ಮಾಡಿದ್ದಾರೆ. 81ನೇ ವರ್ಷದ ಹುಟ್ಟುಹಬ್ಬದ ಆಚರಣೆ ವೇಳೆ ಮಾರ್ಗರೇಟ್ ಈ ಸುಳಿವು ನೀಡಿದ್ದಾರೆ. ಕುಮಟಾ ತಾಲೂಕಿನ ಮೊರಬಾ ಗ್ರಾಮದಲ್ಲಿ ಮಾರ್ಗರೆಟ್ ಆಳ್ವಾ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. 

ಚುನಾವಣೆ ಕಾರಣಕ್ಕೆ ಮೊರಬಾ ಗ್ರಾಮದಲ್ಲಿ ಪ್ರತ್ಯೇಕ ಬಾಡಿಗೆ ಮನೆ ಮಾಡಿರುವ ಆಳ್ವಾ, ಒಂದು ತಿಂಗಳ ಕಾಲ ಇಲ್ಲೇ ಇರುತ್ತೇನೆ ಎಂಬ ಸುಳಿವು ನೀಡಿದ್ದಾರೆ. ಪುತ್ರ ನಿವೇದಿತಾ ಆಳ್ವಾ ಪರ ಪ್ರಚಾರಕ್ಕಾಗಿ ಮೊರಬಾದಲ್ಲಿ ವಾಸ್ತವ್ಯ ಮಾಡಿದ್ದಾರೆ. 

ನಿವೇದಿತಾ ಆಳ್ವಾಗೆ ಕುಮಟಾದಲ್ಲಿ ಟಿಕೆಟ್ ಫಿಕ್ಸ್ ಆಗಿದ್ದು ಘೋಷಣೆ ಮಾತ್ರ ಬಾಕಿ ಎನ್ನಲಾಗುತ್ತಿದೆ. ಟಿಕೆಟ್ ‌ಖಚಿತಪಡಿಸಿಯೇ ಮಾರ್ಗರೆಟ್ ಕ್ಷೇತ್ರಕ್ಕೆ ಆಗಮಿಸಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.

Congress ticket for Nivedith Alva son of Margaret Alva in Kumta is fixed.