ಶೆಟ್ಟರ್ ಜಾಗಕ್ಕೆ ಮಹೇಶ್ ಟೆಂಗಿನಕಾಯಿ ; ಬಂಡಾಯ ಸುಳಿವು ನೀಡಿದ್ದ ಲಿಂಬಾವಳಿ, ಪತ್ನಿಗೆ ಟಿಕೆಟ್ ಕೊಟ್ಟು ಸಂತೈಸಿದ ಹೈಕಮಾಂಡ್, ರಾಮದಾಸ್ ಟಿಕೆಟ್ ಮಿಸ್ ! 

17-04-23 09:21 pm       Bangalore Correspondent   ಕರ್ನಾಟಕ

ವಿಧಾನಸಭೆ ಚುನಾವಣೆಗೆ ಬಿಜೆಪಿ 3ನೇ ಪಟ್ಟಿ ಬಿಡುಗಡೆ ಮಾಡಿದೆ. ಪಟ್ಟಿಯಲ್ಲಿ 10 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದು ಎರಡು ಕ್ಷೇತ್ರಗಳಿಗೆ ಟಿಕೆಟ್‌ ಘೋಷಣೆ ಬಾಕಿಯಿರಿಸಿದೆ. ಮಾನ್ವಿ ಮತ್ತು ಶಿವಮೊಗ್ಗ ನಗರ ಕ್ಷೇತ್ರಗಳಿಗೆ ಟಿಕೆಟ್‌ ಘೋಷಿಸಿಲ್ಲ. 

ಬೆಂಗಳೂರು, ಎ.17: ವಿಧಾನಸಭೆ ಚುನಾವಣೆಗೆ ಬಿಜೆಪಿ 3ನೇ ಪಟ್ಟಿ ಬಿಡುಗಡೆ ಮಾಡಿದೆ. ಪಟ್ಟಿಯಲ್ಲಿ 10 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದು ಎರಡು ಕ್ಷೇತ್ರಗಳಿಗೆ ಟಿಕೆಟ್‌ ಘೋಷಣೆ ಬಾಕಿಯಿರಿಸಿದೆ. ಮಾನ್ವಿ ಮತ್ತು ಶಿವಮೊಗ್ಗ ನಗರ ಕ್ಷೇತ್ರಗಳಿಗೆ ಟಿಕೆಟ್‌ ಘೋಷಿಸಿಲ್ಲ. 

ಜಗದೀಶ್‌ ಶೆಟ್ಟರ್‌ ಟಿಕೆಟ್‌ಗಾಗಿ ಪಟ್ಟು ಹಿಡಿದಿದ್ದ ಹುಬ್ಬಳ್ಳಿ ಧಾರವಾಡ ಸೆಂಟ್ರಲ್‌ ಕ್ಷೇತ್ರಕ್ಕೆ ಮಹೇಶ್‌ ಟೆಂಗಿನಕಾಯಿಗೆ ಟಿಕೆಟ್‌ ನೀಡಿದ್ದು, ಮೈಸೂರಿನ ಕೃಷ್ಣರಾಜ ಸಾಗರದಲ್ಲಿ ಹಾಲಿ ಶಾಸಕ ಎಸ್‌ಎ ರಾಮದಾಸ್‌ಗೆ ಟಿಕೆಟ್‌ ನಿರಾಕರಿಸಲಾಗಿದೆ. 

Karnataka Assembly election: BJP's third list out, Jagadish Shettar's seat  goes to Mahesh Tenginkai - India Today

ಮೊದಲ ಪಟ್ಟಿಯಲ್ಲಿ 189 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದ ಬಿಜೆಪಿ, ಎರಡನೇ ಪಟ್ಟಿಯಲ್ಲಿ 23 ಕ್ಷೇತ್ರಗಳಿಗೆ ಟಿಕೆಟ್‌ ಘೋಷಣೆ ಮಾಡಿತ್ತು. ಈಗ 10 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದು, ಒಟ್ಟು 222 ಕ್ಷೇತ್ರಗಳಿಗೆ ಟಿಕೆಟ್‌ ಘೋಷಿಸಿದಂತಾಗಿದೆ. ಗೋವಿಂದರಾಜ ನಗರ ಕ್ಷೇತ್ರದ ಹಾಲಿ ಶಾಸಕರಾಗಿದ್ದ ವಿ ಸೋಮಣ್ಣ ಅವರ ಪುತ್ರನಿಗೆ ಈ ಕ್ಷೇತ್ರದ ಟಿಕೆಟ್ ಸಿಕ್ಕಿಲ್ಲ. ಸೋಮಣ್ಣ ಅವರಿಗೆ ಚಾಮರಾಜನಗರ ಹಾಗೂ ವರುಣಾದಲ್ಲಿ ಟಿಕೆಟ್ ನೀಡಿದ್ದು ಪುತ್ರ ಅರುಣ್ ಸೋಮಣ್ಣ ಅವರಿಗೆ ಗೋವಿಂದರಾಜನಗರ ಕ್ಷೇತ್ರದಲ್ಲಿ ಟಿಕೆಟ್ ಸಿಗುವ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಅವರ ಬದಲಿಗೆ ಮಾಜಿ ಬಿಬಿಎಂಪಿ ಸದಸ್ಯ ಉಮೇಶ್ ಶೆಟ್ಟಿಗೆ ಟಿಕೆಟ್ ನೀಡಲಾಗಿದೆ. 

BJP MLA Limbavali flayed for 'rude' behaviour with woman- The New Indian  Express

ಮಾಜಿ ಸಚಿವ ಅರವಿಂದ ಲಿಂಬಾವಳಿ ಬದಲು ಮಹದೇವಪುರ ಕ್ಷೇತ್ರದಿಂದ ಅವರ ಪತ್ನಿ ಮಂಜುಳಾ ಅರವಿಂದ ಲಿಂಬಾವಳಿಗೆ ಟಿಕೆಟ್ ನೀಡಲಾಗಿದೆ. ಟಿಕೆಟ್ ಕೈತಪ್ಪುವ ಭೀತಿಯಿಂದ ಅವರು ಪಕ್ಷೇತರ ಸ್ಪರ್ಧೆಗೆ ಸಿದ್ಧತೆ ನಡೆಸಿದ್ದರು. ಈ ಬಗ್ಗೆ ಪಕ್ಷದ ಕಾರ್ಯಕರ್ತರ ಜೊತೆಗೆ ಸಭೆಯನ್ನು ನಡೆಸಿದ್ದರು. ಆದರೆ ಕೊನೆಯ ಗಳಿಗೆಯಲ್ಲಿ ಅವರು ತಮ್ಮ ಪತ್ನಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿ ಆಗಿದ್ದಾರೆ. 

Ex-minister moves HC seeking scrapping of revised voters' list | Deccan  Herald

ಕೃಷ್ಣರಾಜ ಕ್ಷೇತ್ರದಲ್ಲಿ ಎಸ್‌ಎ ರಾಮದಾಸ್‌ ಬದಲಾಗಿ ಶ್ರೀವತ್ಸಾ ಅವರಿಗೆ ಟಿಕೆಟ್‌ ನೀಡಲಾಗಿದೆ. ಅದಲ್ಲದೇ ನಾಗಠಾಣ ಕ್ಷೇತ್ರದಲ್ಲಿ ಕಳೆದ ಬಾರಿ ಗೋವಿಂದ ಕಾರಜೋಳ ಅವರ ಪುತ್ರನಿಗೆ ಟಿಕೆಟ್‌ ನೀಡಲಾಗಿತ್ತು. ಆದರೆ, ಈ ಬಾರಿ ಅವರಿಗೆ ಟಿಕೆಟ್‌ ಕೈತಪ್ಪಿದ್ದು, ಸಂಜೀವ್‌ ಐಹೊಳೆಗೆ ಟಿಕೆಟ್‌ ನೀಡಲಾಗಿದೆ. ಕೊಪ್ಪಳದಲ್ಲಿ ಸಂಸದ ಸಂಗಣ್ಣ ಕರಡಿ ಹಾಗೂ ಸಿವಿ ಚಂದ್ರಶೇಖರ್‌ ನಡುವೆ ಟಿಕೆಟ್‌ ಫೈಟ್‌ ಇತ್ತು. ಆದರೆ, ಇಬ್ಬರಿಗೂ ಮಣೆಹಾಕದ ಬಿಜೆಪಿ ನಾಯಕರು ಮಂಜುಳಾ ಅಮರೇಶ್‌ ಅವರಿಗೆ ಟಿಕೆಟ್‌ ನೀಡಿದ್ದಾರೆ.

The BJP has come out with its third list of candidates for the upcoming Karnataka Assembly election scheduled to be held on May 10. The Hubbali-Central constituency, where ex-BJP leader and Congress's new entrant Jagadish Shettar wanted to contest, has been given to BJP general secretary Mahesh Tenginakai.