ಬ್ರೇಕಿಂಗ್ ನ್ಯೂಸ್
18-04-23 10:05 pm Bangalore Correspondent ಕರ್ನಾಟಕ
ಬೆಂಗಳೂರು, ಎ.18 : 'ಶೆಟ್ಟರ್ ಸಿದ್ಧಾಂತ, ವಿಚಾರಕ್ಕೆ ಬದ್ಧರಾಗಿದ್ದವರು. ಅಂಥವರು ಈಗ ಹೇಗೆ ಜಾರಿಬಿದ್ರೋ ಗೊತ್ತಿಲ್ಲ..' ಹೀಗೆ ಪ್ರಶ್ನೆ ಮಾಡಿದವರು ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕಿ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ.
ಬಿಜೆಪಿ ರಾಷ್ಟ್ರೀಯ ವಿಚಾರ ಇಟ್ಟುಕೊಂಡು ಬೆಳೆದ ಪಕ್ಷ, ದೇಶ ಮೊದಲು ಎನ್ನುವ ಪಕ್ಷ. ಜನಸಂಘದಲ್ಲಿ ಕಾರ್ಯಕರ್ತರಾದವರು ಜಗದೀಶ್ ಶೆಟ್ಟರ್, ಅವರ ತಂದೆ ಹುಬ್ಬಳ್ಳಿಯ ಮೇಯರ್ ಆಗಿದ್ದವರು. ಅಡ್ವಾಣಿಯವರು ರಾಜ್ಯಕ್ಕೆ ಬಂದರೆ ಅವರ ನಿವಾಸದಲ್ಲಿ ಇರುತ್ತಿದ್ದರು. ಕಾಂಗ್ರೆಸ್ನ ವಿರೋಧಿಸುತ್ತಿದ್ದ ಕುಟುಂಬದ ಶೆಟ್ಟರ್ ಈಗ ಅದೇ ಕಾಂಗ್ರೆಸ್ಗೆ ಹೋಗಿದ್ದಾರೆ. ಅವರು ಹೇಗೆ ಜಾರಿಬಿದ್ರೋ ಗೊತ್ತಿಲ್ಲ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಒಂದು ಕಾಲದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಇಟ್ಟಿಗೆ ಹೊತ್ತಿದ್ರಿ, ಕಾಂಗ್ರೆಸ್ ರಾಮಮಂದಿರ ವಿರೋಧ ಮಾಡಿದವರು. ಅಧಿಕಾರಕ್ಕೆ ಬಂದರೆ 370ನೇ ವಿಧಿ ರದ್ದು ಮಾಡುವುದಾಗಿ ಕಾಂಗ್ರೆಸ್ನವರು ಹೇಳುತ್ತಾರೆ. ಮುಸ್ಲಿಮರಿಂದ ತೆಗೆದುಕೊಂಡ ಮೀಸಲಾತಿಯನ್ನು ವಾಪಸ್ ಕೊಡ್ತೀವಿ ಎಂದು ಕಾಂಗ್ರೆಸ್ ಹೇಳುತ್ತೆ. ಅದನ್ನು ತೆಗೆದುಕೊಳ್ಳಬೇಡಿ ಎಂದು ಕೇಳ್ತೀರಾ? ಎಂದು ಪ್ರಶ್ನಿಸಿರುವ ಶೋಭಾ, ನೀವು ವಿಚಾರಕ್ಕೆ ಬದ್ಧರು ಎಂದು ಅಂದುಕೊಂಡಿದ್ದೆವು ಎಂದು ಶೆಟ್ಟರ್ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಬಿಜೆಪಿ ಶೆಟ್ಟರ್ಗೆ ಯಾವ ಅನ್ಯಾಯ ಮಾಡಿತ್ತು? ಬಿ.ಬಿ. ಶಿವಪ್ಪ ಅವರಂಥವರು ಇದ್ದಾಗಲೂ ಶೆಟ್ಟರ್ಗೆ ವಿಪಕ್ಷ ಸ್ಥಾನ ಕೊಡಿಸಲಾಯಿತು. ಇವತ್ತಿನ ಸಂದರ್ಭವೇ ಆವತ್ತೂ ಸೃಷ್ಟಿಯಾಗಿತ್ತು. ಹೊಸಬರಿಗೆ ಸ್ಥಾನದ ಆಧಾರದಲ್ಲಿ ಶೆಟ್ಟರ್ಗೆ ವಿಪಕ್ಷ ಸ್ಥಾನ ಸಿಕ್ಕಿತ್ತು. ಆದರೆ ಶೆಟ್ಟರ್ ಶಾಸಕ ಸ್ಥಾನಕ್ಕೆ ಟಿಕೆಟ್ ಕೊಡ್ಲಿಲ್ಲ ಅಂತ ಇಷ್ಟೊಂದು ದೊಡ್ಡ ಪಕ್ಷ ಬಿಟ್ಟು ಹೋದರು. ಪಕ್ಷ ಬಿಟ್ಟು ಹೋದಮೇಲೆ ತೆಗಳಿಕೆ ಯಾಕೆ? ಎಂದೂ ಅವರು ಕೇಳಿದರು.
ಬಿ.ಎಸ್.ಯಡಿಯೂರಪ್ಪ ಅವರು ಕೆಜೆಪಿ ಕಟ್ಟಿದ್ದ ಕುರಿತು ಪ್ರತಿಕ್ರಿಯೆ ನೀಡಿರುವ ಶೋಭಾ, ನಾವು ಬೇರೆ ಪಕ್ಷಕ್ಕೆ ಹೋಗಲಿಲ್ಲ. ಹೊಸ ಪಕ್ಷ ಕಟ್ಟಿದ್ದೆವು, ಮತ್ತೆ ಬರಬೇಕು ಅನಿಸಿ ವಾಪಸ್ ಬಂದೆವು ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಲಿಂಗಾಯತ ಧರ್ಮ ಒಡೆಯಲು ಹೋಗಿದ್ದನ್ನು ಯಾರೂ ಮರೆತಿಲ್ಲ. ಕಾಂಗ್ರೆಸ್ನಲ್ಲೇ ಸಿಎಂ ಕಚ್ಚಾಟ ನಡೆಯುತ್ತಿದೆ. ಈಗ ನಮ್ಮಲ್ಲಿ ಸಿಎಂ ಆಗಿದ್ದ ಶೆಟ್ಟರ್ ಅಲ್ಲಿಗೆ ಹೋಗಿದ್ದಾರೆ. ಅಲ್ಲಿ ಶೆಟ್ಟರ್ ಸ್ಥಾನ ಏನು ಅಂತ ನನಗೆ ಗೊತ್ತಿಲ್ಲ ಎನ್ನುತ್ತ ಬಿಜೆಪಿಯಲ್ಲಿ ಹಿರಿಯರ ಕಡೆಗಣನೆ ಮಾಡಲಾಗುತ್ತಿದೆ ಎಂಬ ಶೆಟ್ಟರ್ ಆರೋಪಕ್ಕೆ ಅವರು ಸಮಜಾಯಿಷಿ ನೀಡಿದ್ದಾರೆ.
ಹಿರಿಯರ ಕಡೆಗಣನೆ ಮಾಡಲಾಗುತ್ತಿದೆ ಎಂದು ಶೆಟ್ಟರ್ ಹೇಳಿರುವ ಮಾತು ನಂಬುವಂಥದ್ದಲ್ಲ. ನಿರ್ಧಾರ ಕೈಗೊಳ್ಳುವ ಕೋರ್ ಕಮಿಟಿ ತಂಡದಲ್ಲೇ ಶೆಟ್ಟರ್ ಇದ್ದರು. ಧ್ವಜ ಬದಲಾದ ತಕ್ಷಣ ವಿಚಾರವೂ ಬದಲಾಯ್ತಾ? ನೀವೇ ಹೇಳಿ ಎಂದೂ ಶೋಭಾ ಕೇಳಿದ್ದಾರೆ.
Union Minister and BJP election management committee convener Shobha Karandlaje launched a counter-attack at the former Chief Minister Jagadish Shettar, who has joined the Congress, by asking if his ideology would change now “just because the (party) flag which he is holding has changed”.
16-09-25 11:00 pm
Bangalore Correspondent
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
16-09-25 07:48 pm
Mangalore Correspondent
Ex IPS Kempaiah, Professor Umeshchandra, Mang...
16-09-25 07:02 pm
Mangalore BJP Protest, UT khader, Red Stone:...
16-09-25 06:51 pm
UT Khader, Mangalore, Ullal: ಉಳ್ಳಾಲ ಕ್ಷೇತ್ರದಲ...
16-09-25 06:06 pm
ಕೆಂಪು ಕಲ್ಲು ನಿಯಮ ಸರಳೀಕರಣಕ್ಕೆ ಸಂಪುಟದಲ್ಲಿ ಒಪ್ಪಿ...
16-09-25 05:12 pm
16-09-25 10:40 pm
HK News Desk
Bidar crime: ಏಳು ವರ್ಷದ ಬಾಲಕಿಯನ್ನ ಮೂರನೇ ಮಹಡಿಯಿ...
16-09-25 07:12 pm
Bangalore Police, Inspector Suspend, Crime, D...
15-09-25 10:47 pm
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am