ತರೀಕೆರೆ ಟಿಕೆಟ್ ಬೇಕೆಂದು ಮೊಬೈಲ್ ಟವರ್ ಏರಿ ಕುಳಿತ ಬಿಜೆಪಿ ಕಾರ್ಯಕರ್ತ ; ಇಳಿಸಲು ಪೊಲೀಸರ ಹರಸಾಹಸ 

19-04-23 08:39 pm       HK News Desk   ಕರ್ನಾಟಕ

ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಸಿಕ್ಕಿಲ್ಲವೆಂದು ಘಟಾನುಘಟಿ ನಾಯಕರು ಬಂಡಾಯದ ಬಾವುಟ ಹಾರಿಸುತ್ತಿದ್ದರೆ, ಇಲ್ಲೊಬ್ಬ ಭೂಪ ಬಿಜೆಪಿ ಟಿಕೆಟ್ ನನಗೆ ಕೊಡಲೇ ಬೇಕೆಂದು ಬಿಎಸ್ಎನ್ಎಲ್ ಮೊಬೈಲ್ ಟವರ್ ಏರಿ ಹಠ ಹಿಡಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನಲ್ಲಿ ನಡೆದಿದೆ.

ಚಿಕ್ಕಮಗಳೂರು, ಎ.19 : ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಸಿಕ್ಕಿಲ್ಲವೆಂದು ಘಟಾನುಘಟಿ ನಾಯಕರು ಬಂಡಾಯದ ಬಾವುಟ ಹಾರಿಸುತ್ತಿದ್ದರೆ, ಇಲ್ಲೊಬ್ಬ ಭೂಪ ಬಿಜೆಪಿ ಟಿಕೆಟ್ ನನಗೆ ಕೊಡಲೇ ಬೇಕೆಂದು ಬಿಎಸ್ಎನ್ಎಲ್ ಮೊಬೈಲ್ ಟವರ್ ಏರಿ ಹಠ ಹಿಡಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನಲ್ಲಿ ನಡೆದಿದೆ.

ಅಜ್ಜಂಪುರ ತಾಲೂಕಿನ ಶಿವನಿ ಆರ್.ಎಸ್ ಎನ್ನುವ ಗ್ರಾಮದಲ್ಲಿ ಘಟನೆ ನಡೆದಿದ್ದು, ಶಿವನಿ ಆರ್.ಎಸ್. ಗ್ರಾಮದ ಬಿಜೆಪಿ ಕಾರ್ಯಕರ್ತ ರಂಗಪ್ಪ ಈ ರೀತಿ ಟವರ್ ಮೇಲೇರಿ ಕುಳಿತವರು. ಅಜ್ಜಂಪುರ ತರೀಕೆರೆ ವಿಧಾನಸಭೆ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟಿದ್ದು, ಬಿಜೆಪಿಯಿಂದ ಈಗಾಗಲೇ ಡಿ.ಎಸ್.ಸುರೇಶ್ ಕಣಕ್ಕಿಳಿದಿದ್ದಾರೆ. ಈ ನಡುವೆ ರಂಗಪ್ಪ, ನನಗೆ ಬಿಜೆಪಿ ಟಿಕೆಟ್ ಬೇಕೇ ಬೇಕು ಅಂತ ಪಟ್ಟು ಹಿಡಿದು ಮೊಬೈಲ್ ಟವರ್ ಏರಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ ರಂಗಪ್ಪನನ್ನು ಮನವೊಲಿಸಲು ಹರಸಾಹಸ ಪಟ್ಟಿದ್ದಾರೆ.

ರಂಗಪ್ಪ ಕಳೆದ 15 ವರ್ಷಗಳಿಂದ ಬಿಜೆಪಿ ಕಾರ್ಯಕರ್ತನಾಗಿದ್ದು ಟಿಕೆಟ್ ಗಾಗಿ ಹಠ ಹಿಡಿದು ಟವರ್ ಏರಿದ್ದು ಪೊಲೀಸರಿಗೆ ಪೀಕಲಾಟ ಮಾಡುವಂತಾಗಿದೆ.

Man climbs telephone tower demanding ticket to contest from Tarikere.