ಕೊನೆಕ್ಷಣದ ಕಸರತ್ತು ; ಶಿವಮೊಗ್ಗ ನಗರ ಈಶ್ವರಪ್ಪ ಕುಟುಂಬಕ್ಕಿಲ್ಲ ಟಿಕೆಟ್, ಅಶೋಕ್ ಕಟ್ಟಿಹಾಕಲು ಡಿಕೆಶಿ ಪ್ಲಾನ್, ಮಂಡ್ಯಕ್ಕೆ ಎಚ್ಡಿಕೆ –ಸುಮಲತಾ ಕೌಂಟರ್ !

19-04-23 10:58 pm       Bangalore Correspondent   ಕರ್ನಾಟಕ

ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯಾರು ಅನ್ನುವುದು ಭಾರೀ ಕುತೂಹಲ ಮೂಡಿಸಿದೆ. ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಪ್ರತಿನಿಧಿಸುತ್ತಿದ್ದ ಈ ಕ್ಷೇತ್ರದಲ್ಲಿ ಈ ಬಾರಿ ಯಾರನ್ನು ಕಣಕ್ಕಿಳಿಸುತ್ತಾರೆ ಅನ್ನುವ ಬಗ್ಗೆ ಇನ್ನೂ ಉತ್ತರ ಸಿಕ್ಕಿಲ್ಲ.

ಬೆಂಗಳೂರು, ಎ.19:  ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯಾರು ಅನ್ನುವುದು ಭಾರೀ ಕುತೂಹಲ ಮೂಡಿಸಿದೆ. ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಪ್ರತಿನಿಧಿಸುತ್ತಿದ್ದ ಈ ಕ್ಷೇತ್ರದಲ್ಲಿ ಈ ಬಾರಿ ಯಾರನ್ನು ಕಣಕ್ಕಿಳಿಸುತ್ತಾರೆ ಅನ್ನುವ ಬಗ್ಗೆ ಇನ್ನೂ ಉತ್ತರ ಸಿಕ್ಕಿಲ್ಲ. ಈಶ್ವರಪ್ಪ ಅವರು ಇತ್ತೀಚೆಗೆ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದರು.

ಈಶ್ವರಪ್ಪ ನಿವೃತ್ತಿ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರ ಕ್ಷೇತ್ರಕ್ಕೆ ಅವರ ಪುತ್ರ ಕಾಂತೇಶ್ ಸೀಟು ಗಿಟ್ಟಿಸಲಿದ್ದಾರೆ ಎನ್ನಲಾಗಿತ್ತು. ಆದರೆ ನಾಮಪತ್ರಕ್ಕೆ ಒಂದೇ ದಿನ ಇದ್ದರೂ, ಸೀಟು ಯಾರಿಗೆ ಎಂದು ಅಧಿಕೃತ ಘೋಷಣೆ ಆಗಿಲ್ಲ. ಪುತ್ರನ ಬದಲು ಸೊಸೆಯನ್ನು ಕಣಕ್ಕಿಳಿಸುತ್ತಾರೆ ಎಂಬ ಬಗ್ಗೆಯೂ ಸುದ್ದಿಗಳು ಹರಿದಾಡಿದ್ದವು. ಆದರೆ ಈಗ ಸಿಗುತ್ತಿರುವ ಮಾಹಿತಿ ಪ್ರಕಾರ, ಈಶ್ವರಪ್ಪ ಪುತ್ರನಿಗೂ ಇಲ್ಲ. ಸೊಸೆಗೂ ಟಿಕೆಟ್ ಇಲ್ಲ ಎನ್ನಲಾಗುತ್ತಿದೆ. ಬಿಜೆಪಿ ಹೈಕಮಾಂಡ್ ಶಿವಮೊಗ್ಗ ನಗರ ಕ್ಷೇತ್ರದಿಂದ ಚೆನ್ನಬಸಪ್ಪ ಎಂಬ ಕಾರ್ಯಕರ್ತನಿಗೆ ಟಿಕೆಟ್ ಫೈನಲ್ ಮಾಡಲಾಗಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಎ.20ರ ಬೆಳಗ್ಗೆ ಘೋಷಣೆ ಆಗಲಿದೆ ಎನ್ನುವ ಮಾಹಿತಿಗಳಿವೆ. ಚೆನ್ನಬಸಪ್ಪ ಹಿಂದೆ ಕಾಂಗ್ರೆಸ್ ನಿಂದ ಬಂದವರೆನ್ನಲಾಗುತ್ತಿದ್ದು ಯಡಿಯೂರಪ್ಪ ಬಣದಲ್ಲಿ ಗುರುತಿಸಿಕೊಂಡ ವ್ಯಕ್ತಿ ಎನ್ನಲಾಗುತ್ತಿದೆ. ತಮ್ಮ ಕುಟುಂಬಕ್ಕೆ ಟಿಕೆಟ್ ಸಿಗದೇ ಇದ್ದರೆ ಈಶ್ವರಪ್ಪ ಮುಂದಿನ ನಡೆ ಏನಿರುತ್ತೆ ಅನ್ನೋದು ಕುತೂಹಲ ಮೂಡಿಸಿದೆ.

Karnataka Congress chief DK Shivakumar's wealth up 68% in 5 yrs, holds  assets worth Rs 1,414 crore - BusinessToday

ಅಶೋಕ್ ಕಟ್ಟಿಹಾಕಲು ಡಿಕೆಶಿ ಪ್ಲಾನ್

ಇದೇ ವೇಳೆ, ಬೆಂಗಳೂರಿನ ಪದ್ಮನಾಭ ನಗರದಲ್ಲಿ ಕಾಂಗ್ರೆಸ್ ಕಡೆಯಿಂದ ಡಿಕೆ ಸುರೇಶ್ ಸ್ಪರ್ಧಿಸಲಿದ್ದಾರೆ ಎನ್ನಲಾಗುತ್ತಿದೆ. ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಸಚಿವ ಆರ್. ಅಶೋಕ್ ಸ್ಪರ್ಧಿಸಿದ್ದು ಕನಕಪುರ ಕ್ಷೇತ್ರದಲ್ಲೂ ಸ್ಪರ್ಧಿಸುತ್ತಿದ್ದಾರೆ. ಅಶೋಕ್ ಅವರನ್ನು ಕನಕಪುರಕ್ಕೆ ಬರುವುದನ್ನು ತಡೆದು ಪದ್ಮನಾಭನಗರದಲ್ಲೇ ಕಟ್ಟಿ ಹಾಕಲು ಡಿಕೆ ಶಿವಕುಮಾರ್ ತಂತ್ರ ಹೆಣೆದಿದ್ದು ಅದಕ್ಕಾಗಿ ತನ್ನ ಸೋದರ ಡಿಕೆ ಸುರೇಶ್ ಅವರನ್ನು ಅಲ್ಲಿ ಕಣಕ್ಕಿಳಿಸಲು ಮುಂದಾಗಿದ್ದಾರೆ. ಆದರೆ ಈ ಬಗ್ಗೆ ಅಧಿಕೃತ ಘೋಷಣೆ ಆಗಿಲ್ಲ.

Can take on HDK in Mandya: Sumalatha- The New Indian Express

No need to give prominence to Mandya MP Sumalatha: H D Kumaraswamy |  udayavani

ಮಂಡ್ಯಕ್ಕೆ ಎಚ್ಡಿಕೆ ಬಂದಲ್ಲಿ ಸುಮಲತಾ ಕಣಕ್ಕೆ

ಇದಲ್ಲದೆ, ಮಂಡ್ಯ ನಗರ ಕ್ಷೇತ್ರದಲ್ಲಿ ಜೆಡಿಎಸ್ ನಿಂದ ಎಚ್ಡಿಕೆ ಸ್ಪರ್ಧಿಸುತ್ತಾರೆ ಎನ್ನಲಾಗುತ್ತಿದೆ. ಆದರೆ ಇವರು ಸ್ಪರ್ಧಿಸುತ್ತಾರೆ ಎಂಬುದನ್ನು ಜೆಡಿಎಸ್ ನಾಯಕರಾಗಲೀ, ಎಚ್ಡಿಕೆ ಅವರಾಗಲೀ ದೃಢ ಪಡಿಸಿಲ್ಲ. ಎಚ್ಡಿಕೆ ಸ್ಪರ್ಧಿಸುವುದರಿಂದ ಒಕ್ಕಲಿಗರ ಬೆಲ್ಟ್ ಇರುವ ಮಂಡ್ಯದಲ್ಲಿ ಹಿಂದಿನಂತೇ ಪಕ್ಷದ ಶಾಸಕರೇ ಹೆಚ್ಚು ಆಯ್ಕೆಯಾಗಲು ಪ್ರಭಾವ ಬೀರಿದಂತಾಗುತ್ತದೆ ಎನ್ನುವ ಲೆಕ್ಕಾಚಾರ ಇದೆ. ಇದಕ್ಕಾಗಿ ಕುಮಾರಸ್ವಾಮಿ ಸ್ಪರ್ಧಿಸಲು ರೆಡಿಯಾಗಿದ್ದಾರೆ ಎನ್ನುವ ಮಾಹಿತಿ ಇದೆ. ಆದರೆ, ಎಚ್ಡಿಕೆ ಸ್ಪರ್ಧಿಸಿದರೆ ಬಿಜೆಪಿಯಿಂದ ಪ್ರಬಲ ಎದುರಾಳಿಯಾಗಿ ಸುಮಲತಾ ಅವರನ್ನೇ ಪಕ್ಷದಿಂದ ಕಣಕ್ಕಿಳಿಸುತ್ತೆ ಎನ್ನಲಾಗುತ್ತಿದೆ. ಕಾಂಗ್ರೆಸ್ ತಾನೇನೂ ಕಮ್ಮಿಯಿಲ್ಲವೆಂದು ಮೋಹಕ ತಾರೆ ರಮ್ಯಾ ಅವರನ್ನು ಈ ಕ್ಷೇತ್ರದಿಂದ ಕಣಕ್ಕಿಳಿಸಲು ರೆಡಿ ಮಾಡಿಕೊಂಡಿದೆ. ಹಾಗಾದಲ್ಲಿ ಮಂಡ್ಯ ಕ್ಷೇತ್ರ ಮತ್ತೊಂದು ಹೈವೋಲ್ಟೇಜ್ ಕ್ಷೇತ್ರ ಆಗಲಿದೆ.

No ticket for K S Eshwarappa family in Shivamogga, no ticket even for son Kantesh. Expressing disappointment over former Chief Minister Jagadish Shettar joining the Congress, his long-time colleague and former Minister K.S. Eshwarappa has appealed to him to reconsider his decision and return to the BJP.