ಬ್ರೇಕಿಂಗ್ ನ್ಯೂಸ್
20-04-23 11:08 pm Bangalore Correspondent ಕರ್ನಾಟಕ
ಬೆಂಗಳೂರು, ಎ.20 : ಚುನಾವಣೆ ಸಮಯದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ತನಿಖೆಗೆ ರಾಜ್ಯ ಸರ್ಕಾರ ಅನುಮತಿ ನೀಡಿದ್ದ ಕ್ರಮವನ್ನು ಪ್ರಶ್ನಿಸಿ ಡಿಕೆ ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಗುರುವಾರ ವಜಾಗೊಳಿಸಿದೆ.
ಡಿಕೆ ಶಿವಕುಮಾರ್ ಮನವಿ ತಿರಸ್ಕೃತಗೊಂಡಿರುವುದರಿಂದ ಚುನಾವಣೆ ಸಂದರ್ಭದಲ್ಲಿ ಅವರಿಗೆ ಸಂಕಷ್ಟ ಎದುರಾಗಿದೆ. ಡಿಕೆ ಶಿವಕುಮಾರ್ ಅರ್ಜಿ ವಿಚಾರಣೆಯನ್ನು ಏಪ್ರಿಲ್ 17ರಂದು ಪೂರ್ಣಗೊಳಿಸಿದ್ದ ಹೈಕೋರ್ಟ್ ತೀರ್ಪನ್ನು ಕಾಯ್ದಿರಿಸಿತ್ತು. ಗುರುವಾರ ತೀರ್ಪು ಪ್ರಕಟಿಸಿರುವ ಕೋರ್ಟ್ ಡಿಕೆ ಶಿವಕುಮಾರ್ ಅರ್ಜಿಯನ್ನು ತಿರಸ್ಕರಿಸಿದೆ.
ತಮ್ಮ ವಿರುದ್ಧ ಸಿಬಿಐ ತನಿಖೆಗೆ ತಡೆಯಾಜ್ಞೆ ನೀಡುವಂತೆ ಕೋರಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಅರ್ಜಿದಾರರ ಪರ ಹಾಗೂ ಸಿಬಿಐ ಪರ ವಕೀಲರ ವಾದವನ್ನು ಆಲಿಸಿತ್ತು. ಹಲವು ಬಾರಿ ತಡೆಯಾಜ್ಞೆ ವಿಸ್ತರಿಸಿದ್ದ ಕೋರ್ಟ್ ಈಗ ತಡೆಯಾಜ್ಞೆ ವಿಸ್ತರಿಸಲು ಆಗಲ್ಲ ಎಂದು ಹೇಳಿದೆ.
ಮೊದಲ ವಿಚಾರಣೆಯಲ್ಲಿ ಫೆಬ್ರವರಿ 24ರ ವರೆಗೂ ಸಿಬಿಐ ತನಿಖೆಗೆ ಮಧ್ಯಂತರ ತಡೆ ನೀಡಿ ಹೈಕೋರ್ಟ್ ಆದೇಶಿಸಿತ್ತು. ಬಳಿಕ ಸಿಬಿಐ ತನಿಖೆಗೆ ಮಧ್ಯಂತರ ತಡೆಯಾಜ್ಞೆಯನ್ನು ಮಾರ್ಚ್ 31, ಏಪ್ರಿಲ್ 6, ಏಪ್ರಿಲ್ 13, ಏಪ್ರಿಲ್ 17ರ ವರೆಗೆ ವಿಸ್ತರಿಸಿತ್ತು. ಈಗ ಚುನಾವಣೆ ಹೊತ್ತಲ್ಲಿ ಅರ್ಜಿಯನ್ನು ವಜಾಗೊಳಿಸಿದ್ದು ಡಿಕೆಶಿಗೆ ಕಂಟಕ ಆಗುವಂತೆ ಮಾಡಿದೆ.
The Karnataka High Court on Thursday dismissed Congress leader DK Shivakumar plea challenging the Bharatiya Janata Party-led state government’s decision seeking a Central Bureau of Investigation (CBI) probe into the disproportionate assets case against him. Karnataka Congress chief Shivakumar, who had questioned the State government’s move, had filed an application saying that the Karnataka government’s order for the CBI probe was wrong.
13-05-25 01:14 pm
HK News Desk
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 07:33 pm
Mangalore Correspondent
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm