ಈಶ್ವರಪ್ಪಗೆ  ನರೇಂದ್ರ ಮೋದಿ ಫೋನ್ ಕಾಲ್ ; ಬಿಜೆಪಿ ಜತೆಗೆ ಸದಾ ಇರಬೇಕು, ಪಕ್ಷವೂ ನಿಮ್ಮ ಜೊತೆಗೆ ಇರುತ್ತೆ ಎಂದು ಪ್ರಧಾನಿ ಆಶ್ವಾಸನೆ 

21-04-23 06:27 pm       Bangalore Correspondent   ಕರ್ನಾಟಕ

ಮಾಜಿ‌ ಸಚಿವ ಕೆ.ಎಸ್ ಈಶ್ವರಪ್ಪ ಅವರಿಗೆ ಫೋನ್ ಕರೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರ ಪಕ್ಷ ನಿಷ್ಠೆಯ ಬಗ್ಗೆ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.

ಬೆಂಗಳೂರು, ಎ.21: ಮಾಜಿ‌ ಸಚಿವ ಕೆ.ಎಸ್ ಈಶ್ವರಪ್ಪ ಅವರಿಗೆ ಫೋನ್ ಕರೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರ ಪಕ್ಷ ನಿಷ್ಠೆಯ ಬಗ್ಗೆ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. ಶುಕ್ರವಾರ ಫೋನ್ ಕರೆ ಮಾಡಿರುವ ಪ್ರಧಾನಿ ಮೋದಿ, ಪಕ್ಷ ವಿರುದ್ಧವಾದ ಯಾವುದೇ ನಿಲುವನ್ನು ತಾಳದೇ , ತಾಳ್ಮೆಯನ್ನು ಆಯುಧ ಮಾಡಿಕೊಂಡವನಿಗೆ ಮನ್ನಣೆ ಶತಸಿದ್ಧ ಎಂದಿದ್ದಾರಂತೆ.

ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಅವರು ಶಿವಮೊಗ್ಗ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿ ಆಗಿದ್ದರು. ಆದರೆ ಪಕ್ಷದ ಸೂಚನೆಯಂತೆ ಅವರು ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಣೆ ಮಾಡಿದ್ದರು. ಆದರೆ ಅವರ ಪುತ್ರನಿಗೆ ಟಿಕೆಟ್ ಕೊಡಿಸುವಲ್ಲಿ ಪ್ರಯತ್ನ ನಡೆಸಿದ್ದರು. ಆದರೆ ಕೊನೆಯ ಗಳಿಗೆಯಲ್ಲಿ ಅದು ಕೂಡಾ ಸಾಧ್ಯವಾಗಿರಲಿಲ್ಲ. ಹೀಗಿದ್ದರೂ ಅವರು ಪಕ್ಷದ ವಿರುದ್ಧ ಯಾವುದೇ ಹೇಳಿಕೆಯನ್ನು ಬಹಿರಂಗವಾಗಿ ನೀಡಿರಲಿಲ್ಲ. ಬದಲಾಗಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ ಸೇರ್ಪಡೆ ಆಗಿರುವ ನಡೆಯನ್ನು ಖಂಡಿಸಿದ್ದರು.

Mudra Scheme Created '8 Crore New Entrepreneurs': PM Modi Jabs P Chidambaram

ಈ ಹಿನ್ನೆಲೆಯಲ್ಲಿ ಅವರಿಗೆ ಪ್ರಧಾನಿ ಮೋದಿ ಫೋನ್ ಕರೆ ಮಾಡಿ, ಎಲ್ಲಾ ಆವಕಾಶ , ಆಸೆ ಆಮಿಷಗಳ ನಡುವೆ ಪಕ್ಷನಿಷ್ಠೆ ಎಂಬ ತಪ್ಪಸ್ಸನ್ನು ಎಡೆಬಿಡದೆ ಆಚರಿಸಿ , ಪಕ್ಷ ವಿರುದ್ಧವಾದ ಯಾವುದೇ ನಿಲುವನ್ನು ತಾಳದೇ , ತಾಳ್ಮೆಯನ್ನು ಆಯುಧ ಮಾಡಿಕೊಂಡವನಿಗೆ ಮನ್ನಣೆ ಶತಸಿದ್ಧ ಎಂದಿದ್ದಾರೆ. ಅಷ್ಟೇ ಅಲ್ಲದೆ, ಈಶ್ವರಪ್ಪನವರ ನಡೆಯನ್ನು ಪ್ರಶಂಶಿಸಿ,‌ ಪಕ್ಷ ಸದಾ ನಿಮ್ಮ ಜೊತೆ ಇದೆ ಎಂದು ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

I was humiliated and ill treated by the BJP,' K'taka ex-CM Jagadish Shettar  | Bengaluru - Hindustan Times

ಟಿಕೆಟ್ ಕೈತಪ್ಪಿದ ಕಾರಣಕ್ಕಾಗಿ ಬಿಜೆಪಿಯಲ್ಲಿ ದೊಡ್ಡ ಮಟ್ಟದ ಅಸಮಾಧಾನ ಭುಗಿಲೆದ್ದಿತ್ತು. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಮಾಜಿ ಡಿಸಿಎಂ‌ ಲಕ್ಷ್ಮಣ ಸವದಿ ಪಕ್ಷಕ್ಕೆ ರಾಜೀನಾಮೆ ‌ನೀಡಿ ಕಾಂಗ್ರೆಸ್ ಸೇರ್ಪಡೆ ಆಗಿದ್ದರು. ಬಿಜೆಪಿಯಲ್ಲಿ ‌ಲಿಂಗಾಯತರನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಈಶ್ವರಪ್ಪ ಅವರಿಗೆ ಫೋನ್ ಕರೆ ಮಾಡಿ ಮಾತುಕತೆ ನಡೆಸಿದ್ದು ಹಾಗೂ ಮೆಚ್ಚುಗೆ ಸೂಚಿಸಿದ್ದು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.

ಇತ್ತೀಚೆಗೆ, ಚುನಾವಣಾ ರಾಜಕೀಯಕ್ಕೆ ಗುಡ್ ಬೈ ಹೇಳಿದ್ದ ಈಶ್ವರಪ್ಪ, ತಮ್ಮ ಪುತ್ರ ಕಾಂತೇಶ್ ಅವರಿಗೆ ಈ ಬಾರಿ ಶಿವಮೊಗ್ಗ ನಗರ ಕ್ಷೇತ್ರದ ಟಿಕೆಟ್ ಕೊಡಿಸಲು ಪ್ರಯತ್ನಿಸಿದ್ದರು. ಅಸಲಿಗೆ, ಅವರು ತಮ್ಮ ಪುತ್ರನಿಗಾಗಿಯೇ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದರು. ಆದರೆ, ಬಿಜೆಪಿ ಹೈಕಮಾಂಡ್ ಕಾಂತೇಶ್ ಅವರಿಗೆ ಟಿಕೆಟ್ ಕೊಡಲಿಲ್ಲ. ಇದರಿಂದ ಅಸಮಾಧಾನಗೊಂಡಿದ್ದರೂ ಅವರು ಬಿಜೆಪಿ ಬಿಡುವುದಿಲ್ಲ. ಬಿಜೆಪಿ ಯಾರನ್ನು ಸೂಚಿಸುತ್ತದೋ ಅವರಿಗೆ ನಮ್ಮ ಬೆಂಬಲ ಎಂದು ಈಶ್ವರಪ್ಪ ಹೇಳಿಕೆ ಕೊಟ್ಟಿದ್ದರು. ಇದು, ಟಿಕೆಟ್ ಸಿಗದೇ ಇದ್ದಿದ್ದಕ್ಕೆ ಪಕ್ಷ ತೊರೆದ ಲಕ್ಷ್ಮಣ ಸವದಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಆದರ್ಶಮಯ ಪಾಠ ಎಂಬಂತಿತ್ತು. ಇದು ಬಿಜೆಪಿ ವಲಯದಲ್ಲಿ ಸಾಕಷ್ಟು ಮೆಚ್ಚುಗೆಗೂ ಪಾತ್ರವಾಗಿತ್ತು.

Denied a ticket to contest next month's Karnataka assembly election, KS Eshwarappa, a senior leader of the BJP, got a call from Prime Minister Narendra Modi himself on Friday. PM Modi thanked Mr Eshwarappa, a five-time member of the legislative assembly from Shivamogga in central Karnataka, for accepting the party's decision and praised his loyalty and commitment.