ಬ್ರೇಕಿಂಗ್ ನ್ಯೂಸ್
23-04-23 12:15 pm Bangalore Correspondent ಕರ್ನಾಟಕ
ಬೆಂಗಳೂರು, ಎ.23: ಕಿರುತೆರೆಯ ಜನಪ್ರಿಯ ಧಾರಾವಾಹಿ 'ಅಗ್ನಿಸಾಕ್ಷಿ'ಯಲ್ಲಿ ನಟಿಸಿ ಫೇಮಸ್ ಆಗಿದ್ದ ಹಾಗೂ ಸಾಕಷ್ಟು ಸಿನಿಮಾಗಳಲ್ಲೂ ಬಣ್ಣ ಹಚ್ಚಿದ್ದ ಸಂಪತ್ ಜಯರಾಮ್ ಅವರು ನಿಧನರಾಗಿದ್ದಾರೆ. ಅವರಿಗೆ 35 ವರ್ಷ ವಯಸ್ಸಾಗಿತ್ತು. ಶನಿವಾರ ನೆಲಮಂಗಲದಲ್ಲಿರುವ ತಮ್ಮ ನಿವಾಸದಲ್ಲೇ ಸಂಪತ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು ಎಂಬುದು ತಿಳಿದುಬಂದಿಲ್ಲ. ಸಂಪತ್ ಅವರಿಗೆ 1 ವರ್ಷದ ಹಿಂದೆಯಷ್ಟೇ ಮದುವೆ ಆಗಿತ್ತು. ಯುವ ನಟನ ನಿಧನಕ್ಕೆ ಸ್ನೇಹಿತರು, ಆಪ್ತರು ಕಂಬನಿ ಮಿಡಿದಿದ್ದಾರೆ.
ಮೂಲಗಳ ಪ್ರಕಾರ, ಸಂಪತ್‌ಗೆ ಸರಿಯಾದ ಸಿನಿಮಾದ ಅವಕಾಶಗಳು ಸಿಕ್ಕಿರಲಿಲ್ಲವಂತೆ. ಆ ಹಿನ್ನೆಲೆಯಲ್ಲಿ ಅವರು ತೀವ್ರ ಬೇಸರ ಮಾಡಿಕೊಂಡಿದ್ದರು ಎನ್ನಲಾಗಿದೆ. ಆ ಹಿನ್ನೆಲೆಯಲ್ಲಿ ಈ ದುಡುಕಿನ ನಿರ್ಧಾರ ತೆಗೆದುಕೊಂಡರೇ ಎಂಬ ಅನುಮಾನ ಮೂಡಿದೆ.
ಈಚೆಗಷ್ಟೇ ತೆರೆಕಂಡ 'ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ' ಸಿನಿಮಾದಲ್ಲಿ ಸಂಪತ್ ಒಂದು ಮುಖ್ಯ ಪಾತ್ರ ಮಾಡಿದ್ದರು. ಈ ಸಿನಿಮಾದಲ್ಲಿ ಹೀರೋ ಆಗಿ ನಟಿಸಿ, ನಿರ್ದೇಶನ ಮಾಡಿದವರು ರಾಜೇಶ್ ಧ್ರುವ. ಇದೀಗ ಸ್ನೇಹಿತನ ದುರಂತ ಅಂತ್ಯಕ್ಕೆ ಕಂಬನಿ ಮಿಡಿದಿರುವ ರಾಜೇಶ್ ಧ್ರುವ ಅವರು, 'ಲೋ ನಿನ್ನ ಅಗಲಿಕೆ ತಡ್ಕೊಳೋ ಶಕ್ತಿ ನಮಗಿಲ್ಲ ಮಗ.. ಅದೆಷ್ಟೋ ಸಿನಿಮಾ ಮಾಡೋದಿದೆ, ಅದೆಷ್ಟೋ ಜಗಳ ಬಾಕಿ ಇದೆ, ಕಂಡ ಕನಸು ನನಸು ಮಾಡ್ಕೋಳೋಕೆ ಇನ್ನೂ ಸಾಕಷ್ಟು ಸಮಯ ಇದೆ ಲೋ, ಇನ್ನೂ ನಿನ್ನ ದೊಡ್ಡ್ ದೊಡ್ಡ್ ಸ್ಟೇಜ್‌ನಲ್ಲಿ ನೋಡೋದ್ ಇದೆ ಕಣೋ, ಮುಚ್ಕೊಂಡು ಬಾರೋ ವಾಪಾಸ್ ಪ್ಲೀಸ್..' ಎಂದು ಭಾವುಕರಾಗಿ ಪೋಸ್ಟ್ ಹಾಕಿದ್ದಾರೆ.
ಲೋ ಮಗಾ ನಿನ್ನ ಅಗಲಿಕೆ ಸುದ್ದಿ ಕೇಳಿ ಜೀವ ಒಂತರ ಸಂಕಟದಲ್ಲಿ ಒದ್ದಾಡ್ತಾ ಇದೆ. ನನ್ನ ಸ್ನೇಹಕ್ಕೆ ಒಂದು ಸ್ಫೂರ್ತಿ ನೀನು. ಸದಾ ನನ್ನ ದಾರಿಯಲ್ಲಿ ಶಕ್ತಿಯಾಗಿ ಇರುತ್ತಿದ್ದೆ ಯಾಕೋ ಆ ದೇವರು ಹೀಗೆ ಮಾಡಿಬಿಟ್ಟ. ಸಂಪತ್ ಮಿಸ್ ಮಾಡಿಕೊಳ್ಳೋ ಜೀವ ನೀನಲ್ಲ. ಆದರೆ ಬೇರೆ ದಾರಿನೂ ಇಲ್ಲ. ಆ ದೇವರು ನಿನ್ನ ಆತ್ಮಕ್ಕೆ ಶಾಂತಿ ನೀಡಲಿ' ಎಂದು ಗಣೇಶ್ ನಾಯ್ಕ್ ಎಂಬ ಅವರ ಮತ್ತೋರ್ವ ಸ್ನೇಹಿತರು ಪೋಸ್ಟ್ ಹಂಚಿಕೊಂಡಿದ್ದಾರೆ. ಸಂಪತ್ ಜಯರಾಮ್ ಅಗಲಿಕೆ ಅವರ ಸ್ನೇಹಿತರಿಗೆ, ಕುಟುಂಬ ವರ್ಗದವರಿಗೆ ಅಪಾರ ನೋವನ್ನುಂಟು ಮಾಡಿದೆ. ಕನ್ನಡ ಚಿತ್ರರಂಗದಲ್ಲಿ ಮಿಂಚಿಬೇಕಿದ್ದ ಪ್ರತಿಭೆಯೊಂದು ಬಹುಬೇಗನೇ ತನ್ನ ಬದುಕನ್ನು ಅಂತ್ಯಗೊಳಿಸಿಕೊಂಡಿದೆ.
Actor Sampath Jayaram, known for his work in television and cinema, passed away by suicide on April 22 in Bengaluru. Sampath had made a name for himself over the past few years through his roles in TV serials and had also featured in a select few films.
13-05-25 09:37 pm
HK News Desk
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 07:33 pm
Mangalore Correspondent
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm