ಬ್ರೇಕಿಂಗ್ ನ್ಯೂಸ್
26-04-23 01:05 pm HK News Desk ಕರ್ನಾಟಕ
ಹುಬ್ಬಳ್ಳಿ, ಎ.26: ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ಮರಳಿ ಬಿಜೆಪಿಗೆ ಸೇರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿಯ ಹಿರಿಯ ನಾಯಕ ಬಿ. ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರಿ ವಿಶ್ವಾಸದ್ರೋಹ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಅವರನ್ನು ಕ್ಷಮಿಸುವುದಿಲ್ಲ. ಅವರನ್ನು ಸೋಲಿಸುವಲ್ಲಿ ನಾವು ಯಶಸ್ವಿಯಾಗುತ್ತೇವೆ ಎಂದು ಯಡಿಯೂರಪ್ಪ ಹೇಳಿದ್ದು, ʻʻ ನಾನು ಕೆಜೆಪಿ ಕಟ್ಟಿ ದೊಡ್ಡ ಅಪರಾಧ ಮಾಡಿದ್ದೆ ನಿಜ. ನಾನು ಬಿಜೆಪಿ ಬಿಟ್ಟಿದ್ದರೂ ಶೆಟ್ಟರ್ ಅವರಂತೆ ಕಾಂಗ್ರೆಸ್ ಸೇರಿರಲಿಲ್ಲ. ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿದ್ದಕ್ಕಾಗಿ ರಾಜ್ಯದ ಜನತೆಯ ಕ್ಷಮೆ ಸಹ ಕೇಳಿದ್ದೇನೆʼʼ ಎಂದು ಯಡಿಯೂರಪ್ಪ ಹೇಳಿದ್ದಾರೆ.
ಪಕ್ಷದ ಸೂಚನೆಯಂತೆ ಜಗದೀಶ್ ಶೆಟ್ಟರ್ ಅವರನ್ನು ಸೋಲಿಸಲು ತಂತ್ರ ರೂಪಿಸಲೆಂದೇ ಇಲ್ಲಿಗೆ ಆಗಮಿಸಿರುವ ಯಡಿಯೂರಪ್ಪ, ಹಲವು ನಾಯಕರೊಂದಿಗೆ ಈ ಕುರಿತು ಚರ್ಚೆ ನಡೆಸಿದ್ದಾರೆ. ಪ್ರಮುಖವಾಗಿ ಲಿಂಗಾಯಿತ ನಾಯಕರೊಂದಿಗೂ ಅವರು ಸಭೆ ನಡೆಸಿದ್ದಾರೆ.
ಸಭೆಯ ಬಳಿಕ ಮಾತನಾಡಿದ ಯಡಿಯೂರಪ್ಪ, ಕಾಂಗ್ರೆಸ್ ಸೇರಿರುವ ಜಗದೀಶ್ ಶೆಟ್ಟರ್ ಅವರನ್ನು ಸೋಲಿಸುವ ಉದ್ದೇಶದಿಂದಲೇ ಸಭೆ ಕರೆಯಲಾಗಿತ್ತು. ಶತಾಯಗತಾಯ ಅವರನ್ನು ಸೋಲಿಸಲು ತಂತ್ರಗಾರಿಕೆ ರೂಪಿಸಲಾಗಿದೆ. ಪಕ್ಷ ವಿರೋಧಿಗೆ ತಕ್ಕ ಪಾಠ ಕಲಿಸುವಂತೆ ವೀರಶೈವ ಲಿಂಗಾಯತ ಸಮುದಾಯದವರಿಗೆ ಕರೆ ನೀಡಿದ್ದೇನೆ. ಹೀಗಾಗಿ ಈ ಚುನಾವಣೆಯಲ್ಲಿ ಜಗದೀಶ್ ಶೆಟ್ಟರ್ ಸೋಲು ಖಚಿತ ಎಂದು ಯಡಿಯೂರಪ್ಪ ಹೇಳಿದ್ದಾರೆ.
ಜಗದೀಶ್ ಶೆಟ್ಟರ್ ಸೋಲಿಸಲು ಹುಬ್ಬಳ್ಳಿ-ಧಾರವಾಡ ಕೇಂದ್ರ ಕ್ಷೇತ್ರದಲ್ಲಿ ನಾನೇ ರೋಡ್ ಶೋ ನಡೆಸುತ್ತೇನೆ ಎಂದು ಹೇಳಿದ ಯಡಿಯೂರಪ್ಪ, ಮುಂದೆ ಪ್ರಧಾನಿ ಮೋದಿ ಸಹ ಹುಬ್ಬಳ್ಳಿಗೆ ಬಂದು ಬಿಜೆಪಿ ಪರವಾಗಿ ಪ್ರಚಾರ ನಡೆಸುವ ಸಾಧ್ಯತೆಗಳಿವೆ ಎಂದು ಯಡೀಯೂರಪ್ಪ ಪ್ರಕಟಿಸಿದರು.
ಅವರಿಗೆ ಏನು ಅನ್ಯಾಯ ಮಾಡಿದ್ದೇವೆ?
ಇಂದು ಬೆಳಗ್ಗೆ ನಡೆದ ವೀರಶೈವ ಲಿಂಗಾಯಿತ ನಾಯಕರ ಸಭೆಯಲ್ಲಿ ಮಾತನಾಡಿದ ಬಿ ಎಸ್ ಯಡಿಯೂರಪ್ಪ ʻʻನಾನು ನಿಮ್ಮನ್ನು ಈ ಸಭೆಗೆ ಕರೆದಿರೋದು ಸ್ಪಷ್ಟ ಕಾರಣಕ್ಕಾಗಿ. ಜಗದೀಶ್ ಶೆಟ್ಟರ್ ಬಗ್ಗೆ ನಡೆದ ಸತ್ಯ ಸಂಗತಿ ಹೇಳಲು ಈ ಸಭೆ ಕರೆದಿದ್ದಾರೆ. ಅವರನ್ನು ಪಕ್ಷ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ, ರಾಜ್ಯಾಧ್ಯಕ್ಷರನ್ನಾಗಿ ಮಾಡಿದೆ. ಬಿ.ಬಿ.ಶಿವಪ್ಪ ಅವರನ್ನು ಬಿಟ್ಟು ಶೆಟ್ಟರ್ ಪರವಾಗಿ ನಾನೇ ನಿಂತು ವಿರೋಧ ಪಕ್ಷದ ನಾಯಕನನ್ನಾಗಿ ಮಾಡಿದ್ದೆವು. ಅವರಿಗೆ ಏನು ಅನ್ಯಾಯ ಮಾಡಿದ್ದೆವು?ʼʼ ಎಂದು ಪ್ರಶ್ನಿಸಿದರು.
ಜಗದೀಶ್ ಶೆಟ್ಟರ್ ಅವರೊಂದಿಗೆ ಸ್ವತಃ ಪ್ರಧಾನಿ ಮೋದಿಯವರೇ ಮಾತನಾಡಿದ್ದಾರೆ. ನಿಮ್ಮ ಶ್ರೀಮತಿಯವರನ್ನು ನಿಲ್ಲಿಸಿ, ಅವರಿಗೆ ಟಿಕೇಟ್ ಕೊಡ್ತೇವೆ ಎಂದು ಭರವಸೆ ನೀಡಿದ್ದರು. ಅಲ್ಲದೆ, ರಾಜ್ಯಸಭಾ ಸದಸ್ಯರಾಗಿ, ಕೇಂದ್ರ ಮಂತ್ರಿ ಆಗುವಂತೆ ಆಫರ್ ಕೂಡ ನೀಡಲಾಗಿತ್ತು. ಇಷ್ಟೆಲ್ಲ ಆದಮೇಲೂ ಅವರು ಪಕ್ಷಕ್ಕೆ ದ್ರೋಹ ಮಾಡಿ ಕಾಂಗ್ರೆಸ್ ಸೇರಿದ್ದಾರೆ ಎಂದು ಯಡಿಯೂರಪ್ಪ ಆರೋಪಿಸಿದ್ದಾರೆ.
Former Karnataka CM BS Yediyurappa has met with Lingayat leaders and has sought their help in defeating Jagadish Shettar, who shifted to the Congress a while ago. He has said that 'you may take it up as a challenge to defeat Jagadish Shettar.' He added that ' I am coming here to tell you that you must teach Shettar a lesson so that he doesn't do such a thing again.'
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 10:33 pm
Mangalore Correspondent
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm