ದೇಶ ಮತ್ತೆ ಧರ್ಮದ ಆಧಾರದಲ್ಲಿ ಒಡೆಯುವುದನ್ನು ನಾವು ಬಯಸಲ್ಲ ; ಮಂಡ್ಯ ರೋಡ್ ಶೋದಲ್ಲಿ ಯೋಗಿ ಆದಿತ್ಯನಾಥ್ 

26-04-23 06:49 pm       HK News Desk   ಕರ್ನಾಟಕ

ದೇಶವನ್ನು 1947ರಲ್ಲಿ ಧರ್ಮದ ಆಧಾರದಲ್ಲಿ ವಿಭಜಿಸಲಾಗಿತ್ತು. ಮತ್ತೊಮ್ಮೆ ದೇಶ ಧರ್ಮದ ಕಾರಣಕ್ಕೆ ವಿಭಜನೆಯಾಗುವುದನ್ನು ನಾವು ಬಯಸುವುದಿಲ್ಲ.

ಮಂಡ್ಯ, ಎ.26 : ದೇಶವನ್ನು 1947ರಲ್ಲಿ ಧರ್ಮದ ಆಧಾರದಲ್ಲಿ ವಿಭಜಿಸಲಾಗಿತ್ತು. ಮತ್ತೊಮ್ಮೆ ದೇಶ ಧರ್ಮದ ಕಾರಣಕ್ಕೆ ವಿಭಜನೆಯಾಗುವುದನ್ನು ನಾವು ಬಯಸುವುದಿಲ್ಲ. ಅದಕ್ಕಾಗಿ ದೇಶದಲ್ಲಿ ಬಿಜೆಪಿ ಆ ರೀತಿಯ ಮೀಸಲಾತಿಯನ್ನು ವಿರೋಧಿಸುತ್ತದೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. 

ಮಂಡ್ಯದಲ್ಲಿ ಬುಧವಾರ ನಡೆದ ಬಿಜೆಪಿ ಚುನಾವಣಾ ಪ್ರಚಾರ ರ‍್ಯಾಲಿಯಲ್ಲಿ ಮಾತನಾಡಿದ ಯೋಗಿ, ಕರ್ನಾಟಕ ಸರ್ಕಾರ ಧರ್ಮ ಆಧರಿತ ಮುಸ್ಲಿಂ ಮೀಸಲಾತಿ ರದ್ದುಪಡಿಸಿದ್ದನ್ನು ನೇರವಾಗಿ ಉಲ್ಲೇಖಿಸದೆ, ಆ ರೀತಿಯ ಮೀಸಲಾತಿ ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದರು. ಉತ್ತರ ಪ್ರದೇಶ ಮತ್ತು ಕರ್ನಾಟಕದ ಸಂಬಂಧ ಇಂದು ನಿನ್ನೆಯದಲ್ಲ. ರಾಮನ ಕಾಲ ತ್ರೇತಾಯುಗದಿಂದಲೂ ಈ ಸಂಬಂಧ ಇದೆ. ಭಗವಾನ್ ಶ್ರೀರಾಮನ ಸಹಾಯಕನಾಗಿದ್ದ ಹನುಮಂತ ಕರ್ನಾಟಕದ ನೆಲದಲ್ಲಿ ಜನಿಸಿದ್ದ. ಆತನ ವಾಸಸ್ಥಾನ ಆಗಿದ್ದ ಅಂಜನಾದ್ರಿ ಪರ್ವತ ಕರ್ನಾಟಕದಲ್ಲಿದೆ. ಆ ಕಾರಣಕ್ಕೆ ಉತ್ತರ ಪ್ರದೇಶದ ಅಯೋಧ್ಯೆ ಮತ್ತು ಕರ್ನಾಟಕಕ್ಕೆ ಸಂಬಂಧ ಇದೆ ಎಂದರು.

Yogi Adityanath's maiden poll campaign in Mandya | Deccan Herald

Yogi Adityanath woos Mandya citing benefits of double engine govt - The  Hindu

ಕೇಂದ್ರ - ರಾಜ್ಯಗಳ “ಡಬಲ್ ಇಂಜಿನ್ ಸರ್ಕಾರ”ದಿಂದಾಗಿ ಉತ್ತರ ಪ್ರದೇಶದಲ್ಲಿ ಕಳೆದ ಆರು ವರ್ಷಗಳಲ್ಲಿ ಯಾವುದೇ ಗಲಭೆಗಳು ನಡೆದಿಲ್ಲ. ಕೇಂದ್ರ ಮತ್ತು ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ದೇಶದ್ರೋಹಿ ಪಿಎಫ್‌ಐ ಸಂಘಟನೆಯನ್ನು ನಿಷೇಧಿಸಲಾಗಿದೆ. ಇಸ್ಲಾಮಿಕ್ ಭಯೋತ್ಪಾದನೆಯನ್ನು ಬೆನ್ನು ಮುರಿದಿದ್ದೇವೆ ಎಂದರು. 

Yogi Adityanath woos Mandya citing benefits of double engine govt - The  Hindu

ಕಾಂಗ್ರೆಸ್ ತುಷ್ಠೀಕರಣ ರಾಜಕಾರಣ ಮಾಡುತ್ತಿದೆ, ಮೋದಿ ಸರ್ಕಾರ ಪಿಎಫ್ ಐ ನಿಷೇಧಿಸಿದೆ:  ಯೋಗಿ ಆದಿತ್ಯನಾಥ್- Kannada Prabha

Yogi Adityanath woos Mandya citing benefits of double engine govt - The  Hindu

yogi adityanath calls for vote in favor of BJPYogi Adityanath: ಟೀಂ  ಇಂಡಿಯಾದಲ್ಲಿ ಕರ್ನಾಟಕದ ಎಷ್ಟು ಆಟಗಾರರು ಇರಬೇಕು ನಿರ್ಧಾರ ಮಾಡಿ: ಮಂಡ್ಯದಲ್ಲಿ ಯೋಗಿ  ಆದಿತ್ಯನಾಥ Vistara News

'ಡಬಲ್ ಇಂಜಿನ್’ ಸರಕಾರ ಒಂದು ಕೇಂದ್ರದಲ್ಲಿ ಮತ್ತು ಇನ್ನೊಂದು ತನ್ನ ತವರು ರಾಜ್ಯದಲ್ಲಿ ಸಾಧ್ಯವಾದಷ್ಟು ಪ್ರಬಲವಾಗಿ ತೋರಿಸಿದೆ. ಉತ್ತರ ಪ್ರದೇಶದಲ್ಲಿ ಭದ್ರತೆ ಮತ್ತು ಸಮೃದ್ಧಿಯ ಭರವಸೆ ಇದೆ. ಕರ್ಫ್ಯೂ ಇಲ್ಲ ಮತ್ತು ಗಲಭೆಯೂ ಇಲ್ಲ. ಅಲ್ಲಿ ಎಲ್ಲವೂ ಚೆನ್ನಾಗಿದೆ. ಕಳೆದ ಆರು ವರ್ಷಗಳಲ್ಲಿ ಉತ್ತರ ಪ್ರದೇಶದಲ್ಲಿ ಯಾವುದೇ ಗಲಭೆ ನಡೆದಿಲ್ಲ ಎಂದರು. ಬಿಜೆಪಿ ನಂಬಿರುವ ‘ಏಕ್ ಭಾರತ್, ಶ್ರೇಷ್ಠ ಭಾರತ’ ಪರಿಕಲ್ಪನೆ ಭಾರತವನ್ನು ಮುಂದಕ್ಕೆ ಕೊಂಡೊಯ್ಯುತ್ತದೆ. ನಾವು ತುಷ್ಟೀಕರಣ ಮೂಲಕ ಯಾರನ್ನೂ ಸಮಾಧಾನ ಪಡಿಸುವುದರಲ್ಲಿ ನಂಬಿಕೆ ಇರಿಸಿಲ್ಲ. ಆದರೆ ಸಬಲೀಕರಣದಲ್ಲಿ ನಂಬಿಕೆ ಇರಿಸಿದೆ ಎಂದರು. ಮಂಡ್ಯದಲ್ಲಿ ನಡೆದ ರೋಡ್ ಶೋದಲ್ಲಿ ಭಾರೀ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು. ಮಂಡ್ಯ ಸಂಸದೆ ಸುಮಲತಾ ಕೂಡ ಯೋಗಿ ಜೊತೆಗೆ ರೋಡ್ ಶೋ ನಡೆಸಿದ್ದು ವಿಶೇಷವಾಗಿತ್ತು.

In his first election rally in poll-bound Karnataka, Uttar Pradesh Chief Minister Yogi Adityanath on Wednesday attacked the Congress over religion-based reservation saying that it was against the Constitution. He also claimed that no riots took place in Uttar Pradesh in the past six years due to the strong ''double engine government".