ತಂದೆಯೊಂದಿಗೆ ಶೃಂಗೇರಿ ಬಂದಿದ್ದೆ ; ದೇವಿ ದರ್ಶನದ ಬಳಿಕ ಭಾವನಾತ್ಮಕ ಕ್ಷಣ ಎಂದ ಪ್ರಿಯಾಂಕ ಗಾಂಧಿ 

26-04-23 11:19 pm       HK News Desk   ಕರ್ನಾಟಕ

ನನ್ನ ಜೀವನದ ಭಾವನಾತ್ಮಕ ಕ್ಷಣ ಇದು. ತಂದೆ ರಾಜೀವ್ ಗಾಂಧಿ ಜೊತೆಗೆ ಶೃಂಗೇರಿ ಮಠಕ್ಕೆ ಭೇಟಿ ಕೊಟ್ಟಿದ್ದೆ. ಅಂದು ಕೂಡ ದೇವಿಯ ದರ್ಶನ, ಶಂಕರಾಚಾರ್ಯರ ದರ್ಶನ ಪಡೆದಿದ್ದೆ.

ಚಿಕ್ಕಮಗಳೂರು, ಎ.26 : ನನ್ನ ಜೀವನದ ಭಾವನಾತ್ಮಕ ಕ್ಷಣ ಇದು. ತಂದೆ ರಾಜೀವ್ ಗಾಂಧಿ ಜೊತೆಗೆ ಶೃಂಗೇರಿ ಮಠಕ್ಕೆ ಭೇಟಿ ಕೊಟ್ಟಿದ್ದೆ. ಅಂದು ಕೂಡ ದೇವಿಯ ದರ್ಶನ, ಶಂಕರಾಚಾರ್ಯರ ದರ್ಶನ ಪಡೆದಿದ್ದೆ. ಸುದೀರ್ಘ ವರ್ಷಗಳ ಬಳಿಕ ಮತ್ತೆ ದೇವಿಯ ದರ್ಶನ ಪಡೆದಿದ್ದೇನೆ. ಮನಸ್ಸಿಗೆ ತುಂಬ ಸಂತಸ ಆಗಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಹೇಳಿದ್ದಾರೆ.‌

ಶೃಂಗೇರಿ ಮಠ, ದೇವಸ್ಥಾನಕ್ಕೆ ಭೇಟಿ ಕೊಟ್ಟ ಪ್ರಿಯಾಂಕಾ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು. ನನ್ನ ಲೆಕ್ಕಾಚಾರದ ಪ್ರಕಾರ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತೆ. ಬಿಜೆಪಿ ಸರ್ಕಾರ ರಾಜ್ಯದಲ್ಲಿ ಬೊಕ್ಕಸ ಲೂಟಿ ಮಾಡಿದೆ. ಹೀಗಾಗಿ ಜನರೇ ಈ ಬಾರಿ ಬದಲಾವಣೆ ಬಯಸಿದ್ದಾರೆ.‌ ಬಿಜೆಪಿ ಸರ್ಕಾರ ಏನು ಮಾಡಿದೆ ಅಂತಾ ಜನರಿಗೆ ಗೊತ್ತಿದೆ. ಕಾಂಗ್ರೆಸ್ ಸರ್ಕಾರದ ಇದ್ದಾಗ ಜನಪರ ಯೋಜನೆ ಜಾರಿ ತಂದಿದ್ದೇವೆ. ಇದೆಲ್ಲವನ್ನ ಪರಿಗಣಿಸಿ ಜನ ಮತ ನೀಡ್ತಾರೆ ಎಂದರು.‌ ಸಿಎಂ ಯಾರಾಗುತ್ತಾರೆ ಎಂಬ ಪ್ರಶ್ನೆಗೆ, ಮುಂದೆ ನೋಡೋಣ, ಏನಾಗುತ್ತೆ ಅಂತ ಎಂದರು. 

ಈ ಹಿಂದೆ 1978 ರಲ್ಲಿ ಇಂದಿರಾ ಗಾಂಧಿ ಚಿಕ್ಕಮಗಳೂರು ಸಂಸತ್ ಕ್ಷೇತ್ರದಲ್ಲಿ ಸ್ಪರ್ಧಿಸಿದಾಗ ಶೃಂಗೇರಿ ಭೇಟಿ ನೀಡಿದ್ದರು. 2023ರಲ್ಲಿ ಇಂದಿರಾ ಮೊಮ್ಮಗಳು ಪ್ರಿಯಾಂಕ ಗಾಂಧಿ ಶೃಂಗೇರಿ ಮಠಕ್ಕೆ ಆಗಮಿಸಿದ್ದಾರೆ. ಶೃಂಗೇರಿ ಬಳಿಕ ಬಾಳೆಹೊನ್ನೂರು ರಂಭಾಪುರಿ ಪೀಠಕ್ಕೆ ಭೇಟಿ ನೀಡಿದ್ದು ಆನಂತರ ಶೃಂಗೇರಿ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ.ರಾಜೇಗೌಡ ಪರ ಮತಯಾಚನೆ ನಡೆಸಿದ್ದಾರೆ.

Trying to strike an emotional chord with people of Chikkamagaluru district by recalling the association with people of the region, Congress General Secretary Priyanka Gandhi Vadra on Wednesday said it was now a time of struggle for the family, similar to what her grandmother and former Prime Minister Indira Gandhi was going through when she came before them nearly 45 years ago.