ಪ್ರಚಾರ ಕಾರ್ಯದಲ್ಲಿದ್ದಾಗಲೇ ಮಾಜಿ ಡಿಸಿಎಂ ಪರಮೇಶ್ವರ್ ತಲೆಗೆ ಕಲ್ಲೇಟು ; ವೈದ್ಯರಿಲ್ಲದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪರಮೇಶ್ವರ್ ಪರದಾಟ ! 

28-04-23 10:53 pm       HK News Desk   ಕರ್ನಾಟಕ

ಮಾಜಿ ಡಿಸಿಎಂ, ಕಾಂಗ್ರೆಸ್ ಮುಖಂಡ ಡಾ.ಪರಮೇಶ್ವರ್ ಚುನಾವಣೆ ಪ್ರಚಾರದಲ್ಲಿದ್ದಾಗ ಯಾರೋ ಕಿಡಿಗೇಡಿ ಕಲ್ಲೆಸೆದ ಘಟನೆ ನಡೆದಿದ್ದು ಅವರನ್ನು ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ‌

ತುಮಕೂರು, ಎ.28 : ಮಾಜಿ ಡಿಸಿಎಂ, ಕಾಂಗ್ರೆಸ್ ಮುಖಂಡ ಡಾ.ಪರಮೇಶ್ವರ್ ಚುನಾವಣೆ ಪ್ರಚಾರದಲ್ಲಿದ್ದಾಗ ಯಾರೋ ಕಿಡಿಗೇಡಿ ಕಲ್ಲೆಸೆದ ಘಟನೆ ನಡೆದಿದ್ದು ಅವರನ್ನು ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ‌

ಕೊರಟಗೆರೆ ವಿಧಾನಸಭೆ ಕ್ಷೇತ್ರದ ಭೈರೇನಹಳ್ಳಿಯಲ್ಲಿ ಪ್ರಚಾರದಲ್ಲಿ ತೊಡಗಿದ್ದ ವೇಳೆ ಘಟನೆ ನಡೆದಿದೆ. ಕಾರ್ಯಕರ್ತರು ಗುಂಪಾಗಿ ಘೋಷಣೆ ಕೂಗಿಕೊಂಡು ಹೋಗುತ್ತಿದ್ದಾಗ ಒಂದಷ್ಟು ಯುವಕರು ಪರಮೇಶ್ಬರ್ ಅವರನ್ನ ಎತ್ತಿ ಕುಣಿಸುತ್ತಿದ್ದರು. ಈ ವೇಳೆ ಗುಂಪಿನಲ್ಲಿದ್ದ ಕಿಡಿಗೇಡಿಯೊಬ್ಬ ಕಲ್ಲು ತೂರಿದ್ದಾನೆ. 

Karnataka: Karnataka News, State News - Vartha bharati

பிரசாரம்.. காங்கிரஸ் மாஜி துணை முதல்வரின் மண்டை உடைந்தது.. ரத்தம் சொட்ட  சொட்ட ஓட்டம்.. பரபரப்பு | Karnataka Election: Former Deputy CM and  Koratagere Congress Candidate ...

ಕಲ್ಲು ಬಿದ್ದ ಕೂಡಲೇ ತಲೆಯ ಭಾಗ ಹಿಡಿದುಕೊಂಡೇ ಗುಂಪಿನಿಂದ ಹೊರಬಂದ ಪರಮೇಶ್ವರ್ ಅವರನ್ನು ಕೂಡಲೇ ಅಲ್ಲಿಯೇ ಪಕ್ಕದ ಅಕ್ಕಿರಾಂಪುರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪ್ರಥಮ ಚಿಕಿತ್ಸೆಗಾಗಿ ಒಯ್ಯಲಾಗಿದೆ. ಆದರೆ ಅಲ್ಲಿ ವೈದ್ಯರು ಇರಲಿಲ್ಲ. ವೈದ್ಯರು ಐದು ಗಂಟೆ ಮೊದಲೇ ಆಸ್ಪತ್ರೆ ಬಂದ್ ಮಾಡಿ ತೆರಳಿದ್ದರು. ಬಳಿಕ ಗ್ರೂಪ್ ಡಿ ನೌಕರ ಬಂದು ತಲೆಯಲ್ಲಿ ರಕ್ತ ಸೋರುತ್ತಿದ್ದ ಜಾಗಕ್ಕೆ ತಾತ್ಕಾಲಿಕ ಬ್ಯಾಂಡೇಜ್ ಹಾಕಿದ್ದಾರೆ. ಬಳಿಕ ಪರಮೇಶ್ವರ್ ಅವರನ್ನು ತುಮಕೂರಿನ‌ ಸಿದ್ದಾರ್ಥ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

Congress senior leader Parameshwar head injured after stone pelted during campaigning.