ಬ್ರೇಕಿಂಗ್ ನ್ಯೂಸ್
29-04-23 11:04 pm HK News Desk ಕರ್ನಾಟಕ
ಕುಷ್ಟಗಿ, ಎ.29: ಮಕ್ಕಳ ಸಿಹಿ ತಿನಿಸು ಹೆಬ್ಬೆರೆಳು ಗಾತ್ರದ ಜೇಮ್ಸ್ ಗಾಜಿನ ಬಾಟಲಿ ಗಂಟಲಲ್ಲಿ ಸಿಲುಕಿ ಮೂರು ವರ್ಷದ ಬಾಲಕ ಅಕಾಲಿಕ ಸಾವೀಗೀಡಾದ ಹೃದಯವಿದ್ರಾವಕ ಘಟನೆ ಕುಷ್ಟಗಿ ಪಟ್ಟಣದಲ್ಲಿ ನಡೆದಿದೆ.
ಕುಷ್ಟಗಿ ವಾರ್ಡ್ ನಂ.8 ಮದಿನಾ ಗಲ್ಲಿಯ ನಿವಾಸಿ ರಬ್ಬಾನಿ ಬಾಗೇವಾಡಿ ಅವರ ಮಗ ಮಹ್ಮದ್ ಅಹ್ಮದ್ ರಬ್ಬಾನಿ ಬಾಗೇವಾಡಿ ಎಂದು ಗುರುತಿಸಲಾಗಿದೆ. ಬಾಲಕ 1ರೂ.ಗೆ ಸಿಹಿ ತಿನಿಸು ಜೇಮ್ಸ್ ಬಾಟಲಿ ಖರೀದಿಸಿದ್ದು ಅದರ ಮುಚ್ಚಳ ಬಾಯಿಂದ ತೆಗೆಯಲು ಯತ್ನಿಸಿದ ಸಂದರ್ಭದಲ್ಲಿ ಗಂಟಲಿನ ಅನ್ನನಾಳದಲ್ಲಿ ಅಡ್ಡ ಸಿಲುಕಿ ಅಸ್ವಸ್ಥಗೊಂಡಿದ್ದ. ಪೋಷಕರ ಗಮನಕ್ಕೆ ಬರುತ್ತಿದ್ದಂತೆ ಕೂಡಲೇ ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಿದರಾದರೂ ಮಾರ್ಗ ಮದ್ಯೆ ಬಾಲಕ ಕೊನೆಯುಸಿರೆಳೆದಿದ್ದಾನೆ.
ಬಾಲಕನ ದುರಂತ ಸಾವಿಗೆ ಕುಟುಂಬ ಕಂಗಾಲಾಗಿದೆ. ಅಡಿಕೊಂಡಿದ್ದ ಮಗು ಇನ್ನಿಲ್ಲವಾಗಿರುವುದು ಕುಟುಂಬ ವರ್ಗಕ್ಕೆ ಬರಸಿಡಿಲು ಬಡಿದಂತಾಗಿದೆ.
ಕೇವಲ ಒಂದು ರೂಪಾಯಿಗೆ ಸಿಗುವ ಜೆಮ್ಸ್ ಮಕ್ಕಳಿಗೆ ಆಕರ್ಷವಾಗುತ್ತಿದ್ದು ಇದನ್ನು ತಿನ್ನಲು ಆಸೆ ಪಡುವ ಮಕ್ಕಳು ಈ ರೀತಿ ದುರ್ಮರಣಕ್ಕೀಡಾಗಿರುವುದು ವಿಷಾದಕರ ಸಂಗತಿ ಇಂತಹ ಸಿಹಿ ತಿನಿಸು, ಗುಣಮಟ್ಟ ರಹಿತ ತಿನಿಸನ್ನು ಬ್ಯಾನ್ ಮಾಡಬೇಂದು ವಾರ್ಡ್ ಸದಸ್ಯ ಸಯ್ಯದ್ ಖಾಜಾ ಮೈನುದ್ದೀನ್ ಮುಲ್ಲಾ ಆಗ್ರಹಿಸಿದ್ದಾರೆ.
Kushtagi three year old boy dies after the chocolate bottle gets stuck in the throat.
13-05-25 01:14 pm
HK News Desk
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
13-05-25 04:39 pm
HK News Desk
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm