ಕಾಂಗ್ರೆಸಿನಿಂದ 91 ಬೈಗುಳ ಮೋದಿ ಹೇಳಿಕೆ ; ಗಾಂಧಿ ಕುಟುಂಬಕ್ಕೆ ಬೈದ ಲೆಕ್ಕವನ್ನೂ ಬರ್ಕೊಂಡು ಹೇಳಿಬಿಡಲಿ - ಖರ್ಗೆ ಕುಟುಕು 

30-04-23 11:52 am       HK News Desk   ಕರ್ನಾಟಕ

ಕಾಂಗ್ರೆಸ್‌ನವರು 91 ಬೈಗುಳ ಹೇಳಿ ಅವಮಾನ ಮಾಡಿದ್ದಾರೆ ಎಂಬ ಪ್ರಧಾನಮಂತ್ರಿ ನರೇಂದ್ರಮೋದಿ ಹೇಳಿಕೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದ್ದಾರೆ.

ಹಾಸನ, ಎ.30 : ಕಾಂಗ್ರೆಸ್‌ನವರು 91 ಬೈಗುಳ ಹೇಳಿ ಅವಮಾನ ಮಾಡಿದ್ದಾರೆ ಎಂಬ ಪ್ರಧಾನಮಂತ್ರಿ ನರೇಂದ್ರಮೋದಿ ಹೇಳಿಕೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದ್ದಾರೆ. ಅವರು ಎಲ್ಲಾ ಎಣಿಸಿಕೊಂಡು ಇಟ್ಕಂಡಿರಬೇಕು. ದಲಿತರಿಗೆ, ಸೋನಿಯಾ ಗಾಂಧಿ, ಅವರಿಗೆ, ರಾಹುಲ್‌ ಗಾಂಧಿಗೆ, ಗಾಂಧಿ ಫ್ಯಾಮಿಲಿಗೆ, ನೆಹರುಗೆ ಅವರು ಎಷ್ಟು ಸಾರಿ ಬೈದಿದ್ದಾರೆ ಅನ್ನೋದನ್ನ ಬರ್ಕಂಡು ಇಟ್ಕಂಡು ಅದುನ್ನು ಕೂಡ ಹೇಳಲಿ ಎಂದಿದ್ದಾರೆ. 

ಅಂಬೇಡ್ಕರ್‌ಗೆ ಅವಮಾನ ಮಾಡಿ, ಅವರ ಹೆಸರಿನಲ್ಲಿ ಕಾಂಗ್ರೆಸ್ ಓಟು ಕೇಳ್ತಿದೆ ಎಂಬ ಮೋದಿ ಹೇಳಿಕೆಗೆ ಪ್ರತಿಕ್ರಿಯಿಸಿದ ಖರ್ಗೆ, ಅವರಂತು ಎಂದೂ ಅಂಬೇಡ್ಕರ್ ಫೋಟೋನೇ ಇಟ್ಟಿಲ್ಲ. ಆರ್‌ಎಸ್‌ಎಸ್, ಬಿಜೆಪಿ ಕಚೇರಿಯಲ್ಲಿ ಅವರ ಅಪ್ಪನಾಣೆಗೂ ಅವರು ಸಂವಿಧಾನ ಬರೆದಿದ್ದನ್ನು ಕೂಡ ಇಟ್ಟಿಲ್ಲ. ಇತ್ತೀಚೆಗೆ ಓಟಿಗೋಸ್ಕರ ಹೇಳ್ತಿದ್ದಾರೆ.‌ ಆದರೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಈ ಸಂವಿಧಾನ ರಚನೆ ಮಾಡಲು ಯಾವ ಪಾರ್ಟಿ ಅವಕಾಶ ಕೊಡ್ತು.‌ ಹೇಳಿ ನೀವು, ಕೇಳಿ ಅವರಿಗೆ ಪ್ರಶ್ನೆನಾ.. 

ಡ್ರಾಫ್ಟಿಂಗ್ ಕಮಿಟಿ ಚೇರ್‌ಮೆನ್ ಆಗಿ ಅವರನ್ನು ಯಾವ ಪಾರ್ಟಿ ಮಾಡ್ತು, ಬಹುಮತ ಯಾರದ್ದು ಇತ್ತು. ಇವೆಲ್ಲಾ ಹೊಸ ಪೀಳಿಗೆಗೆ ಏನಾದರೂ ಭ್ರಮೆ ಹುಟ್ಟಿಸಬೇಕು ಅಂತ ಹೇಳಿಕೆ ನೀಡುತ್ತಿರಬಹುದು. ಇದು ಸತ್ಯಕ್ಕೆ ದೂರವಾದ ಮಾತು.‌ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ದೊಡ್ಡ ಲಾ ಮಿನಿಸ್ಟರ್ ಮಾಡಿ, ಲೇಬರ್ ಮಿನಿಸ್ಟರ್ ಮಾಡಿ, ಕಾನೂನುಗಳನ್ನು ಮಾಡ್ಸಿದ್ದು ಕಾಂಗ್ರೆಸ್. ಅವರ ವಿಚಾರಧಾರೆ ಮೇಲೆ ಕಾಂಗ್ರೆಸ್ ನಡೆದುಕೊಂಡು ಬಂದಿದಕ್ಕಾಗಿ ಇವತ್ತು ಕೂಡ ಸಂವಿಧಾನದ ರಕ್ಷಣೆಗೆ ನಾವು ಹೋರಾಟ ಮಾಡುತ್ತಿದ್ದೇವೆ, ಬಿಜೆಪಿಯವರಲ್ಲ ಎಂದು ಖರ್ಗೆ ಹೇಳಿದರು.‌

On his first campaign visit after the BJP declared candidates for the Karnataka Assembly polls, Prime Minister Narendra Modi Saturday focused his speeches on the “poisonous snake” reference to him by Congress president Mallikarjun Kharge, saying he considered it an “honour” to be insulted by the Congress since it has in the past similarly “abused” people like B R Ambekdar and V D Savarkar.