ಬ್ರೇಕಿಂಗ್ ನ್ಯೂಸ್
30-04-23 05:14 pm HK News Desk ಕರ್ನಾಟಕ
ಕೋಲಾರ, ಎ.30 : ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧದ ವಾಗ್ದಾಳಿಯನ್ನು ಮುಂದುವರಿಸಿದ್ದು, ಕಾಂಗ್ರೆಸ್‌ನದ್ದು 85 ಪರ್ಸೆಂಟ್ ಕಮಿಷನ್ ಖ್ಯಾತಿಯಾಗಿದೆ ಎಂದು ಆರೋಪಿದ್ದಾರೆ.
ಕಾಂಗ್ರೆಸ್ 85 ಪರ್ಸೆಂಟ್ ಕಮಿಷನ್ ಖ್ಯಾತಿ ಹೊಂದಿರುವ ಕಾರಣ ಜನರಿಗೆ ಇವರ ಸರ್ಕಾರದ ಮೇಲೆ ನಂಬಿಕೆಯೇ ಇಲ್ಲ. 1 ರೂಪಾಯಿ ಕಳುಹಿಸಿದರೆ ಜನರಿಗೆ ತಲುಪುವಷ್ಟರಲ್ಲಿ ಅದು 15 ಪೈಸೆಗೆ ಇಳಿಯುತ್ತದೆ ಎಂದು ಅವರ ಪ್ರಧಾನಿಯೊಬ್ಬರು ಹೇಳಿದ್ದಾರೆ. ಕಾಂಗ್ರೆಸ್ ಯಾವಾಗಲೂ ತುಷ್ಟೀಕರಣ ರಾಜಕಾರಣ ಮಾಡುತ್ತದೆ ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ.
ಭಾರತೀಯ ಜನತಾ ಪಾರ್ಟಿ ತೃಪ್ತಿಗಾಗಿಯೇ ಹೊರತು ಸಮಾಧಾನಕ್ಕಾಗಿ ಅಲ್ಲ. ಕಾಂಗ್ರೆಸ್ ಯಾವಾಗಲೂ ಭ್ರಷ್ಟಾರದಲ್ಲೇ ಬೆಳೆದಿದ್ದೆ. ಭ್ರಷ್ಟಾಚಾರದ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಲು ಬಿಜೆಪಿಯಿಂದ ಮಾತ್ರ ಸಾಧ್ಯವಾಗಿದೆ ಎಂದಿದ್ದಾರೆ.
ನಾನು ಭ್ರಷ್ಟಾರದ ವಿರುದ್ಧ ಹೋರಾಟುತ್ತಿರುವುದರಿಂದ ಕಾಂಗ್ರೆಸ್ ನನ್ನನ್ನು ದ್ವೇಷಿಸುತ್ತಿದೆ. ಅವರು ನನಗೆ ಬೆದರಿಕೆ ಹಾಕುವುದರ ಜೊತೆಗೆ ನಿಂದನೆಯನ್ನೂ ಮಾಡ್ತಿದ್ದಾರೆ. ಈ ಬಾರಿಯ ಚುನಾವಣೆಗೆ ಕಾಂಗ್ರೆಸ್ ವಿಷದ ಹಾವು ಎಂಬ ವಿಷಯವನ್ನು ನನ್ನನ್ನು ಹಾವಿಗೆ ಹೋಲಿಸುತ್ತಿದ್ದಾರೆ. ಅವರಿಗೆ ಮೇ 10 ರಂದು ಕರ್ನಾಟಕದ ಜನತೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಹೇಳಿದ್ದಾರೆ.
ರೈತರಿಗಾಗಿ ಕಾಂಗ್ರೆಸ್ ಏನೂ ಮಾಡಿಲ್ಲ;
ಕಾಂಗ್ರೆಸ್‌ನವರು ರೈತರಿಗಾಗಿ ಏನೂ ಮಾಡಿಲ್ಲ. ಬಡವರನ್ನು ನಿರ್ಲಕ್ಷಿಸಿದ್ದಾರೆ. ಭರವಸೆಗಳನ್ನು ನೀಡಿ ಸುಮ್ಮನಾದರು. ಆದರೆ ನಾವು ರೈತರಿಗೆ ಖಾತೆಗೆ 2.5 ಕೋಟಿ ರೂಪಾಯಿಗಳನ್ನು ಕೊಟ್ಟಿದ್ದೇನೆ. ರೈತರ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸಿುತ್ತಿದ್ದೇವೆ ಎಂದಿದ್ದಾರೆ.
ಈ ಬಾರಿಯ ವಿಧಾನಸಭೆ ಚುನವಣೆ ಯಾರೋ ಶಾಸಕ ಅಥವಾ ಸಚಿವರನ್ನಾಗಿ ಮಾಡಲು ನಡೆಯುತ್ತಿರುವ ಚುನಾವಣೆಯಲ್ಲ. ರಾಜ್ಯದ ಹಾಗೂ ದೇಶದ ಅಭಿವೃದ್ಧಿಯ ನಿರ್ಮಾಣ ಮಾಡುವಂತಹದ್ದು. ಮುಂದಿನ ಎರಡೂವರೆ ದಶಕಗಳ ವಿಕಾಸದ ಭಾರತವನ್ನಾಗಿ ಮಾಡುವ ಚುನಾವಣೆ ಇದಾಗಿದೆ ಎಂದು ಹೇಳಿದ್ದಾರೆ.
ಅಸ್ಥಿರದ ಸರ್ಕಾರ ಬಂದರೆ ಪ್ರಗತಿ ಆಗುವುದಿಲ್ಲ. ಇದರಿಂದ ನಷ್ಟವೇ ಜಾಸ್ತಿ. ದೇಶದ ಪ್ರಗತಿಗೆ ಬೇಕಾದ ಯೋಜನೆಗಳನ್ನು ನಿರ್ಧಾರ ಮಾಡಲು ಅಸ್ಥಿರ ಸರ್ಕಾರ ಅಡ್ಡಿಯಾಗುತ್ತದೆ. ಭ್ರಷ್ಟಾಚಾರದಿಂದ ಕರ್ನಾಟಕವನ್ನು ಮುಕ್ತಗೊಳಿಸುವುದೇ ಈ ಬಾರಿಯ ಚುನಾವಣೆ ಗುರಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮುಳಬಾಗಿಲು ದೋಸೆಯನ್ನು ನೆನೆಯುವ ಮೂಲಕ ಗಮನ ಸೆಳೆದ ಮೋದಿ;
ಇನ್ನು ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಪ್ರಸಿದ್ಧ ಮುಳಬಾಗಿಲು ದೋಸೆಯನ್ನು ನೆನೆಯುವ ಮೂಲಕ ಗಮನ ಸೆಳೆದರು.
ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡುವ ಸಂದರ್ಭದಲ್ಲಿ, ಕೋಲಾರದ ಅಭಿವೃದ್ಧಿಗೆ ಸಂಪರ್ಕ ಮುಖ್ಯವಾಗುತ್ತದೆ, ಎಕ್ಸ್‌ಪ್ರೆಸ್ ಹೈವೆ ನಿರ್ಮಾಣವಾಗುತ್ತಿದ್ದು, ಹಲವು ಕೈಗಾರಿಕೆಗಳು ಕೋಲಾರದತ್ತ ಬರುತ್ತಿದೆ. ಇದರಿಂದ ಮುಳಬಾಗಿಲು ದೋಸೆ ದೇಶದ ಎಲ್ಲೆಡೆ ಸಿಗುವಂತಾಗಿದೆ ಎಂದು ಹೇಳುವ ಮೂಲಕ ಗಮನ ಸೆಳೆದರು. ಹೆದ್ದಾರಿಗಳ ನಿರ್ಮಾಣದಿಂದ ಎಲ್ಲಾ ಕಡೆ ಸಂಪರ್ಕ ಸಾಧಿಸಲು ಸಾಧ್ಯವಾಗಿದ್ದು, ಮುಳಬಾಗಿಲು ದೋಸೆಯ ಪರಿಮಳ ದೂರ ದೂರದವರೆಗೆ ಹರಡುವಂತೆ ಮಾಡಿದೆ ಎಂದರು.
ಸದ್ಯ ಮುಳಬಾಗಿಲು ದೋಸೆ ಎಲ್ಲಾ ಕಡೆ ಪ್ರಸಿದ್ಧವಾಗುತ್ತಿದೆ. ದಾವಣಗೆರೆ ಬೆಣ್ಣೆ ದೋಸೆ ಎಷ್ಟು ಖ್ಯಾತಿಯೋ ಅದೇ ರೀತಿ ತನ್ನದೇ ವಿಭಿನ್ನ ರುಚಿಯಿಂದ ಮುಳಬಾಗಿಲು ದೋಸೆ ಎಲ್ಲಾ ಕಡೆ ಆಹಾರ ಪ್ರಿಯರ ಮೆಚ್ಚುಗೆ ಗಳಿಸಿಕೊಳ್ಳುತ್ತಿದೆ. ಇಂದು ನೀವು ಬೆಂಗಳೂರಿನಲ್ಲಿ ಕೂಡ ಹಲವು ಭಾಗಗಳಲ್ಲಿ ಮುಳಬಾಗಿಲು ದೋಸೆ ಹೋಟೆಲ್‌ಗಳನ್ನು ಕಾಣಬಹುದು.
ಕೋಲಾರ ಜಿಲ್ಲೆಯ ತಾಲೂಕು ಕೇಂದ್ರವಾದ ಮುಳಬಾಗಿಲು ಈ ರೀತಿಯ ವಿಶಿಷ್ಟ ದೋಸೆಗೆ ಹೆಸರುವಾಸಿಯಾಗಿದೆ. ಅನೇಕ ಫುಡ್ ವ್ಲಾಗರ್, ಪ್ರವಾಸಿಗರು ಇಲ್ಲಿನ ದೋಸೆ, ವಿಶಿಷ್ಟ ರುಚು ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಪ್ರಚಾರ ಮಾಡಿದ ನಂತರ ಸದ್ಯ ಪ್ರಸಿದ್ಧವಾಗಿದೆ.
ಈಗ ಪ್ರಧಾನಿ ಮೋದಿ ಕೂಡ ತಮ್ಮ ಭಾಷಣದಲ್ಲಿ ಮುಳಬಾಗಿಲು ದೋಸೆಯ ಪರಿಮಳದ ಬಗ್ಗೆ ಪ್ರಸ್ತಾಪಿಸಿರುವುದು ತಾಲೂಕಿನ ಜನರ ಖುಷಿಗೆ ಕಾರಣವಾಗಿದೆ. ತುಪ್ಪದ ಪರಿಮಳದೊಂದಿದೆ ಆಲೂಗಡ್ಡೆ ಪಲ್ಯ, ರುಚಿಕರವಾದ ಚಟ್ನಿಯೊಂದಿಗೆ ಗರಿ ಗರಿಯಾದ ದೋಸೆಯನ್ನು ಸವಿಯಬೇಕೆಂದರೆ ನೀವು ಒಮ್ಮೆ ಮುಳಬಾಗಿಲುಗೆ ಭೇಟಿ ನೀಡಿ.
ನಿನ್ನೆ, ಶನಿವಾರ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಭ್ರಷ್ಟಾಚಾರ ಮಾಡಲು ಇರುವ ಎಲ್ಲಾ ಮೂಲಗಳನ್ನು ಮುಚ್ಚಿಹಾಕಿರುವುದಕ್ಕೆ ಕಾಂಗ್ರೆಸ್‌ನವರು ನನ್ನನ್ನು ನಿಂದಿಸುತ್ತಾ ತಿರುಗಾಡುತ್ತಿದ್ದಾರೆ. ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ. ಅವರ ಸರ್ಕಾರದ್ದು ಭ್ರಷ್ಟಾಚಾರದ ಕಾಲ, ಬಿಜೆಪಿ ಸರ್ಕಾರದ್ದು ಅಮೃತ ಕಾಲ ಎಂದು ಟೀಕಿಸಿದ್ದರು. ಈ ಹೇಳಿಕೆ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದರು.
ಪ್ರಧಾನಿ ನರೇಂದ್ರ ಮೋದಿ ಇಂದು ಚನ್ನರಾಯಪಟ್ಟಣ ಹಾಗೂ ಬೇಲೂರಿನಲ್ಲಿ ನಡೆಯಲಿರುವ ಸಾರ್ವಜನಿಕ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಲಿದ್ದು, ಸಂಜೆ ಮೈಸೂರಿನಲ್ಲಿ ರೋಡ್ ಶೋ ನಡೆಸಲಿದ್ದಾರೆ.
ಎರಡು ದಿನಗಳ ರಾಜ್ಯ ಚುನಾವಣಾ ಪ್ರವಾಸದಲ್ಲಿ ಇರುವ ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಬೀದರ್ ಜಿಲ್ಲೆಯ ಹುಮ್ನಾಬಾದ್, ವಿಜಯಪುರ ಹಾಗೂ ಬೆಳಗಾವಿಯ ರಾಯಬಾಗದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದ್ದರು.
Coming down heavily on the Congress on the issue of corruption, Prime Minister Narendra Modi on Sunday said the Grand Old Party had always been associated with “85 per cent commission”, and its “shahi parivar” (royal family) was out on bail in connection with scams worth thousands of crores of rupees.
13-05-25 01:14 pm
HK News Desk
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
13-05-25 04:39 pm
HK News Desk
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm