ಬ್ರೇಕಿಂಗ್ ನ್ಯೂಸ್
30-04-23 09:10 pm HK News Desk ಕರ್ನಾಟಕ
ಮೈಸೂರು, ಎ.30: ಮೇ 10 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಸರಣಿ ಪ್ರಚಾರ ಸಮಾವೇಶ, ರೋಡ್ ಶೋಗಳಲ್ಲಿ ಪಾಲ್ಗೊಳ್ಳುವ ಮೂಲಕ ಮತದಾರರನ್ನು ಮನವೊಲಿಸಲು ಕಸರತ್ತು ನಡೆಸುತ್ತಿದ್ದಾರೆ.
ನಿನ್ನೆ ಬೆಂಗಳೂರಿನಲ್ಲಿ ರೋಡ್ ಶೋ ನಡೆಸಿದ ಪ್ರಧಾನಿ ಇಂದು ಸಾಂಸ್ಕೃತಿಕ ರಾಜಧಾನಿ ಭರ್ಜರಿ ರೋಡ್ ಶೋ ನಡೆಸುವ ಮೂಲಕ ಶಕ್ತಿ ಪ್ರದರ್ಶಿಸಿದರು. ನಗರದ ವಿದ್ಯಾಪೀಠದಿಂದ ತೆರೆದ ವಾಹನದಲ್ಲಿ ಮೋದಿ ರೋಡ್ ಶೋ ನಡೆಸುತ್ತಿದ್ದು, ಭಾರೀ ಜನಸ್ತೋಮವೇ ನೆರೆದಿದೆ. ರಸ್ತೆಯ ಇಕ್ಕೆಲ್ಲಗಳಲ್ಲಿ ಕಿಕ್ಕಿರಿದು ತುಂಬಿದ ಜನರು, ಮೋದಿ ಮೋದಿ ಘೋಷಣೆ ಮೊಳಗಿಸುತ್ತಾ ತೆರೆದ ವಾಹನದ ಮೇಲೆ ಹೂಮಳೆ ಸುರಿದರು.



ಬನ್ನಿಮಂಟಪದ ಎಲ್ ಐಸಿ ಸರ್ಕಲ್ ನಲ್ಲಿ ರೋಡ್ ಶೋ ಅಂತ್ಯವಾಗಬೇಕಿತ್ತು. ಆದರೆ, ಸಮಯದ ಅಭಾವದಿಂದಾಗಿ ಹೈವೇ ಸರ್ಕಲ್ ವರೆಗೂ ಮಾತ್ರ ಮೋದಿ ರೋಡ್ ಶೋ ನಡೆಸುತ್ತಿದ್ದಾರೆ. ಸಂಸದ ಪ್ರತಾಪ್ ಸಿಂಹ, ಮಾಜಿ ಶಾಸಕ ಎಸ್ ಎ ರಾಮದಾಸ್ ಹಾಗೂ ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ತೆರೆದ ವಾಹನದಲ್ಲಿದ್ದು, ಮೋದಿ ಅವರಿಗೆ ಸಾಥ್ ನೀಡಿದರು.
ರೋಡ್ ಶೋ ವೇಳೆ ಭದ್ರತಾ ಲೋಪ ಎದುರಾಗಿದೆ. ಮೋದಿ ಅವರು ತೆರೆದ ವಾಹನದಲ್ಲಿ ತೆರಳುತ್ತಿದ್ದ ವೇಳೆ ಜನರ ಕಡೆಯಿಂದ ತೂರಿ ಬಂದ ಮೊಬೈಲ್ ವಾಹನ ಮೇಲೆ ಬಿದ್ದಿದೆ. ಪ್ರಧಾನಿ ಮೋದಿ ಅವರು ಜನರತ್ತ ಕೈ ಬೀಸುತ್ತಿದ್ದ ಸಂದರ್ಭದಲ್ಲಿ ಜನರು ಪ್ರಧಾನಿಗಳತ್ತ ಹೂ ಎಸೆಯುತ್ತಿದ್ದ ಸಂದರ್ಭದಲ್ಲಿ ಘಟನೆ ನಡೆದಿದ್ದು, ಏಕಾಏಕಿ ಹೂವಿನೊಂದಿಗೆ ಮೊಬೈಲ್ ಕೂರ ತೂರಿ ಬಂದಿದೆ. ಇದನ್ನು ಮೋದಿ ಅವರು ಗಮನಿಸಿದ್ದು, ಬಳಿಕ ಮೋದಿ ಅವರ ಪಕ್ಕದಲ್ಲೇ ನಿಂತಿದ್ದ ಭದ್ರತಾ ಸಿಬ್ಬಂದಿ ಮೊಬೈಲ್ ಬಿದಿದ್ದನ್ನು ಗಮನಿಸಿದ್ದಾರೆ.




ಮೈಸೂರಿನ ಕೆಆರ್ ಸರ್ಕಲ್ ಬಳಿಯ ಚಿಕ್ಕ ಗಡಿಯಾರದ ಬಳಿ ಘಟನೆ ನಡೆದಿದ್ದು, ಪ್ರಚಾರ ವಾಹನದ ಮೇಲೆ ಬಿದ್ದ ಮೊಬೈಲ್ ಬಳಿಕ ರಸ್ತೆ ಮೇಲೆ ಬಿದ್ದಿದೆ. ಇದನ್ನು ಗಮನಿಸಿದ ಮೋದಿ ಅವರು ಭದ್ರತಾ ಸಿಬ್ಬಂದಿಗೆ ಸೂಚನೆ ನೀಡಿರುವುದು ದೃಶ್ಯಗಳಲ್ಲಿ ಸೆರೆಯಾಗಿದೆ. ಕೂಡಲೇ ಭದ್ರತಾ ಸಿಬ್ಬಂದಿಗಳು ಎಚ್ಚೆತ್ತುಕೊಂಡಿದ್ದಾರೆ. ನರೇಂದ್ರ ಮೋದಿ ಹೋಗುತ್ತಿದ್ದ ವಾಹನದ ಮೇಲೆ ಮೊಬೈಲ್ ಎಸೆದ ವಿಚಾರ ಸಂಬಂಧಿಸಿದಂತೆ ಭದ್ರತೆಯಲ್ಲಿದ್ದ ಪೊಲೀಸರಿಗೆ ಟೆನ್ಸನ್ ಶುರುವಾಗಿದೆ. ಯಾರು ಮೊಬೈಲ್ ಎಸೆದರು? ಎಲ್ಲಿಂದ ಮೊಬೈಲ್ ತೂರಿ ಬಂತು? ಎಂಬ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ.
ಇಂದು ನಿಗದಿತ ಸಮಯಕ್ಕಿಂತ ಸುಮಾರು 45 ನಿಮಿಷ ಕಾಲ ತಡವಾಗಿ ರೋಡ್ ಶೋ ಆರಂಭವಾಗಿತ್ತು. ವಿದ್ಯಾಪೀಠ ವೃತ್ತಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾಜಿ ಸಚಿವರಾದ ಕೆಎಸ್ ಈಶ್ವರಪ್ಪ ಮತ್ತು ಮಾಜಿ ಸಚಿವ ಎಸ್ಎ ರಾಮದಾಸ್ ಅವರು ಪ್ರಚಾರ ವಾಹನದಲ್ಲಿ ತೆರಳಿದರು. ವಿದ್ಯಾಪೀಠದಿಂದ ಆರಂಭವಾದ ರೋಡ್ ಶೋ ಹೈವೆ ವೃತ್ತದವರೆಗೂ ಸುಮಾರು 4 ಕಿಲೋ ಮೀಟರ್ ಸಾಗಿಬಂದು ಅಂತ್ಯವಾಗಿದೆ. ರೋಡ್ ಶೋ ಮುಗಿಯುತ್ತಿದ್ದಂತೆ ವಾಹನದಿಂದ ಕೆಳಗೆ ಇಳಿದ ಪ್ರಧಾನಿಗಳು ಜನರತ್ತ ಕೈ ಬೀಸುತ್ತಾ ತಮ್ಮ ವಾಹನದತ್ತ ತೆರಳಿದರು.
Prime Minister Narendra Modi conducted a mega roadshow in Mysuru, winding up his whirlwind two-day campaign tour of Karnataka during which he addressed six public rallies. In what appeared to be a rerun of sorts of the popular ‘Jambu Savari’ witnessed on the last day of the annual Mysuru Dasara, the Prime Minister’s roadshow passed through various parts of the city.
15-02-26 10:38 pm
HK News Desk
Nelamangala Accident, 5 Killed: ಹೊಸಕೋಟೆ ದುರಂತ...
15-02-26 10:22 am
ಲೋಕಾಯುಕ್ತ ಬಲೆಗೆ ಬಿದ್ದ 'ಜನರ ಧನ ನುಂಗಿದ ಜನಾರ್ಧನ'...
13-02-26 10:45 pm
Hoskote Accident, Latest Update: ಹೊಸಕೋಟೆ ಅಪಘಾ...
13-02-26 09:18 pm
ಹೊಸಕೋಟೆ ಬಳಿ ಸರಣಿ ಅಪಘಾತ ; ಕ್ಯಾಂಟರ್ ಡ್ರೈವರ್ ಎಡವ...
13-02-26 10:41 am
16-02-26 12:53 pm
HK Staffer
ಮಗನಿಲ್ಲದ ಮೇಲೆ ದುಬಾರಿ ಕಾರು ಯಾಕೆ ? ಆತನ ಸಮಾಧಿ ಪಕ...
15-02-26 04:01 pm
ಖಲಿಸ್ತಾನಿ ಉಗ್ರನ ಹತ್ಯೆಗೆ ಸಂಚು ; ತಪ್ಪೊಪ್ಪಿಕೊಂಡ...
14-02-26 10:55 pm
ಬಾಂಗ್ಲಾದಲ್ಲಿ ಚುನಾವಣೆ ; ಒಂದು ಸ್ಥಾನ ಗೆದ್ದ ಬಿಜೆಪ...
14-02-26 08:13 pm
ಜಗತ್ತು ನೋಡುವ ಮುನ್ನವೇ ಕಣ್ಮುಚ್ಚಿ 5 ಮಕ್ಕಳಿಗೆ ಜೀವ...
14-02-26 01:51 pm
16-02-26 01:48 pm
Mangaluru Staffer
Thokottu Accident, Mangalore: ಖಾಸಗಿ ಶಾಲಾ ಬಸ್ಸ...
16-02-26 09:33 am
Mangalore Accident, Kalladka: ಶಿವರಾತ್ರಿ ಉತ್ಸವ...
15-02-26 08:52 pm
Pumpwell Road Close, Mangalore: ಪಂಪ್ವೆಲ್ ಸರ್...
14-02-26 07:16 pm
CT Ravi, Mangalore: ಕಾಂಗ್ರೆಸ್ ಸಂಭ್ರಮ ಭ್ರಷ್ಟಾ...
14-02-26 05:16 pm
16-02-26 04:01 pm
HK News Desk
Manish kottary, Marriage Fraud, Mangalore: ಮ್...
15-02-26 05:08 pm
ಪ್ರೇಮಿಗಳ ದಿನವೇ ದುರಂತ ಅಂತ್ಯ ಕಂಡ ಜೋಡಿ ; ಪ್ರೀತಿಗ...
14-02-26 10:47 pm
Indian Bank Gold Robbery, Bangalore: ಬೆಂಗಳೂರು...
14-02-26 07:37 pm
Mangalore Drugs, CCB Police: ಬೆಂಗಳೂರಿನಿಂದ ಎಂಡ...
13-02-26 03:35 pm