ಖರ್ಗೆ ವಿಷ ಸರ್ಪ ಹೇಳಿಕೆ; ಶಿವ ಸ್ವರೂಪಿಯಾದ ಜನರ ಕೊರಳಿನಲ್ಲಿ ಹಾವಾಗಿ ಇರಲು ನನಗೆ ಸಂತೋಷ, ಕಾಂಗ್ರೆಸ್‌ನ ಗುಜರಿ ಇಂಜಿನ್‌ನಿಂದ ರಾಜ್ಯ ಅಭಿವೃದ್ಧಿ ಆಗಲ್ಲ ಎಂದ ಮೋದಿ

30-04-23 09:24 pm       HK News Desk   ಕರ್ನಾಟಕ

ಈ ಬಾರಿ ರಾಜ್ಯದಲ್ಲಿ ಚುನಾವಣೆ ನಡೆಯುತ್ತಿರುವುದು ಶಾಸಕರು ಮತ್ತು ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವುದಕ್ಕೆ ಅಲ್ಲ, ಕರ್ನಾಟಕವನ್ನು ಮುಂದಿನ 25 ವರ್ಷಗಳವರೆಗೆ ಅಭಿವೃದ್ಧಿ ಹೊಂದಿದ ರಾಜ್ಯವನ್ನು ಮಾಡುವ ಚುನಾವಣೆ ಎಂದು ಪ್ರಧಾನಿ ನರೇಂದ್ರ ಮೋದಿ ಕೋಲಾರದಲ್ಲಿ ಹೇಳಿಕೆ ನೀಡಿದರು

ಕೋಲಾರ, ಎ.30: ಈ ಬಾರಿ ರಾಜ್ಯದಲ್ಲಿ ಚುನಾವಣೆ ನಡೆಯುತ್ತಿರುವುದು ಶಾಸಕರು ಮತ್ತು ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವುದಕ್ಕೆ ಅಲ್ಲ, ಕರ್ನಾಟಕವನ್ನು ಮುಂದಿನ 25 ವರ್ಷಗಳವರೆಗೆ ಅಭಿವೃದ್ಧಿ ಹೊಂದಿದ ರಾಜ್ಯವನ್ನು ಮಾಡುವ ಚುನಾವಣೆ ಎಂದು ಪ್ರಧಾನಿ ನರೇಂದ್ರ ಮೋದಿ ಕೋಲಾರದಲ್ಲಿ ಹೇಳಿಕೆ ನೀಡಿದರು

ಕೋಲಾರದಲ್ಲಿ ಬಿಜೆಪಿ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಲ್ಲಿ ನೆರೆದ ಜನಸಂಖ್ಯೆಯನ್ನು ನೋಡಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ನಾಯಕರಿಗೆ ನಿದ್ದೆಗೆಡುತ್ತದೆ. ಎರಡೂ ಪಕ್ಷಗಳನ್ನು ಕರ್ನಾಟಕದ ಜನಗೆ ಕ್ಲೀನ್ ಬೌಲ್ಡ್ ಮಾಡುತ್ತಾರೆ ಎಂದು ಪ್ರಧಾನಿ ಮೋದಿ ಹೇಳಿದರು.

PM's "Obstacle" Charge At Congress, HD Kumaraswamy's Party In Karnataka

ಕಾಂಗ್ರೆಸ್‌ನ ಗುಜರಿ ಇಂಜಿನ್‌ನಿಂದ ರಾಜ್ಯದ ಅಭಿವೃದ್ಧಿಯಾಗುವುದಿಲ್ಲ ಎಂದು ಮೋದಿ ವಾಗ್ದಾಳಿ ಮಾಡಿದರು. ಡಬಲ್ ಇಂಜಿನ್ ಸರ್ಕಾರದಿಂದ ರಾಜ್ಯ ಅಭಿವೃದ್ಧಿಯಾಗುತ್ತದೆ. ಕೇಂದ್ರದಲ್ಲಿ ಬಿಜೆಪಿ ಇಂಜಿನ್ ತರಹ ರಾಜ್ಯದಲ್ಲಿಕೂಡ ಗಟ್ಟಿಯಾದ ಇಂಜಿನ್ ಅಧಿಕಾರಕ್ಕೆ ಬರಬೇಕು, ಅದಕ್ಕಾಗಿ ರಾಜ್ಯದಲ್ಲಿ ಜನ ಬಿಜೆಪಿಗೆ ಬೆಂಬಲ ನೀಡಬೇಕು ಎಂದು ಮೋದಿ ಮನವಿ ಮಾಡಿದರು.

Karnataka Assembly elections - 'Dynastic' Congress and Janata Dal (Secular)  responsible for political instability in Karnataka: Prime Minister Narendra  Modi - Telegraph India

Congress associated with 85 per cent commission PM Modi says at public  meeting in Karnataka | ಚಿನ್ನದ ನಾಡು ಕೋಲಾರದಲ್ಲಿ ಮೋದಿ ; ದೇಶದಲ್ಲಿ ಕರ್ನಾಟಕ ನಂ.1  ಆಗಲಿದೆ, ಕಾಂಗ್ರೆಸ್ 85 ಪರ್ಸೆಂಟ್ ಕಮಿಷನ್ ...

ವಿಷ ಸರ್ಪ ಹೇಳಿಕೆಗೆ ಮೋದಿ ಕಿಡಿ;

ಇನ್ನು ಮೋದಿ ಇದೇ ಮೊದಲ ಬಾರಿಗೆ ತಮ್ಮ ವಿರುದ್ಧದ ವಿಷ ಸರ್ಪ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಿದ್ದೇನೆ, ಇದರಿಂದ ಕಾಂಗ್ರೆಸ್‌ನವರಿಗೆ ಹೆಚ್ಚಿನ ತೊಂದರೆಯಾಗಿದೆ. ಅದಕ್ಕೆ ನನಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಮೋದಿ ಹೇಳಿದರು.

ಕಾಂಗ್ರೆಸ್‌ನವರು ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಬೇಕಿತ್ತು, ಹಾವು ಮತ್ತು ಹಾವಿನ ವಿಷದ ಬಗ್ಗೆ ಅವರು ಮಾತನಾಡುತ್ತಿದ್ದಾರೆ. ನನಗೆ ಈ ಬಗ್ಗೆ ಬೇಸರವಿಲ್ಲ, ಹಾವು ಶಿವನ ಕೊರಳಿನಲ್ಲಿ ಇರುತ್ತದೆ. ಈ ದೇಶದ ಜನ ನನಗೆ ಶಿವನ ಸ್ವರೂಪಿ, ಶಿವ ಸ್ವರೂಪಿಯಾದ ಜನರ ಕೊರಳಿನಲ್ಲಿ ಹಾವಾಗಿ ಇರಲು ನನಗೆ ಸಂತೋಷವಾಗುತ್ತದೆ ಎಂದು ನರೇಂದ್ರ ಮೋದಿ ಹೇಳಿದರು. ಕಾಂಗ್ರೆಸ್‌ನವರ ಬಾಯಿ ಮುಚ್ಚಿಸಲು ಬಿಜೆಪಿಗೆ ಮತ ನೀಡಿ ಎಂದು ಮೋದಿ ಪರೋಕ್ಷವಾಗಿ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ವಾಗ್ದಾಳಿ ಮಾಡಿದರು.

Prime Minister Narendra Modi on Sunday launched a scathing attack on Congress over Mallikarjun Kharge’s ‘poisonous snake’ remark and said the people of Karnataka will give a befitting reply on May 10, referring to the upcoming assembly polls in the state. PM Modi further said that Congress is threatening and abusing him because he is fighting corruption in the country.