2013ರಲ್ಲಿ ಯಡಿಯೂರಪ್ಪ, ಶೋಭಾ ದೆಹಲಿಯಲ್ಲಿ ಯಾರನ್ನು ಭೇಟಿ ಆಗಿದ್ದರು ; ಎಂಬಿ ಪಾಟೀಲ್ ಹೊಸ ಬಾಂಬ್ 

02-05-23 11:43 am       Bangalore Correspondent   ಕರ್ನಾಟಕ

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮತ್ತು ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಬೆನ್ನಿಗೆ ಚೂರಿ ಹಾಕಿದ್ದಾರೆಂದು ಯಡಿಯೂರಪ್ಪ ಹೇಳುತ್ತಿದ್ದಾರೆ. ಆದರೆ ಇದೇ ಬಿ.ಎಸ್. ಯಡಿಯೂರಪ್ಪ ಮತ್ತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ 2013 ರಲ್ಲಿ ದೆಹಲಿಯ ಹೋಟೆಲ್ ಒಂದರಲ್ಲಿ ಒಬ್ಬರನ್ನು ಭೇಟಿಯಾಗಿದ್ದರು.

ಬೆಂಗಳೂರು, ಮೇ 2 : ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮತ್ತು ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಬೆನ್ನಿಗೆ ಚೂರಿ ಹಾಕಿದ್ದಾರೆಂದು ಯಡಿಯೂರಪ್ಪ ಹೇಳುತ್ತಿದ್ದಾರೆ. ಆದರೆ ಇದೇ ಬಿ.ಎಸ್. ಯಡಿಯೂರಪ್ಪ ಮತ್ತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ 2013 ರಲ್ಲಿ ದೆಹಲಿಯ ಹೋಟೆಲ್ ಒಂದರಲ್ಲಿ ಒಬ್ಬರನ್ನು ಭೇಟಿಯಾಗಿದ್ದರು. ಅವರು ಯಾರು ಎಂಬುದನ್ನು ನೆನಪಿಸಿಕೊಳ್ಳಲಿ. ಆ ಬಗ್ಗೆ ಸದ್ಯದಲ್ಲೇ ಮಾಹಿತಿ ಬಿಡುಗಡೆ ಮಾಡುತ್ತೇವೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಹೊಸ ಬಾಂಬ್ ಸಿಡಿಸಿದ್ದಾರೆ.

From Puttur to parliament: Shobha Karandlaje's inspiring success story |  Deccan Herald

ದೆಹಲಿಯ ಲೀಲಾ ಪ್ಯಾಲೇಸ್ ಹೋಟೆಲ್ ನಲ್ಲಿ ಅಂದು ಯಡಿಯೂರಪ್ಪ ಮತ್ತು ಶೋಭಾ ಕರಂದ್ಲಾಜೆ ವ್ಯಕ್ತಿಯೊಬ್ಬರನ್ನು ಭೇಟಿಯಾಗಿದ್ದರು. ಆ ಭೇಟಿಯ ಹಿನ್ನೆಲೆ ಏನು? ಭೇಟಿಯಾದ ವ್ಯಕ್ತಿ ಯಾರು ಎಂಬುದನ್ನು ಮೂರ್ನಾಲ್ಕು ದಿನಗಳಲ್ಲಿ ಬಹಿರಂಗಪಡಿಸುತ್ತೇನೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು. 

I was humiliated and ill treated by the BJP,' K'taka ex-CM Jagadish Shettar  | Bengaluru - Hindustan Times

Done with BJP: Laxman Savadi on joining Congress ahead of Karnataka polls -  India Today

ಬಿಜೆಪಿಯಿಂದ ಕಾಂಗ್ರೆಸ್ ಸೇರಿದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರನ್ನು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ತಮ್ಮ ಗುರಿ ಮಾಡುವುದರಲ್ಲಿ ಅರ್ಥವಿಲ್ಲ. ವೀರಶೈವ- ಲಿಂಗಾಯತ ಸಮುದಾಯದ ಬೇರೆ ಮುಖಂಡರನ್ನು ತರುವುದಕ್ಕಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ಸಂತೋಷ್ ಸಂಚು ರೂಪಿಸಿದ್ದರು. ಇವರೇ ಸೇರಿ ಶೆಟ್ಟರ್, ಸವದಿಯನ್ನು ಬಿಜೆಪಿ ತೊರೆಯುವಂತೆ ಮಾಡಿದ್ದಾರೆ ಎಂದು ಎಂಬಿ ಪಾಟೀಲ್ ಆರೋಪಿಸಿದ್ದಾರೆ.

Don't lobby for berths, focus on relief work'

ಶೆಟ್ಟರ್ ಮತ್ತು ಸವದಿ ಕಾಂಗ್ರೆಸ್ ಸೇರಿ ಬಿಜೆಪಿ ಬೆನ್ನಿಗೆ ಚೂರಿ ಹಾಕಿದ್ದೀರಿ ಎಂದು ಆರೋಪಿಸಿರುವ ನೀವು (ಯಡಿಯೂರಪ್ಪ) 2013ರಲ್ಲಿ ಕೆಜೆಪಿ ಆರಂಭಿಸಿದಾಗ ಬಿಜೆಪಿಯ ಎದೆಗೆ ಚೂರಿ ಹಾಕಿಲ್ಲವೇ ಎಂದು ಪ್ರಶ್ನಿಸಿದರು. ಇದು ವೀರಶೈವ -ಲಿಂಗಾಯತ ಸಮುದಾಯಕ್ಕೆ ತವರು ಮನೆಯಾಗಿದ್ದು, ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 130-140 ಸ್ಥಾನಗಳನ್ನು ಗೆಲ್ಲಲಿದೆ ಎಂದವರು ಹೇಳಿದ್ದಾರೆ. 

1990ರಲ್ಲಿ ಸಮುದಾಯದ ನಾಯಕ ವೀರೇಂದ್ರ ಪಾಟೀಲ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ಕಾಂಗ್ರೆಸ್ ನಿರ್ಧಾರವನ್ನು ಪಾಟೀಲ್ ಸಮರ್ಥಿಸಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣಕ್ಕೆ ಬದಲಿಸಲಾಗಿತ್ತು. ಬೇರೇನು ದುರುದ್ದೇಶ ಇರಲಿಲ್ಲ ಎಂದು ಹೇಳಿದರು. ಆದರೆ, ಯಡಿಯೂರಪ್ಪನವರು ಚೆನ್ನಾಗಿದ್ದರೂ ಬಿಜೆಪಿ ಅವರನ್ನು ಏಕೆ ಅಧಿಕಾರದಿಂದ ಕೆಳಗಿಳಿಸಿತು ಎಂದು ಪ್ರಶ್ನಿಸಿದರು.

ಶೆಟ್ಟರ್ ಮತ್ತು ಸವದಿ ಅವರನ್ನು ಸೋಲಿಸಲು ಯಡಿಯೂರಪ್ಪ ಅವರನ್ನು ನಿಯೋಜಿಸಲಾಗಿದೆ. ಯಡಿಯೂರಪ್ಪ ಅವರು ತಮ್ಮ ಇಬ್ಬರು ಮಕ್ಕಳ ರಾಜಕೀಯ ಭವಿಷ್ಯದ ಬಗ್ಗೆ ಹೆದರಿ ಈ ಕೆಲಸಕ್ಕೆ ಕೈ ಹಾಕಿದ್ದಾರೆ ಎಂದು ದೂರಿದ್ದಾರೆ.

M B Patil slams BJP, says  Yediyurappa and Shobha Karandlaje had met someone in the hotel in 2013 in Delhi, asks who is it.