ಮೇ 10ವರೆಗೂ ಕಾಂಗ್ರೆಸ್ ಗ್ಯಾರಂಟಿ ಆಮೇಲೆ ಗಳಗಂಟಿ ; ಮೋದಿ ಅಕ್ಕಿಗೆ ಸಿದ್ದರಾಮಯ್ಯ ಅವರು ಖಾಲಿ ಚೀಲ ಮಾತ್ರ ಕೊಟ್ಟಿದ್ದಾರೆ

05-05-23 10:00 pm       HK News Desk   ಕರ್ನಾಟಕ

ಸ್ವಾತಂತ್ರ್ಯ ಬಂದಾಗಿನಿಂದಲೂ ರೇಷನ್ ಕೊಡಲಾಗುತ್ತಿದೆ. ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ಮೇಲೆ ರೇಷನ್ ಕೊಟ್ಟಿದ್ದೇನೆ ಅನ್ನುವ ತರಹ ಹೇಳುತ್ತಿದ್ದಾರೆ‌.

ಧಾರವಾಡ, ಮೇ 5: ಸ್ವಾತಂತ್ರ್ಯ ಬಂದಾಗಿನಿಂದಲೂ ರೇಷನ್ ಕೊಡಲಾಗುತ್ತಿದೆ. ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ಮೇಲೆ ರೇಷನ್ ಕೊಟ್ಟಿದ್ದೇನೆ ಅನ್ನುವ ತರಹ ಹೇಳುತ್ತಿದ್ದಾರೆ‌. ಮೋದಿ ಅಕ್ಕಿಗೆ ಸಿದ್ದರಾಮಯ್ಯ ಅವರು ಖಾಲಿ ಚೀಲ ಮಾತ್ರ ಕೊಟ್ಟಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.

ಶುಕ್ರವಾರ ಕಲಘಟಗಿಯಲ್ಲಿ ಕ್ಷೇತ್ರದ ಅಭ್ಯರ್ಥಿ ನಾಗರಾಜ ಛಬ್ಬಿ ಪರ ಪ್ರಚಾರ ನಡೆಸಿದ ಬಳಿಕ ಮಾತನಾಡಿದ ಅವರು, ಕಾಂಗ್ರೆಸ್‌ನವರು 200 ಯೂನಿಟ್ ವಿದ್ಯುತ್ ಕೊಡುತ್ತೇನೆ ಅಂತ ಹೇಳುತ್ತಾರೆ. ಜನರು ಉಪಯೋಗ ಮಾಡುವುದೇ 75 ಯೂನಿಟ್ ಉಪಯೋಗ ಮಾಡುತ್ತಾರೆ. ಮೇ 10 ರ ವರೆಗೂ ಇವರ ಗ್ಯಾರಂಟಿ, ಆ ಮೇಲೆ ಗಳಗಂಟಿ ಎಂದು ವ್ಯಂಗ್ಯವಾಡಿದರು.

how to do pm kisan yojana registration : पीएम किसान योजना के लिए  रजिस्ट्रेशन कैसे करें

ಕಿಸಾನ್‌ ಸಮ್ಮಾನ್‌ನಡಿ 54 ಲಕ್ಷ ರೈತರಿಗೆ ನೆರವು ;

ರೈತರಿಗೆ ನೇರವಾಗಿ ಕಿಸಾನ್ ಸಮ್ಮಾನ್ ಯೋಜನೆ ಅಡಿ 54 ಲಕ್ಷ ರೈತರಿಗೆ ನೇರವಾಗಿ ತಲುಪಲಿದೆ. ರೈತರ ಮಕ್ಕಳಿಗೆ ಕಿಸಾನ್ ಸಮ್ಮಾನ ಯೋಜನೆ ಜಾರಿಗೆ ತಂದಿದ್ದೇವೆ. ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿದ್ದೇವೆ. ಆಂತರಿಕ ಮೀಸಲಾತಿ ಹೆಚ್ಚಳ ಮಾಡಿದ್ದೇನೆ ಎಂದರು.

Hand Holding Money and Vote a Concept of Political Corruption the Purchase  of Votes in Elections on Isolated Background. Stock Photo - Image of elect,  politician: 138098988

ಹಣಕ್ಕಾಗಿ ಮತ ಮಾರಾಟ ಮಾಡಲ್ಲ ಎಂದು ತೀರ್ಮಾನಿಸಿ;

ಕಲಘಟಗಿ ಜನರು ಹಣಕ್ಕಾಗಿ ಮತ ಮಾರಾಟ ಮಾಡುವುದಿಲ್ಲ ಅಂತ ತೀರ್ಮಾನ ಮಾಡಿ, ನಾಗರಾಜ ಛಬ್ಬಿಯ ಜನ ಶಕ್ತಿ ಹಾಗೂ ಹಣ ಶಕ್ತಿಯ ನಡುವೆ ಸಂಘರ್ಷ ನಡೆಯುತ್ತಿದೆ‌. ಮೇ 10 ಕ್ಕೆ ಜನ ಶಕ್ತಿಯ ಎದುರು ಹಣ ಶಕ್ತಿ ಸೋಲಲಿದೆ ಅಂತ ತೋರಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.

Congress 'hawa' to class divide — four observations in the run-up to  Karnataka election

ಕಾಂಗ್ರೆಸ್‌ ಬಗ್ಗೆ ಯಾರಿಗೂ ಭರವಸೆ ಇರಲಿಲ್ಲ;

ರಾಜ್ಯಾದ್ಯಂತ ಬಿಜೆಪಿಗೆ ಯಾಕೆ ಬೆಂಬಲ ದೊರೆಯುತ್ತಿದೆ ಎಂದರೆ, ಹಿಂದಿನ ಸರ್ಕಾರದ ಅವಧಿಯಲ್ಲಿ ತುಷ್ಟೀಕರಣ, ಭ್ರಷ್ಟಾಚಾರ, ರೈತರ ಆತ್ಮಹತ್ಯೆ, ರೈತನ ದುಸ್ಥಿತಿಯನ್ನು ಕೇಳುವವರಿರಲಿಲ್ಲ. ದುಡಿಯುವ ವರ್ಗ ನಿರಾಶರಾಗಿದ್ದರು. ವಿದ್ಯಾರ್ಥಿಗಳಿಗೆ ಕೆಲಸ ಸಿಗುವ ಭರವಸೆ ಇರಲಿಲ್ಲ. ಇವರು ಮಾತ್ರ ಭಾಗ್ಯದ ಮೇಲೆ ಭಾಗ್ಯ ಕೊಡುತ್ತ ಬಂದಿದ್ದಾರೆ ಎಂದರು.

Small section of Karnataka voters impacted by Bajrang Dal issue: Cong  survey | Bengaluru - Hindustan Times

ಬಜರಂಗ ದಳ ಬ್ಯಾನ್‌ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ ;

ಕಾಂಗ್ರೆಸ್ ನವರು ಎಸ್ಡಿಪಿಐ ಪಿಎಫ್ ಐ ಜೊತೆ ಬಜರಂಗದಳ ಬ್ಯಾನ್ ಮಾಡುವುದಾಗಿ ಹೇಳಿದ್ದಾರೆ. ಬಜರಂಗದಳ ನಿಷೇಧ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ಬಜರಂಗದಳ ದೇಶಾದ್ಯಂತ ಇರುವ ಸಂಘಟನೆ. ಅದನ್ನು ನಿಷೇಧ ಮಾಡುವ ಅಧಿಕಾರ ಇವರಿಗಿಲ್ಲ‌ ಎಂದರು.

Chief Minister Basavaraj Bommai said on Friday, May 5, that the Congress was haunted by the spectre of defeat and was hence feeling insecure.