ಬ್ರೇಕಿಂಗ್ ನ್ಯೂಸ್
06-05-23 03:59 pm Bangalore Correspondent ಕರ್ನಾಟಕ
ಬೆಂಗಳೂರು, ಮೇ 6 : ಬೆಂಗಳೂರಿನ ಜಯನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ಭರ್ಜರಿ ರೋಡ್ ಶೋ ನಡೆಸಿದ್ದಾರೆ. ಈ ವೇಳೆ, ರಸ್ತೆಯ ಇಕ್ಕೆಲದಲ್ಲೂ ಸಾವಿರಾರು ಜನ ಜಮಾಯಿಸಿದ್ದು, ತೆರೆದ ವಾಹನದಲ್ಲಿ ಬಂದ ಪ್ರಧಾನಿಗೆ ಹೂಮಳೆ ಸುರಿಸಿ ಹಾರೈಸಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಬೆಂಗಳೂರಿನಲ್ಲಿ ಎರಡು ದಿನಗಳ ಕಾಲ ರೋಡ್ ಶೋ ನಡೆಸಲಿದ್ದಾರೆ. ಶನಿವಾರ ಹಾಗೂ ಭಾನುವಾರ ನಗರದಲ್ಲಿ ರೋಡ್ ಶೋ ಹಮ್ಮಿಕೊಳ್ಳಲಾಗಿದೆ. ಮೋದಿ ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇಲ್ಲ ಎನ್ನುವಂತಾಗಿದೆ. ಒಂದೇ ಕುಟುಂಬದ 15 ಜನರು ಮೋದಿ ಫೋಟೋಗಳನ್ನು ಇಟ್ಟುಕೊಂಡು ಸ್ವಾಗತಿಸಿದ ರೀತಿ ಗಮನ ಸೆಳೆಯಿತು. ರಾಮಕೃಷ್ಣ ಆಶ್ರಮದ ಬಳಿ ಒಂದೇ ಕುಟುಂಬದ ಸದಸ್ಯರು ವಿಭಿನ್ನವಾಗಿ ಮೋದಿಯನ್ನು ಸ್ವಾಗತಿಸಿದರು.
ರೋಡ್ ಶೋ ನಡೆಯುವ ರಸ್ತೆಯುದ್ದಕ್ಕೂ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಚೆಂಡೆ ವಾದನ, ಕೀಲುಗೊಂಬೆಗಳು, ಹುಲಿವೇಷ, ಜಾನಪದ ನೃತ್ಯಗಳನ್ನು ಆಯೋಜನೆ ಮಾಡಲಾಗಿತ್ತು. ಮೋದಿ ರೋಡ್ ಶೋ ಹಿನ್ನಲೆಯಲ್ಲಿ ವ್ಯಾಪಕ ಭದ್ರತೆಯನ್ನು ಕೈಗೊಳ್ಳಲಾಗಿದೆ. ರೋಡ್ ಶೋ ನೋಡಲು ಬರುವವರನ್ನು ತಪಾಸಣೆ ಮಾಡಿ ಬಿಡಲಾಗುತ್ತಿದೆ. ಖಾಕಿ ಸರ್ಪಗಾವಲು ಹಾಕಿದ್ದು, ಯಾವುದೇ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಿದೆ.
ಮೊಳಗಿದ ಜೈ ಭಜರಂಗಿ ಘೋಷಣೆ
ಹಿಂದು ಸಂಘಟನೆಗಳ ಕಾರ್ಯಕರ್ತರು ಕೇಸರಿ ಹಾಗೂ ಬಜರಂಗದಳದ ಬಾವುಟ ಹಿಡಿದು ಪ್ರಧಾನಿಗೆ ಸ್ವಾಗತ ಕೋರಿದರು. ಇತ್ತೀಚೆಗಷ್ಟೇ ಬಜರಂಗದಳ ಬ್ಯಾನ್ ಮಾಡುವ ಕುರಿತು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಿದ್ದರಿಂದ ಬಿಜೆಪಿ ಇದನ್ನೇ ಅಸ್ತ್ರವನ್ನಾಗಿ ಬಳಸಿಕೊಂಡಿದೆ. ಹೋದಲ್ಲಿ ಬಂದಲ್ಲಿ ಜೈ ಭಜರಂಗಿ ಎನ್ನುವ ಮೂಲಕ ಪ್ರಧಾನಿ ತಮ್ಮ ಭಾಷಣ ಆರಂಭಿಸುತ್ತಿದ್ದಾರೆ. ನಾನೂ ಭಜರಂಗಿ ಎಂದು ಬಿಜೆಪಿ ಕಾರ್ಯಕರ್ತರು ಅಭಿಯಾನ ಆರಂಭಿಸಿದ್ದಾರೆ.
ಹೆಜ್ಜೆ ಹೆಜ್ಜೆಗೂ ಸೇರಿದ್ದ ಅಭಿಮಾನಿಗಳ ಹೂವಿನ ಮಳೆ, ಕೇಸರಿ, ಕೆಂಪು ಹೂಗಳ ಹಾರಾಟ ಮೋದಿ ರೋಡ್ ಶೋವನ್ನು ಅದ್ದೂರಿಯಾಗಿಸಿತ್ತು. ರಸ್ತೆಯುದ್ದಕ್ಕೂ ಜೈ ಭಜರಂಗಿ ಘೋಷಣೆ, ಹಿಂದುಗಳ ಓಲೈಕೆಯ ಝೇಂಕಾರ, ರಣಘೋಷ ಸೇರಿದ್ದ ಜನರಲ್ಲಿ ರೋಮಾಂಚನ ಸೃಷ್ಟಿಸಿತ್ತು. ಮೋದಿ ರೋಡ್ ಶೋ ರಂಗಿನ ರಂಗವಲ್ಲಿಯ ಚಿತ್ರ ಕ್ಯಾಮರಾ ಕಣ್ಣುಗಳಲ್ಲಿ ವಿಭಿನ್ನವಾಗಿ ಮೂಡಿಬಂದಿದೆ.
The roadshow by Prime Minister Narendra Modi on Saturday (May 6) is likely to throw traffic out of gear in the city. Bengaluru Traffic Police have issued an advisory to avoid 35 key roads and junctions between 8 a.m. and 1 p.m. While they usually issue traffic diversions, this time, the advisory asks commuters to avoid these roads entirely.
13-05-25 01:14 pm
HK News Desk
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm