ಬ್ರೇಕಿಂಗ್ ನ್ಯೂಸ್
07-05-23 09:38 pm HK News Desk ಕರ್ನಾಟಕ
ಶಿವಮೊಗ್ಗ, ಮೇ 7: ಬೆಂಗಳೂರಿನಲ್ಲಿ ಬೃಹತ್ ರೋಡ್ ಶೋ ಆದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿದರು. ಮಾತಿನ ಪ್ರಾರಂಭದಲ್ಲೇ ರಾಷ್ಟ್ರಕವಿ ಕುವೆಂಪು ಅವರನ್ನು ಸ್ಮರಿಸಿದ ಪ್ರಧಾನಿ ಮೋದಿ ಅವರು ತಮ್ಮ ಭಾಷಣದುದ್ದಕ್ಕೂ ಜಿಲ್ಲೆಯ ಅಡಕೆ ಬೆಳೆಗಾರರ ಬಗ್ಗೆ ಕಾಳಜಿ ವ್ಯಕ್ತಪಡಿಸಿದರು. ಈ ವೇಳೆ ಅವರು ಕಾಂಗ್ರೆಸ್ ಪಕ್ಷ ಅಡಕೆ ಬೆಳೆಗಾರರಿಗೆ ಅನ್ಯಾಯ ಮಾಡಿದ್ದು ಬಿಜೆಪಿಯು ಅದನ್ನು ಸರಿಪಡಿಸಿದೆ ಎಂದು ಪ್ರತಿಪಾದಿಸಿದರು.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಬೆಳೆಯಲಾಗುತ್ತಿರುವ ಅಡಕೆ ಇತ್ತೀಚಿಗಿನ ದಿನಗಳಲ್ಲಿ ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆಯಾಗಿ ಹೊರಹೊಮ್ಮಿದೆ. ಶಿವಮೊಗ್ಗ ಜಿಲ್ಲೆಯ ಬಹುಭಾಗ ಅಡಕೆಯನ್ನು ಬೆಳೆಯಲಾಗುತ್ತಿದೆ. ಹೀಗಾಗಿ ಪ್ರಧಾನಿ ತಮ್ಮ ಭಾಷಣದಲ್ಲಿ ಕಾಂಗ್ರೆಸ್ ಹೇಗೆ ಅಡಕೆ ಬೆಳೆಗಾರರಿಗೆ ಅನ್ಯಾಯ ಮಾಡಿದೆ ಎಂಬುದನ್ನು ವಿವರಿಸುತ್ತಾ ವಾಗ್ದಾಳಿ ನಡೆಸಿದರು. ಈ ಮೂಲಕ ಅಡಕೆ ಬೆಳೆಗಾರರ ಗಮನ ಸೆಳೆಯಲು ಪ್ರಯತ್ನಿಸಿದ್ದಾರೆ.
ಭಾಷಣದ ಪ್ರಾರಂಭದಲ್ಲಿ ಸಿಗಂಧೂರು ಶ್ರೀ ಚೌಡೇಶ್ವರಿ ದೇವಿ, ಕೋಟೆ ಆಂಜನೇಯ ಸ್ವಾಮಿ, ಆಧ್ಯಾತ್ಮಿಕ ಗುರು ಶ್ರೀ ಶ್ರೀಧರ ಸ್ವಾಮಿ ನಮಿಸಿದ ಅವರು ಬಳಿಕ ನೇರವಾಗಿ `ಸುಪಾರಿ' ಭಾಷಣಕ್ಕೆ ಮುಂದಾದರು. ಅನೇಕ ವಿಧವಾದ ಬೆಳೆಗಳನ್ನು ಬೆಳೆಯುವ ಜಿಲ್ಲೆಯಾಗಿರುವ ಶಿವಮೊಗ್ಗ ವು ಕೃಷಿ ಹಬ್ ಆಗಿ ಗುರುತಿಸಲ್ಪಡುತ್ತದೆ ಎಂದರು.
ಅಡಕೆಯಂತೂ ಇಲ್ಲಿನ ಪ್ರಧಾನ ಬೆಳೆ. ಕಾಂಗ್ರೆಸ್ ಸರಕಾರ ಅಡಕೆ ಬೆಳೆಗಾರರ ಮೇಲೆ ಗಧಾ ಪ್ರಹಾರ ನಡೆಸಿತ್ತು ಎಂಬುದಕ್ಕೆ ಅಡಕೆ ಆಮದು ನೀತಿಯೇ ಉತ್ತಮ ಉದಾಹರಣೆ ಎಂದು ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಮತ್ತು ಬಿಜೆಪಿಗಳ ಅಡಕೆ ಆಮದು ನೀತಿಗಳನ್ನು ತುಲನೆ ಮಾಡಿದರೆ ನಿಮ್ಮ ಬಗ್ಗೆ ನಾವು ಎಷ್ಟು ಕಾಳಜಿ ವಹಿಸಿದ್ದೇವೆ ಇದು ನಿಮಗೆ ಅರ್ಥವಾಗುತ್ತದೆ ಎಂದು ಮೋದಿ ಹೇಳಿದರು.
ಈ ವೇಳೆ ಅವರು ತಾನು ಪ್ರಧಾನಿಯಾಗಿ ಮಾತ್ರವಲ್ಲದೆ ಮುಖ್ಯಮಂತ್ರಿಯಾಗಿಯೂ ಹೇಗೆ ಕರ್ನಾಟಕದ ಅಡಕೆ ಬೆಳೆಗಾರರ ಪರವಾಗಿ ತಾನು ನಿಂತೆ ಎಂಬುದನ್ನು ಅವರು ವಿವರಿಸಿದರು. ತಾನು ಗುಜರಾತ್ ನಲ್ಲಿ ಮುಖ್ಯಮಂತ್ರಿಯಾಗಿದ್ದ ವೇಳೆ ಕರ್ನಾಟಕದಲ್ಲಿ ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದರು. ಕರ್ನಾಟಕದಲ್ಲಿ ಅಡಕೆ ಬೆಳೆಗಾರರಿಗೆ ಸಮಸ್ಯೆಯಾಗಿತ್ತು. ಈ ವೇಳೆ ಅವರು ನಿಯೋಗದೊಂದಿಗೆ ಗುಜರಾತ್ ಗೆ ಬಂದು ನನ್ನನ್ನು ಭೇಟಿ ಮಾಡಿ ಅಡಕೆ ಬೆಳೆಗಾರರಿಗೆ ಬೆಂಬಲ ನೀಡುವಂತೆ ಕೇಳಿಕೊಂಡರು.
ಆಗ ನಾನು ಅವರಿಗೆ ಬೆಂಬಲವಾಗಿ ನಿಂತೆ. ಯಡಿಯೂರಪ್ಪನವರು ಹೇಳಿದ ಎಲ್ಲಾ ಕ್ರಮಗಳನ್ನೂ ನಾನು ಕೈಗೊಂಡೆ. ಇಲ್ಲಿನ ಕೃಷಿಗರು ವಿದೇಶದಿಂದ ಆಮದಾಗುವ ಅಡಕೆಯಿಂದ ಎಲ್ಲಿ ಇಲ್ಲಿನ ಅಡಕೆ ದರ ಬಿದ್ದು ಹೋಗುವುದೋ ಎಂಬ ಬಗ್ಗೆ ಚಿಂಚಿತರಾಗಿದ್ದರು.
ಇಲ್ಲಿ ಇಷ್ಟೊಂದು ರೈತರು ಬಂಡವಾಳ ಹಾಕಿ ಅಡಕೆ ಯನ್ನು ಬೆಳೆಯುತ್ತಿದ್ದಾರೆ. ಆದರೂ ವಿದೇಶದಿಂದ ಅಡಕೆಯನ್ನು ಆಮದು ಮಾಡಿಕೊಂಡರೆ ಇಲ್ಲಿನ ರೈತರ ಪರಿಸ್ಥಿತಿ ಏನಾಗಬೇಡ ಎಂದು ನೀವೇ ಹೇಳಿ? ಇದು ಇಲ್ಲಿನ ರೈತರಿಗೆ ಮಾಡುವ ಅನ್ಯಾಯ, ಮೋಸ, ವಂಚನೆ ಹೌದೋ, ಅಲ್ಲವೋ? ನೀವೇ ಹೇಳಿ ಎಂದು ಮೋದಿ ಪ್ರಶ್ನಿಸಿದರು.
ಕಾಂಗ್ರೆಸ್ ನ ಸುಳ್ಳಿನ ಬಲೂನ್ ಒಡೆದು ಹೋಗಿದೆ. ಜನ ಎಷ್ಟು ಸುಳ್ಳು ಹೇಳಿದರೂ ಜನರು ಅವರನ್ನು ನಂಬುತ್ತಿಲ್ಲ. ಹೀಗಾಗಿ ಅಂತಿಮ ಕ್ಷಣದಲ್ಲಿ ಈವರೆಗೆ ಪ್ರಚಾರಕ್ಕೆ ಆಗಮಿಸದ ಅವರ ಮುಖಂಡರೂ ಪ್ರಚಾರಕ್ಕೆ ಆಗಮಿಸುವ ಹಾಗಾಗಿದೆ ಎಂದು ಪರೋಕ್ಷವಾಗಿ ಸೋನಿಯಾ ಗಾಂಧಿಗೆ ಟಾಂಗ್ ನೀಡಿದರು.
Prime Minister Narendra Modi arrived in Shivamogga on Sunday to address a rally after a massive roadshow in Karnataka's Bengaluru for the second time this election season. PM Modi stated at the public rally that due to the NEET exam, we held our roadshow early in the morning. Modi stated that despite the fact that the roadshow was held early, people came out in large numbers to show their support for the party.
15-07-25 10:35 am
Bangalore Correspondent
ಧರ್ಮಸ್ಥಳದಲ್ಲಿ 20 ವರ್ಷಗಳಲ್ಲಾದ ಯುವತಿಯರ ನಾಪತ್ತೆ-...
14-07-25 10:44 pm
Shiradi Ghat Accident, Car: ಶಿರಾಡಿ ಘಾಟ್ ; ರಸ್...
14-07-25 01:43 pm
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
15-07-25 10:32 am
Mangalore Correspondent
ಕಲ್ಲು ಮರಳಿನ ಸಮಸ್ಯೆಯಿಂದ ಜನರ ತಲೆಗೆ ಚಪ್ಪಡಿ ಕಲ್ಲು...
14-07-25 09:55 pm
Mrpl leakgae, Death, Fight: ಅನಿಲ ಸೋರಿಕೆಯಿಂದ ಇ...
14-07-25 07:56 pm
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm