ಬ್ರೇಕಿಂಗ್ ನ್ಯೂಸ್
07-05-23 09:44 pm HK News Desk ಕರ್ನಾಟಕ
ಮೈಸೂರು, ಮೇ 7: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ 14 ಬಾರಿ ಚಿನ್ನದ ಅಂಬಾರಿ ಹೊತ್ತು ಸಾಗಿದ್ಧ ಬಲರಾಮ(67) ಆನೆ ಅನಾರೋಗ್ಯದಿಂದ ಮೃತಪಟ್ಟಿದೆ.
ಬಲರಾಮ ಅನೆ ಮೈಸೂರು ದಸರಾ ಮಹೋತ್ಸವದ ವಿಜಯದಶಮಿ ಜಂಬೂಸವಾರಿ ಮೆರವಣಿಗೆಯಲ್ಲಿ 14 ಬಾರಿ ಚಿನ್ನದ ಅಂಬಾರಿ ಹೊತ್ತು ಸಾಗುವ ಮೂಲಕ ಬಲರಾಮ ಎಲ್ಲರ ಕಣ್ಮಣಿಯಾಗಿತ್ತು. ಅತ್ಯಂತ ಸೌಮ್ಯ ಸ್ವಭಾವದ ಆನೆ ಬಲರಾಮ ಇತ್ತೀಚೆಗೆ ತೀವ್ರ ಅಸ್ವಸ್ಥಗೊಂಡಿತ್ತು.
ನಾಗರಹೊಳೆ ಉದ್ಯಾನವನದ ಹುಣಸೂರು ರೇಂಜ್ ವ್ಯಾಪ್ತಿಯ ಭೀಮನಕಟ್ಟೆ ಆನೆ ಶಿಬಿರದಲ್ಲಿ ಪಶು ವೈದ್ಯರ ತಂಡ ಬಲರಾಮನಿಗೆ ಚಿಕಿತ್ಸೆ ನೀಡುತ್ತಾ ಬಂದಿತ್ತು. ಬಲರಾಮನ ಬಾಯಿಯಲ್ಲಿ ಹುಣ್ಣಾಗಿದ್ಧರಿಂದ ಆಹಾರ ಸೇವಿಸಲು ನೀರು ಕುಡಿಯಲು ಆಗದೇ ಅಸ್ವಸ್ಥಗೊಂಡಿತ್ತು. ವೈದ್ಯರು ನೀಡುತ್ತಿದ್ಧ ಚಿಕಿತ್ಸೆಗೆ ಸ್ಪಂದಿಸದೇ ಬಲರಾಮ ಭಾನುವಾರ ಕೊನೆಯುಸಿರೆಳೆಯುತು.
ಎಷ್ಟೇ ಪ್ರಯತ್ನಪಟ್ಟರು ಸಹ ಚಿಕಿತ್ಸೆಗೆ ಸ್ಪಂದಿಸದ್ದರಿಂದ ಬಲರಾಮನನ್ನು ಬದುಕಿಸಲು ಸಾಧ್ಯವಾಗಲಿಲ್ಲ. ಬಲರಾಮನ ಅಗಲುವಿಕೆಯಿಂದ ಭೀಮನಕಟ್ಟೆ ಆನೆ ಶಿಬಿರದ ಅಧಿಕಾರಿಗಳು ಮತ್ತು ಸಿಬ್ಬಂದಿ ತೀವ್ರ ದುಃಖತಪ್ತರಾಗಿದ್ದಾರೆ. ಇದು ಟಿಬಿ ಇರಬಹುದೆಂದು ಶಂಕಿಸಲಾಗಿದ್ದರೂ ಹೆಚ್ಚಿನ ಮಾಹಿತಿ ಇನ್ನಷ್ಟೇ ಬರಬೇಕಿದೆ.
ಗುಂಡು ಹೊಡೆದಿದ್ದ ಜಮೀನು ಮಾಲೀಕ
ಬಲರಾಮ ಆನೆಗೆ ವ್ಯಕ್ತಿಯೊಬ್ಬ ಗುಂಡು ಹೊಡೆದ ಪ್ರಸಂಗ ಡಿಸೆಂಬರ್ 22ರಂದು ನಡೆದಿತ್ತು. ಪಿರಿಯಾಪಟ್ಟಣ ತಾಲೂಕಿನ ಭೀಮನಕಟ್ಟೆ ಸಾಕಾನೆ ಶಿಬಿರಕ್ಕೆ ಸಮೀಪದ ಜಮೀನೊಂದಕ್ಕೆ ಬಲರಾಮ ಹೋಗಿದ್ದ. ಇದರಿಂದ ಕೋಪೋದ್ರಿಕ್ತನಾದ ಆ ಜಮೀನಿನ ಮಾಲೀಕ ಸುರೇಶ್ ಎಂಬಾತ ಮನಸೋ ಇಚ್ಛೆ ಬಲರಾಮನಿಗೆ ಗುಂಡು ಹಾರಿಸಿದ್ದ.
ಈ ವೇಳೆ ಗುಂಡು ಆನೆಯ ತೊಡೆ, ಕಾಲು ಸೇರಿದಂತೆ ದೇಹದ ಅರ್ಧ ಭಾಗಕ್ಕೆ ಹೊಕ್ಕಿ ಬಲರಾಮನಿಗೆ ತೀವ್ರ ಘಾಸಿಗೊಳಿಸಿತ್ತು. ವಿಷಯ ತಿಳಿಯುತ್ತಿದ್ದಂತೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಪಶು ವೈದ್ಯಾಧಿಕಾರಿ ಡಾ. ರಮೇಶ್ ಅವರು ಸ್ಥಳಕ್ಕೆ ತೆರಳಿ ಚಿಕಿತ್ಸೆ ನೀಡಿದ್ದರು. ಆದಾದ ಬಳಿಕ ಬಲರಾಮ ಆನೆ ಚೇತರಿಸಿಕೊಂಡಿತ್ತು. ಗುಂಡು ಹಾರಿಸಿದ್ದ ಆರೋಪಿ ಸುರೇಶ್‌ನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದರು. ಆತನಿಂದ ಒಂಟಿ ನಳಿಕೆಯ ಕೋವಿ ಹಾಗೂ ಕಾಡತೂಸುಗಳನ್ನು ವಶಕ್ಕೆ ಪಡೆಯಲಾಗಿತ್ತು. ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು.
Majestic in appearance and calm in disposition were the hallmarks of elephant Balarama of Mysuru Dasara fame, who passed away on Sunday, May 7, after a prolonged illness. He was 67 years and was battling what is suspected to be tuberculosis and died at around 4.30 p.m. at Bhimanakatte elephant camp in Hunsur range.
25-08-25 06:07 pm
HK News Desk
DK Shivakumar, BK Hariprasad: ಕೆಪಿಸಿಸಿ ಅಧ್ಯಕ್...
25-08-25 03:02 pm
Satish Jarkiholi, Dharmasthala, SIT: ಧರ್ಮಸ್ಥಳ...
25-08-25 10:37 am
50% ರಿಯಾಯಿತಿ ಆಫರ್ ಗೆ ಮುಗಿಬಿದ್ದ ಜನರು ; ಮೊದಲ ದಿ...
24-08-25 05:30 pm
ಮಾಸ್ಕ್ ಮ್ಯಾನ್ ಇಡೀ ಸರ್ಕಾರಿ ಯಂತ್ರವನ್ನು ಮೋಸಗೊಳಿಸ...
23-08-25 10:40 pm
24-08-25 01:47 pm
HK News Desk
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
ಪತ್ನಿಯ ಪದವಿ ಪ್ರದಾನ ಸಮಾರಂಭಕ್ಕೆ ಬ್ರಿಟನ್ ತೆರಳಲು...
22-08-25 08:07 pm
Another Security, Parliament, Arrest: ಸಂಸತ್ತಿ...
22-08-25 02:00 pm
25-08-25 05:24 pm
Mangalore Correspondent
Dharmasthala, Mask Man, Fake Skull, SIT: ಎಸ್ಐ...
25-08-25 12:24 pm
Fake Human Right, Rowdy Sheeter Madan Bugadi,...
24-08-25 10:49 pm
YouTuber Sameer MD, Beltangady Police Station...
24-08-25 02:48 pm
ಬೇರೆ ಕಡೆ ಇಲ್ಲದ ಕಾನೂನನ್ನು ನಮ್ಮ ಜಿಲ್ಲೆಯಲ್ಲಿ ಹೇರ...
23-08-25 10:22 pm
25-08-25 08:29 pm
HK News Desk
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm
Online Fraud, cyber, Mangalore : ರಸಗೊಬ್ಬರ ಕಂಪ...
25-08-25 04:39 pm
Dharmasthala Case, Pastor John Shamine and No...
25-08-25 02:29 am