ಬ್ರೇಕಿಂಗ್ ನ್ಯೂಸ್
12-05-23 04:56 pm Bangalore Correspondent ಕರ್ನಾಟಕ
ಬೆಂಗಳೂರು, ಮೇ 12: ಅತಂತ್ರ ಫಲಿತಾಂಶ ಬರಲಿದೆ ಎಂಬ ಸಮೀಕ್ಷೆಗಳ ವರದಿ ಹಿನ್ನೆಲೆಯಲ್ಲಿ ಕಾಂಗ್ರೆಸ್, ಬಿಜೆಪಿ ಎರಡೂ ಅಧಿಕಾರಕ್ಕೇರಲು ತೆರೆಮರೆಯ ಪ್ರಯತ್ನ ನಡೆಸಿದೆ. ಇದೇ ವೇಳೆ, ಕಾಂಗ್ರೆಸ್ ತನ್ನ ಶಾಸಕರನ್ನು ಹಿಡಿದಿಡಲು ಪ್ಲಾನ್ ಹಾಕ್ಕೊಂಡಿದೆ. ಆಪರೇಶನ್ ಕಮಲದ ಭೀತಿಯಿಂದಾಗಿ ಕಾಂಗ್ರೆಸ್ ನಾಯಕರು, ತಮ್ಮ ಅಭ್ಯರ್ಥಿಗಳಿಗೆ ಮುನ್ನಡೆ ಪಡೆದು ಗೆಲುವು ಖಾತ್ರಿಯಾಗುತ್ತಲೇ ನೇರವಾಗಿ ಬೆಂಗಳೂರಿಗೆ ಬರುವಂತೆ ಸೂಚನೆ ನೀಡಿದ್ದಾರೆ.
ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಗುರುವಾರ ರಾತ್ರಿ ರಾಜ್ಯದ ಎಲ್ಲ ಅಭ್ಯರ್ಥಿಗಳ ಜೊತೆಗೂ ವರ್ಚುವಲ್ ಮೀಟಿಂಗ್ ನಡೆಸಿದ್ದು, ಲೀಡ್ ಪಡೆಯುತ್ತಲೇ ನೇರವಾಗಿ ಬೆಂಗಳೂರಿಗೆ ಬಂದು ಉಳಿದುಕೊಳ್ಳುವಂತೆ ಸಲಹೆ ಮಾಡಿದ್ದಾರೆ.
ಚುನಾವಣೋತ್ತರ ಸಮೀಕ್ಷೆಗಳಲ್ಲಿ ಕೆಲವು ಕಾಂಗ್ರೆಸ್ ಬಹುಮತ ಸಾಧಿಸುತ್ತೆ ಎಂದಿದ್ದರೆ, ಹೆಚ್ಚಿನವುಗಳಲ್ಲಿ ಅತಂತ್ರ ಫಲಿತಾಂಶ ತೋರಿಸಿದೆ. ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಮೂಡಿಬರಲಿದೆ ಎಂದೂ ಹೇಳಿದೆ. ಹೀಗಾಗಿ ಕಾಂಗ್ರೆಸ್ ಕೆಲವು ಸ್ಥಾನಗಳಿಂದ ಮ್ಯಾಜಿಕ್ ನಂಬರಿನಿಂದ ಮಿಸ್ ಹೊಡೆಯುತ್ತಾ ಅನ್ನುವ ಜಿಜ್ಞಾಸೆ ಉಂಟಾಗಿದೆ. ಇಂತಹ ಅನುಮಾನ ಸ್ವತಃ ರಾಜ್ಯ ಕಾಂಗ್ರೆಸ್ ನಾಯಕರಲ್ಲೂ ಇದ್ದು, ಹೊರಗೆ ಬಿಟ್ಟು ಕೊಡದಿದ್ದರೂ ತಮ್ಮ ಶಾಸಕರು ವಿರೋಧಿಗಳಿಗೆ ದಾಳವಾಗದಿರಲಿ ಎಂದು ಆಪರೇಶನ್ ಆಗದಂತೆ ಹಿಡಿದಿಡಲು ಪ್ರಯತ್ನಿಸಿದ್ದಾರೆ.
ಇದೇ ವೇಳೆ, ಬಿಜೆಪಿ ರೀತಿಯಲ್ಲೇ ರಿವರ್ಸ್ ಆಪರೇಶನ್ ಮಾಡೋದಕ್ಕೂ ಕಾಂಗ್ರೆಸ್ ಸಿದ್ಧತೆ ಮಾಡಿಕೊಂಡಿದೆ. 2-3 ಸೀಟು ಕಡಿಮೆಯಾದಲ್ಲಿ ಆಪರೇಶನ್ ಮೂಲಕ ಶಾಸಕರನ್ನು ಖರೀದಿಸುವುದಕ್ಕೂ ತಯಾರಿ ನಡೆಸಿದೆ. ಎರಡು ಪಕ್ಷಗಳೂ ತಮಗೇ ಬಹುಮತ ಎಂದು ಹೇಳಿಕೊಂಡರೂ, ಒಳಗೊಳಗೆ ಅತಂತ್ರದ ಭೀತಿ ಎದುರಿಸುತ್ತಿವೆ.
Before BJP starts operation, come to Bangalore when congress is about to get powers, leaders to MLAs. Revenue Minister and senior BJP leader R Ashoka said that the BJP will start an ‘operation’ with the high command’s guidance, if the party does not win a majority. Speaking to Kannada news channel News First, Ashoka exuded confidence that the BJP will form government, irrespective of whether they win a majority.
25-08-25 10:37 am
HK News Desk
50% ರಿಯಾಯಿತಿ ಆಫರ್ ಗೆ ಮುಗಿಬಿದ್ದ ಜನರು ; ಮೊದಲ ದಿ...
24-08-25 05:30 pm
ಮಾಸ್ಕ್ ಮ್ಯಾನ್ ಇಡೀ ಸರ್ಕಾರಿ ಯಂತ್ರವನ್ನು ಮೋಸಗೊಳಿಸ...
23-08-25 10:40 pm
HK Patil, Illegal Mining: 20 ಕೋಟಿ ಮೆಟ್ರಿಕ್ ಟನ...
23-08-25 09:56 pm
ಆ.23ರಿಂದ ಹಿಂದುಳಿದ ವರ್ಗಗಳ ಸಾಮಾಜಿಕ - ಶೈಕ್ಷಣಿಕ...
22-08-25 10:28 pm
24-08-25 01:47 pm
HK News Desk
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
ಪತ್ನಿಯ ಪದವಿ ಪ್ರದಾನ ಸಮಾರಂಭಕ್ಕೆ ಬ್ರಿಟನ್ ತೆರಳಲು...
22-08-25 08:07 pm
Another Security, Parliament, Arrest: ಸಂಸತ್ತಿ...
22-08-25 02:00 pm
25-08-25 12:24 pm
Mangalore Correspondent
Fake Human Right, Rowdy Sheeter Madan Bugadi,...
24-08-25 10:49 pm
YouTuber Sameer MD, Beltangady Police Station...
24-08-25 02:48 pm
ಬೇರೆ ಕಡೆ ಇಲ್ಲದ ಕಾನೂನನ್ನು ನಮ್ಮ ಜಿಲ್ಲೆಯಲ್ಲಿ ಹೇರ...
23-08-25 10:22 pm
MP Brijesh Chowta, Mangalore: ಅಡಿಕೆ ಹಳದಿ ರೋಗ...
23-08-25 09:00 pm
25-08-25 02:29 am
Mangaluru Correspondent
ಮುಸ್ಲಿಂ ಗಂಡನನ್ನು ರಾಡ್ ನಲ್ಲಿ ಹೊಡೆದು ಕೊಲೆಗೈದು ಶ...
24-08-25 10:33 pm
ಜೈಲು ಸಿಬ್ಬಂದಿಯಿಂದಲೇ ಕೈದಿಗಳಿಗೆ ಗಾಂಜಾ ಪೂರೈಕೆ ;...
24-08-25 06:36 pm
ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತ ಬಾಲಕಿ ಜೊತೆ ಸು...
24-08-25 04:48 pm
ಪತ್ನಿಗೆ ಬೆಂಕಿ ಹಚ್ಚಿ ಕೊಲೆಗೈದ ಪತಿಯ ಕಾಲಿಗೆ ಪೊಲೀಸ...
24-08-25 04:00 pm