ಕಾಂಗ್ರೆಸ್ ನಾಗಾಲೋಟ; 125 ನಾಟೌಟ್, ಡಿಕೆಶಿ ಲಕ್ಷ ಮತದ ಗೆಲುವು, ಸುಧಾಕರ್, ಶ್ರೀರಾಮುಲು, ಕಾಗೇರಿ ಸೋಲು 

13-05-23 12:39 pm       Bangalore Correspondent   ಕರ್ನಾಟಕ

ರಾಜ್ಯ ವಿಧಾನಸಭೆ ಫಲಿತಾಂಶ ಹೊರಬಿದ್ದಿದ್ದು ಕಾಂಗ್ರೆಸ್ ಸ್ಪಷ್ಟ ಬಹುಮತ ಸಾಧಿಸುವತ್ತ  ಮುನ್ನುಗ್ಗಿದೆ.‌ ಆಡಳಿತಾರೂಢ ಬಿಜೆಪಿ ರಾಜ್ಯದೆಲ್ಲೆಡೆ ಹೀನಾಯ ಸೋಲು ಕಂಡಿದೆ. 

ಬೆಂಗಳೂರು, ಮೇ 13 : ರಾಜ್ಯ ವಿಧಾನಸಭೆ ಫಲಿತಾಂಶ ಹೊರಬಿದ್ದಿದ್ದು ಕಾಂಗ್ರೆಸ್ ಸ್ಪಷ್ಟ ಬಹುಮತ ಸಾಧಿಸುವತ್ತ  ಮುನ್ನುಗ್ಗಿದೆ.‌ ಆಡಳಿತಾರೂಢ ಬಿಜೆಪಿ ರಾಜ್ಯದೆಲ್ಲೆಡೆ ಹೀನಾಯ ಸೋಲು ಕಂಡಿದೆ. 

12 ಗಂಟೆ ವರೆಗಿನ ಮಾಹಿತಿ ಪ್ರಕಾರ, ಕಾಂಗ್ರೆಸ್ 125ಕ್ಕು ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸುವ ಸುಳಿವು ನೀಡಿದೆ. ಕನಕಪುರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಒಂದು ಲಕ್ಷ ಮತಗಳ ಅಂತರದಿಂದ ಗೆಲುವು ಕಂಡಿದ್ದಾರೆ. 

ಆರೋಗ್ಯ ಸಚಿವ ಸುಧಾಕರ್ ಹೀನಾಯ ಸೋಲುಂಡು ಮುಖಭಂಗ ಅನುಭವಿಸಿದ್ದಾರೆ. ಅಲ್ಲಿ ಕಾಂಗ್ರೆಸಿನ ಪ್ರದೀಪ್ ಈಶ್ವರ್ ಗೆಲುವು ಕಂಡಿದ್ದಾರೆ. ಶಿಕಾರಿಪುರದಲ್ಲಿ ವಿಜಯೇಂದ್ರ ಗೆಲುವು ಕಂಡಿದ್ದಾರೆ. ಸಿಎಂ ಬೊಮ್ಮಾಯಿ ಗೆಲುವು ಕಂಡಿದ್ದರೆ, ಬಿಜೆಪಿ ಬಿಟ್ಟು ಕಾಂಗ್ರೆಸ್ ಹೋಗಿದ್ದ ಜಗದೀಶ್ ಶೆಟ್ಟರ್ ಆಘಾತ ಅನುಭವಿಸಿದ್ದಾರೆ. 18 ಸಾವಿರ ಮತಗಳ ಹಿನ್ನಡೆ ಅನುಭವಿಸಿದ್ದಾರೆ. 

Hopeful of getting better post in Karnataka cabinet: B Sriramulu | Deccan  Herald

Disrupting Assembly costs taxpayers' money, says Kageri | Deccan Herald

ಸಚಿವರಾಗಿದ್ದ ಶ್ರೀರಾಮುಲು ಬಳ್ಳಾರಿ ಗ್ರಾಮಾಂತರದಲ್ಲಿ 21 ಸಾವಿರ ಮತಗಳಿಂದ ಸೋಲು ಕಂಡಿದ್ದಾರೆ. ವಿಜಯನಗರದಲ್ಲಿ ಆನಂದ್ ಸಿಂಗ್ ಪುತ್ರ ಸಿದ್ದಾರ್ಥ ಸಿಂಗ್ ಸೋಲುಂಡಿದ್ದಾರೆ. ಶಿರಸಿಯಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಸೋತಿದ್ದಾರೆ. 

ರಾಮನಗರದಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲಿನತ್ತ ಮುಖ ಮಾಡಿದ್ದಾರೆ.

Congress DK Shivakumar bags major Victory in Kanakapura against BJP's R Ashok with 1 lakh leading votes, Sriramulu and Vishweshwar Hegde Kageri setback.