ವಿಫಲಗೊಂಡ ಬಿಜೆಪಿ ತಂತ್ರ ; ಚಾಮರಾಜನಗರದಲ್ಲಿ ಸೋಮಣ್ಣಗೆ ಸೋಲು, ಮತ್ತೆ ಗೆದ್ದ ಕೈ ಅಭ್ಯರ್ಥಿ ಪುಟ್ಟರಂಗ ಶೆಟ್ಟಿ

13-05-23 01:06 pm       HK News Desk   ಕರ್ನಾಟಕ

ರಾಜ್ಯದ ಕುತೂಹಲಕ್ಕೆ ಕಾರಣವಾಗಿದ್ದ ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪುಟ್ಟರಂಗಶೆಟ್ಟಿ ಗೆಲುವು ಸಾಧಿಸಿದ್ದಾರೆ. ಪುಟ್ಟರಂಗಶೆಟ್ಟಿ 7383 ಮತಗಳ ಅಂತರದ ಗೆಲುವು ಸಾಧಿಸಿದ್ದಾರೆ.

ಚಾಮರಾಜನಗರ, ಮೇ 13: ರಾಜ್ಯದ ಕುತೂಹಲಕ್ಕೆ ಕಾರಣವಾಗಿದ್ದ ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪುಟ್ಟರಂಗಶೆಟ್ಟಿ ಗೆಲುವು ಸಾಧಿಸಿದ್ದಾರೆ. ಪುಟ್ಟರಂಗಶೆಟ್ಟಿ 7383 ಮತಗಳ ಅಂತರದ ಗೆಲುವು ಸಾಧಿಸಿದ್ದಾರೆ.

ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಬಂದು ಸ್ಪರ್ಧೆ ನಡೆಸಿದ್ದ ‌ಸಚಿವ ವಿ.ಸೋಮಣ್ಣ ಸೋಲನುಭವಿಸಿದ್ದಾರೆ.

ಪುಟ್ಟರಂಗಶೆಟ್ಟಿ ಅವರು 83136 ಮತ ಪಡೆದರೆ, ಬಿಜೆಪಿಯ ವಿ ಸೋಮಣ್ಣ 75753 ಮತಗಳನ್ನು ಪಡೆದಿದ್ದಾರೆ.

ಗೋವಿಂದರಾಜ ನಗರ ಕ್ಷೇತ್ರದ ಸೋಮಣ್ಣ ಚಾಮರಾಜನಗರ ಮತ್ತು ವರುಣ ಕ್ಷೇತ್ರದಲ್ಲಿ ಸ್ಪರ್ಧೆ ನಡೆಸಿದ್ದರು.

ಗುಂಡ್ಲುಪೇಟೆ ಕಾಂಗ್ರೆಸ್ ಅಭ್ಯರ್ಥಿ ಎಚ್ ಎಂ ಗಣೇಶ್ ಪ್ರಸಾದ್ ಗೆಲುವು ಸಾಧಿಸಿದ್ದಾರೆ.

Congress candidate Puttarangashetty has won in the Chamarajanagar assembly constituency, which was the cause of curiosity in the state. Puttarangashetty won by a margin of 7383 votes. Minister V. Somanna, who came and contested in Chamarajanagar Assembly Constituency, has been defeated.