ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್​ನ ಮಂಕಾಳು ವೈದ್ಯ 

13-05-23 07:54 pm       HK News Desk   ಕರ್ನಾಟಕ

ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ  ಫಲಿತಾಂಶ ಪ್ರಕಟಗೊಂಡಿದ್ದು, ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದಿಂದ  ಹಾಲಿ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿರುವ ಸುನೀಲ್​ ನಾಯ್ಕ್​ ಅವರನ್ನ ಬಾರಿ ಅಂತರದಿಂದ ಸೋಲಿಸಿ, ಕಾಂಗ್ರೆಸ್​​ನಿಂದ ಮಂಕಾಳ ವೈದ್ಯ 99603 ಮತಗಳನ್ನು ಪಡೆದು  ಭರ್ಜರಿ ಗೆಲುವು ಸಾಧಿಸಿದ್ದಾರೆ.

ಹೊನ್ನಾವರ, ಮೇ 13: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ  ಫಲಿತಾಂಶ ಪ್ರಕಟಗೊಂಡಿದ್ದು, ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದಿಂದ  ಹಾಲಿ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿರುವ ಸುನೀಲ್​ ನಾಯ್ಕ್​ ಅವರನ್ನ ಬಾರಿ ಅಂತರದಿಂದ ಸೋಲಿಸಿ, ಕಾಂಗ್ರೆಸ್​​ನಿಂದ ಮಂಕಾಳ ವೈದ್ಯ 99603 ಮತಗಳನ್ನು ಪಡೆದು  ಭರ್ಜರಿ ಗೆಲುವು ಸಾಧಿಸಿದ್ದಾರೆ.

ಕಳೆದ 2018 ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಪರವಾಗಿ ಕಣದಲಿದ್ದು, 77,242 ಮತಗಳನ್ನ ಪಡೆದು ಕೇವಲ 5930 ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಈ ಬಾರಿ ಹೇಗಾದರೂ ಮಾಡಿ ಗೆಲುವು ಸಾಧಿಬೇಕೆಂದು ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು. ಜೊತೆಗ ಮಂಕಾಳು ವೈದ್ಯ ಅವರು 2013 ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಈ ಬಾರಿ ಎಂದಿನಂತೆ ಭಟ್ಕಳ ಹೊನ್ನಾವರ ಕ್ಷೇತ್ರದಲ್ಲಿ ಬಿಜೆಪಿ ಕಾಂಗ್ರೆಸ್ ನಡುವೆ​ ನೇರಾನೇರ ಸ್ಪರ್ಧೆ ಏರ್ಪಟಿತ್ತು. ಮಂಕಾಳು ವೈದ್ಯ 33000 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರ. 

ಸುನೀಲ್ ನಾಯ್ಕ ಗೆಲುವಿನ ಮೂಲಕ ಭಟ್ಕಳದಲ್ಲಿ ಖಾತೆ ತೆರೆದ ಬಿಜೆಪಿ | BJP candidate sunil  nayak won in bhatkal constituency. - Kannada Oneindia

ಇನ್ನು ಕಳೆದ ಬಾರಿ ಹಾಲಿ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿರುವ ಸುನೀಲ್​ ನಾಯ್ಕ್​ ಅವರೇ ಸ್ಪರ್ಧಿಸಿದ್ದರು. ಕಳೆದ ಸಲ 2018ರ ವಿಧಾನಸಭೆ ಚುನಾವಣೆಯಲ್ಲಿ ಬರೊಬ್ಬರಿ 83,172 ಮತಗಳನ್ನ ಪಡೆದು ಜಯಶಾಲಿಯಾಗಿದ್ದರು. ಈ ಬಾರಿ ಕೂಡ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದು, ಮತ್ತೊಮ್ಮೆ ಗೆಲ್ಲುವ
ಭರವಸೆಯಲ್ಲಿದ್ದರು. ಆದರೀಗ ಬಾರಿ ಅಂತರದಿಂದ ಸೋಲು ಕಂಡಿದ್ದಾರೆ. ಈ ಮೂಲಕ ಮಾಜಿ ಶಾಸಕರಾಗಿದ್ದ ಮಂಕಾಳು ವೈದ್ಯ ಗೆಲುವಿನ ನಗೆ ಬಿರಿದ್ದಾರೆ.

Mankal Vaidya major win in Bhatkal-Honnavar constituency, defeats BJP MLA Sunil Naik with 33000 leading votes. Vaidya defeated BJP's Sunil Naik, a former minister in the state government, in a closely contested battle. The Bhatkal-Honnavar constituency is located in the Uttara Kannada district of the state.