ಬಿಕೆ ಹರಿಪ್ರಸಾದ್, ಯುಟಿ ಖಾದರ್, ಪರಮೇಶ್ವರ್ ಸೇರಿ 32 ಹೆಸರು ಸಚಿವ ಸ್ಥಾನಕ್ಕೆ ; ಜಮೀರ್ ಖಾನ್ ಹೆಸರು ಹೊರಕ್ಕೆ, ಡಿಕೆಶಿ ಬಣದ 20 ಮಂದಿಗೆ ಸ್ಥಾನ 

19-05-23 10:10 pm       Bangalore Correspondent   ಕರ್ನಾಟಕ

ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೇರಲು ಮುಹೂರ್ತ ನಿಗದಿಯಾಗಿದ್ದು, ಸಿದ್ದರಾಮಯ್ಯ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಲಿದ್ದಾರೆ. ಜೊತೆಗೆ, ಡಿ.ಕೆ.ಶಿವಕುಮಾರ್‌ ಉಪ ಮುಖ್ಯಮಂತ್ರಿ ಎಂಬುದು ಖಾತ್ರಿಯಾಗಿದೆ.

ಬೆಂಗಳೂರು, ಮೇ 19 : ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೇರಲು ಮುಹೂರ್ತ ನಿಗದಿಯಾಗಿದ್ದು, ಸಿದ್ದರಾಮಯ್ಯ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಲಿದ್ದಾರೆ. ಜೊತೆಗೆ, ಡಿ.ಕೆ.ಶಿವಕುಮಾರ್‌ ಉಪ ಮುಖ್ಯಮಂತ್ರಿ ಎಂಬುದು ಖಾತ್ರಿಯಾಗಿದೆ. ಹೊಸ ಸರ್ಕಾರದಲ್ಲಿ ಯಾರೆಲ್ಲ ಸಚಿವರಾಗುತ್ತಾರೆ ಎಂಬ ಕುತೂಹಲ ಉಂಟಾಗಿದೆ. ಈಗಾಗಲೇ ಸಚಿವ ಸ್ಥಾನಕ್ಕೆ ಸಂಭ್ಯಾವರ ಪಟ್ಟಿಯನ್ನು ಕಾಂಗ್ರೆಸ್‌ ಸಿದ್ಧಪಡಿಸಿದೆ. ಮೊದಲ ದಿನವೇ ಪೂರ್ಣ ಪ್ರಮಾಣದ ಸರ್ಕಾರ ತರಲು ಚಿಂತನೆ ನಡೆದಿದೆ. ಇದಕ್ಕಾಗಿ 32 ಮಂದಿಯ ಹೆಸರುಗಳನ್ನು ಅಂತಿಮಗೊಳಿಸಿ ಹೈಕಮಾಂಡಿಗೆ ರವಾನೆ ಮಾಡಲಾಗಿದೆ. 

ಸಂಭಾವ್ಯರ ಪಟ್ಟಿಯಲ್ಲಿ ಜಿ.ಪರಮೇಶ್ವರ, ಕೆ.ಎಚ್‌.ಮುನಿಯಪ್ಪ/ರೂಪಕಲಾ ಶಶಿಧರ್‌, ಬಿ.ಕೆ.ಹರಿಪ್ರಸಾದ್‌, ಎಂ.ಬಿ.ಪಾಟೀಲ, ರಾಮಲಿಂಗಾ ರೆಡ್ಡಿ, ಆರ್.ವಿ.ದೇಶಪಾಂಡೆ, ಕೆ.ಜೆ.ಜಾರ್ಜ್‌, ಎಚ್‌.ಕೆ.‍ಪಾಟೀಲ, ಕೃಷ್ಣ ಬೈರೇಗೌಡ, ಯು.ಟಿ.ಖಾದರ್‌/ ಸಲೀಂ ಅಹ್ಮದ್‌, ಜಮೀರ್ ಅಹ್ಮದ್‌ ಖಾನ್‌/ ಎನ್‌.ಎ. ಹ್ಯಾರೀಸ್‌, ಸತೀಶ ಜಾರಕಿಹೊಳಿ, ಎಚ್‌.ಸಿ.ಮಹದೇವಪ್ಪ, ಶರಣ ಪ್ರಕಾಶ ಪಾಟೀಲ ಹೆಸರಿದೆ. 

BK Hariprasad Congress candidate from Bengaluru South constituency

Other cases of crassness by Parameshwar Naik crop up - The Hindu

ಅಜಯ್‌ ಧರ್ಮ ಸಿಂಗ್‌, ದಿನೇಶ್‌ ಗುಂಡೂರಾವ್‌, ಲಕ್ಷ್ಮಣ ಸವದಿ, ಲಕ್ಷ್ಮಿ ಹೆಬ್ಬಾಳಕರ, ಮಧು ಬಂಗಾರಪ್ಪ, ಬಸವರಾಜ ರಾಯರಡ್ಡಿ, ಪ್ರಿಯಾಂಕ್‌ ಖರ್ಗೆ, ಸಂತೋಷ್‌ ಲಾಡ್‌, ವಿಜಯಾನಂದ ಕಾಶಪ್ಪನವರ, ವಿನಯ್‌ ಕುಲಕರ್ಣಿ, ಟಿ.ಡಿ.ರಾಜೇಗೌಡ/ ಕೆ.ಎಂ.ಶಿವಲಿಂಗೇಗೌಡ, ಬಿ.ಕೆ. ಸಂಗಮೇಶ್ವರ, ಆರ್‌.ಬಿ. ತಿಮ್ಮಾಪುರ, ಕೊತ್ತೂರು ಮಂಜುನಾಥ್‌, ಶ್ಯಾಮನೂರು ಶಿವಶಂಕರಪ್ಪ/ ಎಸ್‌.ಎಸ್‌.ಮಲ್ಲಿಕಾರ್ಜುನ, ಎಂ.ಕೃಷ್ಣಪ್ಪ/ ಪ್ರಿಯಕೃಷ್ಣ ಹೆಸರು ಇದೆ ಎನ್ನುವ ಮಾಹಿತಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.‌

Mallikarjun Kharge officially takes charge as 1st non-Gandhi Congress  president after 24 years | Mint

Karnataka Election 2023: Congress Chief D K Shivakumar Dismisses Chances Of  Post-Poll Alliance With JDS

ಡಿಕೆ ಶಿವಕುಮಾರ್ ಆಪ್ತರಿಗೆ ಸಚಿವ ಸಂಪುಟದಲ್ಲಿ 20 ಸ್ಥಾನ ಹಾಗೂ ಇದರ ಜೊತೆಗೆ ಜಲಸಂಪನ್ಮೂಲ ಮತ್ತು ಇಂಧನ ಎರಡು ಪ್ರಮುಖ ಖಾತೆಗಳನ್ನು ಪಡೆಯುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ 13 ಸಚಿವ ಸ್ಥಾನ ಬಿಟ್ಟು ಕೊಡಲಾಗುತ್ತದೆ ಎಂದು ತಿಳಿದುಬಂದಿದೆ. 

ED raids at Congress MLA Zameer Ahmed Khan's properties | Deccan Herald

U T Khader Fareed is only Cong winner in Dakshina Kannada dist

ಅಲ್ಪಸಂಖ್ಯಾತರಲ್ಲಿ ಶಿವಕುಮಾರ್ ಈಗಾಗಲೇ ಹಿರಿಯ ನಾಯಕರಾದ ಯು.ಟಿ ಖಾದರ್ ಮತ್ತು ತನ್ವೀರ್ ಸೇಠ್ ಅವರನ್ನು ಸಚಿವ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ ಮತ್ತು ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಅವರನ್ನು ಸಂಪುಟದಿಂದ ಹೊರಗಿಡಬೇಕೆಂದು ಒತ್ತಾಯಿಸಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ಸಿದ್ದರಾಮಯ್ಯನವರ ಕಟ್ಟಾ ಬೆಂಬಲಿಗ ಜಮೀರ್ ಖಾನ್ ತನ್ನನ್ನು ದೂರ ಇಡುವ ನಿರ್ಧಾರವನ್ನು ಹೇಗೆ ಎದುರಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

32 along with BK Hariprasad, UT khader, Parameshwar to be inside the cabinet of Siddaramaiah.B. Z. Zameer Ahmed Khan out for now.