ನಾರಾಯಣ ನೇತ್ರಾಲಯದ ಮುಖ್ಯಸ್ಥ, ಖ್ಯಾತ ನೇತ್ರ ತಜ್ಞ ಡಾ.ಭುಜಂಗ ಶೆಟ್ಟಿ ಇನ್ನಿಲ್ಲ ; ಹೃದಯಾಘಾತದಿಂದ ಸಾವು 

19-05-23 11:12 pm       Bangalore Correspondent   ಕರ್ನಾಟಕ

ಬೆಂಗಳೂರಿನ ನಾರಾಯಣ ನೇತ್ರಾಲಯದ ಮುಖ್ಯಸ್ಥ, ದೇಶದ ಖ್ಯಾತ ನೇತ್ರ ತಜ್ಞರಲ್ಲಿ ಒಬ್ಬರಾದ ಡಾ.ಕೆ. ಭುಜಂಗ ಶೆಟ್ಟಿ (69) ಹೃದಯಾಘಾತದಿಂದ ನಿಧನರಾಗಿದ್ದಾರೆ.‌

ಬೆಂಗಳೂರು, ಮೇ 19 : ಬೆಂಗಳೂರಿನ ನಾರಾಯಣ ನೇತ್ರಾಲಯದ ಮುಖ್ಯಸ್ಥ, ದೇಶದ ಖ್ಯಾತ ನೇತ್ರ ತಜ್ಞರಲ್ಲಿ ಒಬ್ಬರಾದ ಡಾ.ಕೆ. ಭುಜಂಗ ಶೆಟ್ಟಿ (69) ಹೃದಯಾಘಾತದಿಂದ ನಿಧನರಾಗಿದ್ದಾರೆ.‌

ಇಂದು ಬೆಳಗ್ಗೆ ತನ್ನ ಆಸ್ಪತ್ರೆಗೆ ತೆರಳಿ ರೋಗಿಗಳ ಯೋಗ ಕ್ಷೇಮ ವಿಚಾರಿಸಿದ್ದ ಭುಜಂಗ ಶೆಟ್ಟಿ ಸಂಜೆ ಮನೆಗೆ ಮರಳಿದ್ದರು. ಮನೆಯಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದು ಕೂಡಲೇ ಅವರನ್ನು ಯಶವಂತಪುರದ ಕೊಲಂಬಿಯಾ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ. ಆಸ್ಪತ್ರೆಗೆ ತೆರಳಿ ಚಿಕಿತ್ಸೆ ನೀಡಿ ಮನೆಗೆ ವಾಪಸ್ಸಾಗಿದ್ದ ಭುಜಂಗ ಶೆಟ್ಟಿ ಅವರಿಗೆ ಸಂಜೆ ತೀವ್ರ ಹೃದಯಾಘಾತ ಉಂಟಾಗಿತ್ತು.  

ಎಂದಿನಂತೆ ಡಾ. ಭುಜಂಗ ಶೆಟ್ಟಿ ಇಂದು ಕರ್ತವ್ಯಕ್ಕೆ‌ ಹಾಜರಾಗಿದ್ದರು. ಬೆಳಗ್ಗೆ ನಾರಾಯಣ ನೇತ್ರಾಲಯಕ್ಕೆ ಬಂದು ರೋಗಿಗಳ ತಪಾಸಣೆ ನಡೆಸಿದ್ದರು. ಸಂಜೆ ಮನೆಗೆ ಹೋಗಿ ಮನೆಯಲ್ಲಿ ಜಿಮ್ ನಲ್ಲಿ ವ್ಯಾಯಾಮ ಮಾಡಿದ್ದರು. ಬಳಿಕ ಎದೆನೋವು ಕಾಣಿಸಿಕೊಂಡಿದ್ದು ಅನಂತರ ತೀವ್ರ ಹೃದಯಾಘಾತವಾಗಿದ್ದರಿಂದ ಕೊನೆಯುಸಿರೆಳೆದಿದ್ದಾರೆ. ಸುಮಾರು 2.5 ಲಕ್ಷ ಜನರಿಗೆ ನೇತ್ರ ಚಿಕಿತ್ಸೆ ನೀಡಿ ಬೆಳಕು ನೀಡಿದ ಖ್ಯಾತಿ ಭುಜಂಗ ಶೆಟ್ಟಿ ಅವರದ್ದು.

Famous Dr Bhujang Shetty Chairman of Narayana Nethralaya passes away at 69 in Bangalore. He is an accomplished cataract and phacoemulsification surgeon. He is the Chairman of Narayana Nethralaya