ಬ್ರೇಕಿಂಗ್ ನ್ಯೂಸ್
20-05-23 12:03 pm HK News Desk ಕರ್ನಾಟಕ
ತುಮಕೂರು, ಮೇ 20: ಪೆಟ್ರೋಲ್ ಬಂಕ್ ನಲ್ಲಿ ಕ್ಯಾನ್ ಗೆ ಪೆಟ್ರೋಲ್ ತುಂಬಿಸುತ್ತಿದ್ದಾಗ ಬೆಂಕಿ ಹತ್ತಿಕೊಂಡು ಯುವತಿಯೊಬ್ಬಳು ಮೃತಪಟ್ಟ ಘಟನೆ ತುಮಕೂರಿನಲ್ಲಿ ನಡೆದಿದೆ.
ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಬಡವನಹಳ್ಳಿ ಗ್ರಾಮದ ಪೆಟ್ರೋಲ್ ಬಂಕ್ ನಲ್ಲಿ ಘಟನೆ ನಡೆದಿದೆ. ಬೆಂಕಿ ಹತ್ತಿಕೊಂಡು ಸ್ಕೂಟಿ ಸ್ಫೋಟಗೊಳ್ಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. 18 ವರ್ಷದ ಭವ್ಯ ಮೃತ ದುರ್ದೈವಿ. ಆಕೆಯ ತಾಯಿ ರತ್ನಮ್ಮ (46) ಗಂಭೀರ ಗಾಯಗೊಂಡಿದ್ದಾರೆ.
ಶಿರಾ ತಾಲ್ಲೂಕಿನ ಜವನಹಳ್ಳಿ ನಿವಾಸಿಗಳಾದ ತಾಯಿ ರತ್ನಮ್ಮ ಮತ್ತು ಮಗಳು ಭವ್ಯ ಪೆಟ್ರೋಲ್ ಬಂಕಿಗೆ ಬಂದಿದ್ದರು. ಸ್ಕೂಟಿ ವಾಹನದ ಮೇಲೆ ಕ್ಯಾನ್ ಇಟ್ಟು ಪೆಟ್ರೋಲ್ ತುಂಬಿಸುತ್ತಿದ್ದರು. ಭವ್ಯ ಈ ವೇಳೆ, ಸ್ಕೂಟಿಯಲ್ಲಿ ಕುಳಿತುಕೊಂಡಿದ್ದು ಬೆಂಕಿ ಮೈಗೆ ಹತ್ತಿಕೊಂಡಿದೆ. ಪೆಟ್ರೋಲ್ ತುಂಬಿಸುತ್ತಿದ್ದಾಗ ಭವ್ಯ ತನ್ನ ಮೊಬೈಲ್ ನಲ್ಲಿ ಏನನ್ನೋ ಒತ್ತಿಕೊಂಡಿದ್ದಳು. ಈ ವೇಳೆ, ಅಕಸ್ಮಾತ್ ಬೆಂಕಿ ಹತ್ತಿದ್ದು ಪೆಟ್ರೋಲ್ ಕ್ಯಾನ್ ಸಹಿತ ಧಗ ಧಗನೆ ಹೊತ್ತಿ ಉರಿದಿದೆ. ಭವ್ಯಾ ಬೆಂಕಿಯ ಜ್ವಾಲೆಯೊಂದಿಗೆ ಓಡಿ ಕೆಳಕ್ಕೆ ಬಿದ್ದಿದ್ದಾಳೆ.
ಬಳಿಕ ಆಕೆಯನ್ನು ಶಿರಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವು ಕಂಡಿದ್ದಾಳೆ. ಎರಡು ದಿನಗಳ ಹಿಂದೆ ಘಟನೆ ನಡೆದಿದ್ದು ವಿಡಿಯೋ ಈಗ ವೈರಲ್ ಆಗಿದೆ. ಬಡವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
#Bike engulfed in flames at #petrolpump after woman refills it to full tank in #Tumkur #BreakingNews#fire #tumkurnews pic.twitter.com/2pJZN3HB9p
— Headline Karnataka (@hknewsonline) May 20, 2023
Bike engulfed in flames at petrol pump in Tumkur after woman refills it to full tank, woman seriously injured. The videos of this have gone viral on social media.
16-09-25 11:00 pm
Bangalore Correspondent
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
16-09-25 07:48 pm
Mangalore Correspondent
Ex IPS Kempaiah, Professor Umeshchandra, Mang...
16-09-25 07:02 pm
Mangalore BJP Protest, UT khader, Red Stone:...
16-09-25 06:51 pm
UT Khader, Mangalore, Ullal: ಉಳ್ಳಾಲ ಕ್ಷೇತ್ರದಲ...
16-09-25 06:06 pm
ಕೆಂಪು ಕಲ್ಲು ನಿಯಮ ಸರಳೀಕರಣಕ್ಕೆ ಸಂಪುಟದಲ್ಲಿ ಒಪ್ಪಿ...
16-09-25 05:12 pm
16-09-25 10:40 pm
HK News Desk
Bidar crime: ಏಳು ವರ್ಷದ ಬಾಲಕಿಯನ್ನ ಮೂರನೇ ಮಹಡಿಯಿ...
16-09-25 07:12 pm
Bangalore Police, Inspector Suspend, Crime, D...
15-09-25 10:47 pm
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am