ಬ್ರೇಕಿಂಗ್ ನ್ಯೂಸ್
20-05-23 04:45 pm Bangalore Correspondent ಕರ್ನಾಟಕ
ಬೆಂಗಳೂರು, ಮೇ 20: ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲ ಸಚಿವ ಸಂಪುಟ ನಡೆಸಿದ್ದು, ಸಭೆಯಲ್ಲಿ ಪ್ರಣಾಳಿಕೆಯಲ್ಲಿ ನೀಡಿರುವ ಐದು ಗ್ಯಾರಂಟಿ ಭರವಸೆಗಳಿಗೆ ಒಪ್ಪಿಗೆ ನೀಡಿದ್ದಾರೆ. ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಸಿದ್ದರಾಮಯ್ಯ, ಎಲ್ಲ ಗ್ಯಾರಂಟಿ ಭರವಸೆಗಳನ್ನೂ ಇವತ್ತಿನಿಂದಲೇ ಜಾರಿಗೆ ತರುತ್ತೇವೆ ಎಂದು ಘೋಷಿಸಿದರು.
ಗೃಹಜ್ಯೋತಿ ಯೋಜನೆಯಡಿ ಎಲ್ಲರಿಗೂ 200 ಯೂನಿಟ್ ವಿದ್ಯುತ್ ಫ್ರೀಯಾಗಿ ಕೊಡುತ್ತೇವೆ, ಇದಕ್ಕೆ ಸುಮಾರು ವರ್ಷಕ್ಕೆ 1200 ಕೋಟಿ ಬೇಕಾಗಬಹುದು. ಗೃಹ ಲಕ್ಷ್ಮೀ ಯೋಜನೆಯಡಿ ಪ್ರತಿ ಮನೆಯ ಒಡತಿಗೆ ಎರಡು ಸಾವಿರ ರೂಪಾಯಿ ಹಣವನ್ನು ಅವರ ಖಾತೆಗೆ ಪ್ರತಿ ತಿಂಗಳು ಹಾಕುತ್ತೇವೆ. ಅನ್ನಭಾಗ್ಯ ಯೋಜನೆಯಡಿ ಹಿಂದೆ 7 ಕೇಜಿ ಅಕ್ಕಿ ಕೊಟ್ಟಿದ್ದೆವು, ಅದನ್ನು ಹತ್ತು ಕೇಜಿಗೆ ಏರಿಸುತ್ತೇವೆ. ನಿರುದ್ಯೋಗಿ ಯುವಕ- ಯುವತಿಯರಿಗೆ ಯುವನಿಧಿ ಯೋಜನೆಯಡಿ ಈ ಶೈಕ್ಷಣಿಕ ಸಾಲಿನಲ್ಲಿ ಪಾಸ್ ಆದ ಪದವೀಧರರಿಗೆ ಪ್ರತಿ ತಿಂಗಳು ಮೂರು ಸಾವಿರ ರೂ. ನೀಡುತ್ತೇವೆ. ಎರಡು ವರ್ಷದ ವರೆಗೆ ಈ ಹಣ ನೀಡಲಿದ್ದು, ಅದರ ನಡುವೆ ಖಾಸಗಿ ಅಥವಾ ಸರಕಾರಿ ಉದ್ಯೋಗ ಸಿಕ್ಕಲ್ಲಿ ಇದನ್ನು ನಿಲ್ಲಿಸಲಾಗುವುದು. ಡಿಪ್ಲೊಮಾ ಪಾಸ್ ಆದ ನಿರುದ್ಯೋಗಿಗಳಿಗೆ 1500 ರೂ. ನೀಡಲಾಗುವುದು. ಸಖಿ ಭಾಗ್ಯ ಯೋಜನೆಯಡಿ ಕರ್ನಾಟಕದ ಮಹಿಳೆಯರಿಗೆ ಮಾತ್ರ ಸರಕಾರಿ ಬಸ್ಸಿನಲ್ಲಿ ಉಚಿತ ಪ್ರಯಾಣಕ್ಕೆ ಫ್ರೀ ಪಾಸ್ ಕೊಡುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
2013ರಲ್ಲಿ ನಾವು ಅಧಿಕಾರಕ್ಕೆ ಬಂದಾಗ 162 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೆವು, ನಾವು ನುಡಿದಂತೆ ನಡೆಯುತ್ತೇವೆ. ಈ ಬಾರಿಯೂ ಏನು ಹೇಳಿದ್ದೇವೋ, ಅದನ್ನು ತಪ್ಪದೆ ಈಡೇರಿಸುತ್ತೇವೆ. ಪ್ರಧಾನಿ ಮೋದಿಯವರು ಮನ್ ಕಿ ಬಾತ್ ನಲ್ಲಿಯೇ ಸುಳ್ಳು ಭರವಸೆಗಳೆಂದು ಹೇಳಿದ್ದಾರೆ. ಅದನ್ನು ಈಡೇರಿಸೋದು ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ. ಎಲ್ಲ ಭರವಸೆಗಳನ್ನು ಈಡೇರಿಸಲು ವರ್ಷಕ್ಕೆ 50 ಸಾವಿರ ಕೋಟಿ ಬೇಕಾಗಬಹುದು. ರಾಜ್ಯದ ಬಜೆಟ್ 3.10 ಲಕ್ಷ ಕೋಟಿ ಇದೆ. ಪ್ರತಿವರ್ಷ ಹತ್ತು ಪರ್ಸೆಂಟ್ ಹೆಚ್ಚುತ್ತಾ ಹೋಗುತ್ತದೆ. ತೆರಿಗೆ ಹೆಚ್ಚಿಸಿಕೊಂಡರೆ ಒಂದಷ್ಟು ಆದಾಯ ಹೆಚ್ಚಿಸಬಹುದು.
ಕೇಂದ್ರದ ಪಾಲು ಪಡೆದೇ ಪಡೆಯುತ್ತೇವೆ
15ನೇ ಹಣಕಾಸು ಆಯೋಗದ ಪ್ರಕಾರ, ಕೇಂದ್ರ ಸರಕಾರದಿಂದ ಜಿಎಸ್ಟಿ ಪಾಲು 50 ಸಾವಿರ ಕೋಟಿ ಬರುತ್ತದೆ ಎಂದಿದ್ದಾರೆ. ಅದು ಒಂದು ಲಕ್ಷ ಕೋಟಿ ಆಗಬೇಕಿತ್ತು. ಕರ್ನಾಟಕದಿಂದ ನಾಲ್ಕು ಲಕ್ಷ ಕೋಟಿ ರೂಪಾಯಿ ಜಿಎಸ್ಟಿ ಹೆಸರಲ್ಲಿ ಕೇಂದ್ರಕ್ಕೆ ಹೋಗುತ್ತದೆ. ಆದರೆ ನಮ್ಮ ಪಾಲು ಕೊಡುವಲ್ಲಿ ಅನ್ಯಾಯವಾಗಿದೆ. ಕರ್ನಾಟಕದವರು ಅಂತ ಹೇಳುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಂಚನೆ ಮಾಡಿದ್ದಾರೆ. ಹಿಂದೆ ಅಧಿಕಾರದಲ್ಲಿದ್ದವರು ತಮ್ಮ ಪಾಲನ್ನು ಕೇಳಲಿಲ್ಲ. ನ್ಯಾಯಯುತವಾಗಿ ಬರಬೇಕಿದ್ದ ಹಣವನ್ನು ಕೇಳಿ ಪಡೆದುಕೊಂಡಿಲ್ಲ. ಬೊಮ್ಮಾಯಿ ಜಿಎಸ್ಟಿ ಕೌನ್ಸಿಲ್ ಸದಸ್ಯರಾದರೂ ಇದರ ಬಗ್ಗೆ ತಕಾರ ಎತ್ತಿಲ್ಲ.
ಬಿಜೆಪಿ ಸರಕಾರವೇ ಅತಿ ಹೆಚ್ಚು ಸಾಲ ಮಾಡಿದೆ ಎಂದು ಹೇಳಿದ ಸಿದ್ದರಾಮಯ್ಯ, 2014ರ ವರೆಗೆ ಕೇಂದ್ರ ಸರಕಾರದ ಸಾಲ 53 ಲಕ್ಷ ಕೋಟಿ ಸಾಲ ಇತ್ತು. 70 ವರ್ಷಗಳಲ್ಲಿ ಮಾಡಿಕೊಂಡು ಬಂದಿದ್ದ ಸಾಲ ಅದು. ಈಗ 9 ವರ್ಷದಲ್ಲಿ ಮೋದಿ ಸರಕಾರದ ಸಾಲ 155 ಲಕ್ಷ ಕೋಟಿಗೆ ಏರಿದೆ. ಯಾರು ಹೆಚ್ಚು ಸಾಲ ಮಾಡಿರೋದು, ಇವರು ಯಾಕೆ ಸಾಲ ಹೆಚ್ಚಿಸಿದ್ದರು ಎಂದು ಪ್ರಶ್ನೆ ಮಾಡಿದರು.
ನನ್ನ ಅವಧಿಯಲ್ಲಿ 2018ರ ವರೆಗೆ ರಾಜ್ಯ ಸರಕಾರದ ಸಾಲ 2.42 ಲಕ್ಷ ಕೋಟಿ ಇತ್ತು. ಆನಂತರ, ಕುಮಾರಸ್ವಾಮಿ ಮತ್ತು ಬಿಜೆಪಿ ಸರಕಾರ ಸೇರಿ ರಾಜ್ಯದ ಸಾಲ 5.64 ಲಕ್ಷ ಕೋಟಿಗೆ ಏರಿಕೆಯಾಗಿದೆ. ಈ ಒಂದೇ ವರ್ಷದಲ್ಲಿ 78 ಸಾವಿರ ಕೋಟಿ ಸಾಲ ತಗೊಂಡಿದ್ದಾರೆ. ನಾನು 5 ವರ್ಷದಲ್ಲಿ 1.16 ಲಕ್ಷ ಕೋಟಿ ಸಾಲ ಮಾಡಿದ್ದೇನೆ. ಕೇಂದ್ರದಿಂದ ಬರಬೇಕಾದ ಅಸಲಿನ ಬಡ್ಡಿ ಮೊತ್ತವೇ 56 ಸಾವಿರ ಕೋಟಿ ಆಗುತ್ತದೆ. ಇದರಲ್ಲಿ ಬಡವರಿಗೆ, ರಾಜ್ಯದ ಜನತೆಗೆ ಪಾಲು ಕೊಡುತ್ತೇನೆ. ರಾಜ್ಯವನ್ನು ಸಾಲದಲ್ಲಿ ಮುಳುಗಿಸದೆ, ಯಾವುದೇ ಹೆಚ್ಚುವರಿ ತೆರಿಗೆ ಹೊರಿಸದೆ ನಾವು ಹೇಳಿರುವ ಭರವಸೆಗಳನ್ನು ಈಡೇರಿಸುತ್ತೇವೆ. ಜುಲೈ ತಿಂಗಳಲ್ಲಿ ಹೊಸ ಬಜೆಟ್ ಮಂಡಿಸುತ್ತೇನೆ. ಮುಂದಿನ ವಾರವೇ ಸಂಪುಟ ಸಭೆಯಲ್ಲಿ ಚರ್ಚಿಸಿ, ಗ್ಯಾರಂಟಿ ಭರವಸೆಗಳ ಬಗ್ಗೆ ಆದೇಶ ಹೊರಡಿಸುತ್ತೇನೆ ಎಂದು ಎಂದು ಸಿದ್ದರಾಮಯ್ಯ ಹೇಳಿದರು.
The Congress has promised to implement the ‘guarantees’ — 200 units of free power to all households (Gruha Jyoti), ₹2,000 monthly assistance to the woman head of every family (Gruha Lakshmi), 10 kg of rice free to every member of a BPL household (Anna Bhagya), ₹3,000 every month for unemployed graduate youth and ₹1,500 for unemployed diploma holders (both in the age group of 18-25) for two years (YuvaNidhi), and free travel for women in public transport buses (Shakti), on the very first day of assuming power in the state.
10-02-25 10:51 pm
HK News Desk
BJ show cause notice, Yatnal; 'ಭಿನ್ನರ ಬಣ'ದ ನಾ...
10-02-25 10:19 pm
Hubballi Dead Man Ambulance: ಆಸ್ಪತ್ರೆಯಲ್ಲಿ ಸತ...
10-02-25 07:01 pm
13th edition Kumbh Mela, Triveni Sangama, T N...
10-02-25 05:18 pm
Magadi MLA Balakrishna, Bdcc bank, fake gold:...
10-02-25 01:40 pm
10-02-25 05:48 pm
HK News Desk
CBI arrest, Tirupati laddu: ತಿರುಪತಿ ಲಡ್ಡಿನಲ್ಲ...
10-02-25 02:13 pm
ಮೆಕ್ಸಿಕೋ ; ಟ್ರಕ್ ಡಿಕ್ಕಿ ಹೊಡೆದು ಹೊತ್ತಿ ಉರಿದ ಬಸ...
09-02-25 09:32 pm
Delhi Election Results 2025, BJP Win; ದೆಹಲಿಯಲ...
08-02-25 02:23 pm
BJP Delhi, AAP, Live result, Election: 27 ವರ್...
08-02-25 12:14 pm
10-02-25 11:09 pm
Mangalore Correspondent
Drone, Puttur Konark Rai, Indian Army: ಆಕಾಶದಿ...
10-02-25 10:34 pm
Mangalore News, Wenlock hospital, operation:...
09-02-25 11:03 pm
ಸುಳ್ಯದಲ್ಲಿ ಬೈಕ್ ಅಪಘಾತ ; ತೀವ್ರ ಗಾಯಗೊಂಡಿದ್ದ ಕಂಕ...
09-02-25 10:31 pm
Mangalore, Derlakatte, Drowning: ಕಪ್ಪೆ ಚಿಪ್ಪು...
09-02-25 07:40 pm
09-02-25 07:35 pm
Mangalore Correspondent
Bangalore, Udupi crime, Fraud: ಕ್ಯಾಸಿನೋ, ಬಿಟ್...
08-02-25 10:16 pm
ಕಲಬುರಗಿ | ಪರಸ್ತ್ರೀ ಜೊತೆ ಸುತ್ತಾಡುತ್ತಿದ್ದ ಪತಿಯ...
08-02-25 06:21 pm
Mangalore Mayor raid, slaughterhouse Kudroli:...
08-02-25 04:36 pm
Bidar murder crime: ಬೀದರ್ ; ಮನೆಮಂದಿ ನೋಡಿದ ಹುಡ...
08-02-25 01:00 pm