ಬ್ರೇಕಿಂಗ್ ನ್ಯೂಸ್
20-05-23 06:59 pm Bangalore Correspondent ಕರ್ನಾಟಕ
ಬೆಂಗಳೂರು, ಮೇ 20: ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆಗೆ 28 ಮಂದಿ ಸಚಿವರು ಪ್ರಮಾಣ ವಚನ ಸ್ವೀಕರಿಸುವುದು ಶುಕ್ರವಾರ ರಾತ್ರಿ ವರೆಗೂ ಅಂತಿಮ ಆಗಿತ್ತು. ಉತ್ತರ ಕರ್ನಾಟಕ, ಬೆಂಗಳೂರು, ಕರಾವಳಿ, ಮಧ್ಯ ಕರ್ನಾಟಕ ಭಾಗದಿಂದ ಯಾರೆಲ್ಲ ಸಚಿವರಾಗಬೇಕು ಎಂಬ ಬಗ್ಗೆ ಲಿಸ್ಟ್ ಹೈಕಮಾಂಡ್ ಕಡೆಯಿಂದ ಆಗಿತ್ತು. ಆದರೆ ತಮ್ಮವರೇ ಸಚಿವರಾಗಬೇಕು, ಇಂಥವರು ಆಗಬಾರದು ಎಂಬ ಡಿಕೆಶಿ ಮತ್ತು ಸಿದ್ದರಾಮಯ್ಯ ಇಬ್ಬರ ಪಟ್ಟಿನಿಂದಾಗಿ ಇಕ್ಕಟ್ಟಿಗೆ ಸಿಲುಕಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶನಿವಾರ ಬೆಳಗ್ಗಿನ ಹೊತ್ತಿಗೆ ಕೇವಲ ಎಂಟು ಮಂದಿಯನ್ನು ಅಂತಿಮಗೊಳಿಸಿದ್ದರು ಎಂಬ ಮಾಹಿತಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.
ಸಿಎಂ ಸ್ಥಾನಕ್ಕಾಗಿ ಒಂದು ವಾರದಿಂದ ನಡೆದ ಬಿಕ್ಕಟ್ಟನ್ನು ಕಡೆಗೂ ಹೈಕಮಾಂಡ್ ನಾಯಕರು ಬಗೆಹರಿಸಿದ್ದರು. ಆನಂತರ, ಮೊದಲ ದಿನವೇ ಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆಗೆ ಹೈಕಮಾಂಡ್ ಮುಂದಾಗಿತ್ತು. ಇದಕ್ಕಾಗಿ ಸಾಕಷ್ಟು ಅಳೆದು ತೂಗಿ ಕರ್ನಾಟಕದವರೇ ಆದ ಖರ್ಗೆ ಸಚಿವ ಸ್ಥಾನದ ಪಟ್ಟಿಯನ್ನು ರಚಿಸಿದ್ದರು. ಆದರೆ ಆ ಪಟ್ಟಿಯಲ್ಲಿ ತಮ್ಮವರೇ ಹೆಚ್ಚಿರಬೇಕು ಎಂದು ಡಿಕೆಶಿ ಮತ್ತು ಸಿದ್ದರಾಮಯ್ಯ ಪಟ್ಟು ಹಾಕಿದ್ದರು. ಎಐಸಿಸಿ ಮಟ್ಟದಲ್ಲಿ ಹಿರಿಯ ನಾಯಕರಾಗಿದ್ದ ಮತ್ತು ರಾಜ್ಯದಲ್ಲಿ ಡಿಕೆಶಿ ಬಣದಲ್ಲಿ ಗುರುತಿಸಿರುವ ಬಿಕೆ ಹರಿಪ್ರಸಾದ್ ಅವರಿಗೆ ಸಚಿವ ಸ್ಥಾನ ನೀಡಲೇಬಾರದು ಎಂದು ಸಿದ್ದರಾಮಯ್ಯ ಪಟ್ಟು ಹಾಕಿದ್ದು ಡಿಕೆಶಿಯನ್ನು ಸಿಟ್ಟು ತರಿಸಿತ್ತು. ಹೀಗಾಗಿ ಸಿದ್ದರಾಮಯ್ಯ ಬಣದ ಜಮೀರ್ ಅಹ್ಮದ್ ಖಾನ್ ಮತ್ತು ಎಂಬಿ ಪಾಟೀಲ್ ಗೆ ಸ್ಥಾನ ಕೊಡಬಾರದು ಎಂದು ಡಿಕೆಶಿ ಪಟ್ಟು ಹಾಕಿದ್ದರು.
ಸಿದ್ದರಾಮಯ್ಯ ಪಟ್ಟಿಯಲ್ಲಿ ಎಚ್.ಸಿ.ಮಹದೇವಪ್ಪ, ದಿನೇಶ್ ಗುಂಡೂರಾವ್, ಭೈರತಿ ಸುರೇಶ್, ಕೃಷ್ಣ ಭೈರೇಗೌಡ, ಚೆಲುವನಾರಾಯಣ ಸ್ವಾಮಿ ಮತ್ತಿತರ ಹೆಸರುಗಳಿದ್ದವು. ಆದರೆ ಇದನ್ನು ನಿರಾಕರಿಸಿದ್ದ ಡಿಕೆ ಶಿವಕುಮಾರ್, ತನ್ನದೇ ಆದ ಪಟ್ಟಿಯನ್ನು ಹೈಕಮಾಂಡ್ ಮುಂದಿಟ್ಟಿದ್ದರು. ಡಿಕೆಶಿ ಪಟ್ಟಿಯಲ್ಲಿ ಮೈಸೂರು ಭಾಗದಲ್ಲಿ ಗೆದ್ದ ಕೆಲವು ಒಕ್ಕಲಿಗ ಶಾಸಕರು ಮತ್ತು ಕರಾವಳಿಯಿಂದ ಯುಟಿ ಖಾದರ್, ಹರಿಪ್ರಸಾದ್, ಮಧು ಬಂಗಾರಪ್ಪ ಹೆಸರುಗಳಿದ್ದವು. ಇದೆಲ್ಲ ಚರ್ಚೆ ನಡೆದು ರಾತ್ರಿ ವೇಳೆಗೆ 28 ಮಂದಿಯ ಸಚಿವ ಸ್ಥಾನದ ಪಟ್ಟಿ ರೆಡಿಯಾಗಿತ್ತು. ಅಷ್ಟರಲ್ಲಿ ಡಿಕೆಶಿ ಅದರಲ್ಲಿ ಮತ್ತೊಮ್ಮೆ ಕೈಯಾಡಿಸಿದ್ದು ಒಂದಿಬ್ಬರು ಹೆಸರನ್ನು ಬದಲಾವಣೆ ಮಾಡಿದ್ದರು ಎನ್ನಲಾಗಿದೆ. ಇದು ತಿಳಿಯುತ್ತಲೇ ತಡರಾತ್ರಿ ಕೆಸಿ ವೇಣುಗೋಪಾಲ್ ಮನೆಗೆ ತೆರಳಿದ ಸಿದ್ದರಾಮಯ್ಯ, ಕಿರಿಕ್ ಮಾಡಿದ್ದಾರೆ. ಎಂಬಿ ಪಾಟೀಲ್, ಜಮೀರ್ ಅಹ್ಮದ್ ಖಾನ್ ಅವರಿಗೆ ಸ್ಥಾನ ಕೊಡದೇ ಇದ್ದರೆ ತಾನು ಸಿಎಂ ಆಗುವುದೇ ಇಲ್ಲ ಎಂದು ಹೇಳಿ ಹೊರ ನಡೆದಿದ್ದಾರೆ. ಇದರಿಂದ ಚಿಂತೆಗೊಳಗಾದ ವೇಣುಗೋಪಾಲ್ ಮತ್ತು ಮಲ್ಲಿಕಾರ್ಜುನ ಖರ್ಗೆ, ಸದ್ಯಕ್ಕೆ ಎಂಟು ಮಂದಿ ಹಿರಿಯರು ಮಾತ್ರ ಸಾಕು, ಉಳಿದವರಿಗೆ ಮುಂದೆ ನೋಡೋಣ ಎಂದು ಇತರ 20 ಮಂದಿಯ ಪಟ್ಟಿಗೆ ಬ್ರೇಕ್ ಹಾಕಿದ್ದಾರೆ.
ಆದರೆ ಈ ಪಟ್ಟಿಯಲ್ಲಿ ಸಿದ್ದರಾಮಯ್ಯ ಬಣದ ಎಂಬಿ ಪಾಟೀಲ್, ಜಮೀರ್ ಅಹ್ಮದ್ ಖಾನ್, ಸತೀಶ್ ಜಾರಕಿಹೊಳಿ, ಕೆಜೆ ಜಾರ್ಜ್ ಸ್ಥಾನ ಪಡೆದಿದ್ದಾರೆ. ಡಿಕೆಶಿ ಹೇಳಿದ್ದರ ಪೈಕಿ ರಾಮಲಿಂಗಾರೆಡ್ಡಿ ಮಾತ್ರ ಸ್ಥಾನ ಪಡೆದಿದ್ದಾರೆ. ಹೈಕಮಾಂಡ್ ಕಡೆಯಿಂದ ರೆಡಿ ಮಾಡಿದ್ದ ಪಟ್ಟಿಯ ಪರಮೇಶ್ವರ್, ಕೆಎಚ್ ಮುನಿಯಪ್ಪ, ಪ್ರಿಯಾಂಕ ಖರ್ಗೆ ಸ್ಥಾನ ಪಡೆದಿದ್ದಾರೆ. ಈ ಮೂವರು ಕೂಡ ದಲಿತ ಮೀಸಲು ಕೋಟಾದಲ್ಲಿದ್ದರೆ, ಸತೀಶ ಜಾರಕಿಹೊಳಿ ಎಸ್ಟಿ ಮೀಸಲಿನಲ್ಲಿ ಸ್ಥಾನ ಪಡೆದಿದ್ದಾರೆ. ಏಳು ಮಂದಿ ಹಿರಿಯರೇ ಆಗಿದ್ದರೂ, ಪ್ರಿಯಾಂಕ ಖರ್ಗೆ, ಎಐಸಿಸಿ ಅಧ್ಯಕ್ಷರ ಪುತ್ರನೆಂಬ ನೆಲೆಯಲ್ಲಿ ಸಚಿವ ಸ್ಥಾನ ಗಿಟ್ಟಿಸಿದ್ದಾರೆ. ಮಾಜಿ ಸಿಎಂ ಧರಂ ಸಿಂಗ್ ಪುತ್ರ ಅಜಯ್ ಸಿಂಗ್ ಈ ಬಾರಿ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರೂ, ಅವರಿಗೆ ಸ್ಥಾನ ಸಿಕ್ಕಿಲ್ಲ.
ಸೊರಬ ಶಾಸಕ ಮಧು ಬಂಗಾರಪ್ಪ ಹೆಸರು ಮಿಸ್ ಆಗಿರುವುದು ಚಿಕ್ಕಮಗಳೂರು, ಶಿವಮೊಗ್ಗ ಭಾಗದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಕರಾವಳಿಗೆ ಯಾವುದೇ ಸ್ಥಾನವೂ ಸಿಕ್ಕಿಲ್ಲ. ಯುಟಿ ಖಾದರ್ ಮತ್ತು ಬಿಕೆ ಹರಿಪ್ರಸಾದ್ ಹೆಸರು ಅಂತಿಮ ಪಟ್ಟಿಯಲ್ಲಿ ಇತ್ತಾದರೂ, ಸ್ಥಾನ ಮಿಸ್ ಆಗಿದೆ. ಶನಿವಾರ ಪ್ರಮಾಣ ವಚನ ಸ್ವೀಕಾರ ಸಮಾರಂಭ, ಸಚಿವ ಸಂಪುಟ ಸಭೆ ನಡೆದು ಸುದ್ದಿಗೋಷ್ಟಿ ಸಂದರ್ಭದಲ್ಲೂ ಸಿದ್ದರಾಮಯ್ಯ ಮುಖ ಕಪ್ಪಿಟ್ಟಿತ್ತು. ಹಿಂದಿನ ದಿನದ ಜಟಾಪಟಿ, ಒಳಗಿನ ವೈಮನಸ್ಸು ಮುಖದಲ್ಲಿಯೇ ರಾಚುವಂತಿತ್ತು. ಇಬ್ಬರು ನಾಯಕರು ಕೂಡ ಖರ್ಗೆ ಸಮ್ಮುಖದಲ್ಲಿ ಅವ ಬೇಡ, ಇವ ಬೇಡ ಎಂದು ಬೈದಾಡಿಕೊಂಡಿದ್ದಾರೆ ಎನ್ನುವ ಮಾಹಿತಿಗಳಿದ್ದು, ಇಬ್ಬರ ಜಗಳದ ನಡುವೆಯೇ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಾನೇನು ಕಮ್ಮಿಯಿಲ್ಲ ಎಂದು ತೋರಿಸುತ್ತಲೇ ವಿಧಾನಸಭೆ ಮೆಟ್ಟಿಲಿಗೆ ಶಿರಬಾಗಿ ನಮಿಸಿ, ಗೆಲುವಿನ ಸನ್ನೆ ತೋರುತ್ತಲೇ ಒಳ ನಡೆದಿದ್ದಾರೆ. ಸಿದ್ದರಾಮಯ್ಯ ಮಾತ್ರ ಪೂರ್ತಿ ಮೌನಕ್ಕೆ ಶರಣಾಗಿದ್ದು ಒಳಗಿನ ಗುಟ್ಟನ್ನು ಹೊರಗೆ ಬಿಟ್ಟುಕೊಂಡಂತಿತ್ತು.
Karnataka Government Formation, last moment changes in Cabinet, Siddaramaiah chooses his close friends for ministerial post. Siddaramaiah and KPCC president D K Shivakumar were sworn in as the next Chief Minister and Deputy Chief Minister of Karnataka at the Sree Kanteerava Stadium in Bengaluru today. Congress MLAs including G Parameshwara, K H Muniyappa, K J George, M B Patil, Satish Jarkiholi, Priyank Kharge, Ramalinga Reddy, and B Z Zameer Ahmed Khan too sworn in as Ministers in the Siddaramaiah Cabinet.
03-08-25 09:30 pm
HK News Desk
Ravi Poojary Aide Kaviraj Arrested, Kolar Pol...
03-08-25 10:52 am
Dharmasthala News, High Court; ಧರ್ಮಸ್ಥಳ ಸುದ್ದ...
01-08-25 11:34 pm
‘Comedy Kiladigalu’, Chandrashekhar Siddi Sui...
01-08-25 10:45 pm
Kannada Producer Ganesh, Film Dharmasthala Fi...
01-08-25 09:09 pm
03-08-25 05:44 pm
HK News Desk
ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ನರೇಂದ್ರ ಮೋದಿ, ಭಾಗ...
03-08-25 04:25 pm
ಮಾಲೆಗಾಂವ್ ಪ್ರಕರಣದಲ್ಲಿ ಮೋಹನ್ ಭಾಗವತ್ ಬಂಧಿಸುವುದಕ...
01-08-25 10:48 pm
ಭಾರತ, ರಷ್ಯಾದ್ದು ಸತ್ತ ಆರ್ಥಿಕತೆ, ಒಟ್ಟಿಗೇ ನಾಶವಾಗ...
01-08-25 11:44 am
2008ರ ಮಾಲೆಗಾಂವ್ ಸ್ಫೋಟ ಪ್ರಕರಣ ; ಸಾಧ್ವಿ ಪ್ರಜ್ಞ...
31-07-25 10:08 pm
02-08-25 10:51 pm
Mangalore Correspondent
Kallapu Highway News; ಕಲ್ಲಾಪು ಹೆದ್ದಾರಿಯಲ್ಲಿ ಬ...
02-08-25 03:51 pm
Inspector Manjunath Gowda, SIT, Dharmasthala:...
02-08-25 02:31 pm
Dharmasthala Case, UDR, SIT Police News; ಧರ್ಮ...
02-08-25 01:46 pm
Kerala Comes to Mangalore: Feast at Coral, Th...
02-08-25 01:40 pm
03-08-25 10:11 pm
Mangalore Correspondent
ಮುಖ್ಯಶಿಕ್ಷಕನ ವರ್ಗಾವಣೆಗೆ ಸಂಚು ; ಶಾಲೆಯ ವಾಟರ್ ಟ...
03-08-25 08:16 pm
Mangalore Massive Lucky Scheme Fraud: ಸುರತ್ಕಲ...
02-08-25 10:04 pm
ಪ್ರಜ್ವಲ್ ರೇವಣ್ಣ ಅಪರಾಧಿ ; 14 ವರ್ಷ ಅಲ್ಲ, ಜೀವನಪರ...
02-08-25 07:20 pm
Suhas Shetty Murder, NIA Raid Mangalore: ಸುಹಾ...
02-08-25 04:43 pm