ಬ್ರೇಕಿಂಗ್ ನ್ಯೂಸ್
23-05-23 12:04 pm Bangalore Correspondent ಕರ್ನಾಟಕ
ಬೆಂಗಳೂರು, ಮೇ 23: ಕಾಂಗ್ರೆಸ್ ನಾಯಕ ಯುಟಿ ಖಾದರ್ ಅವರನ್ನು ವಿಧಾನಸಭಾಧ್ಯಕ್ಷರನ್ನಾಗಿ ನಾಮನಿರ್ದೇಶನ ಮಾಡಲು ನಿರ್ಧರಿಸಲಾಗಿದೆ. ಯು.ಟಿ.ಖಾದರ್ ಅವರು ಐದನೇ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ಅವರು ಆ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ.
ತಡರಾತ್ರಿ ಯು.ಟಿ ಖಾದರ್ ಅವರನ್ನು ಕರೆಯಿಸಿಕೊಂಡು ಸ್ಪೀಕರ್ ಸ್ಥಾನವನ್ನು ಅಲಂಕರಿಸುವಂತೆ ಅವರ ಮನವೊಲಿಸುವಲ್ಲಿ ಎಐಸಿಸಿ ನಾಯಕರು ಯಶಸ್ವಿಯಾಗಿದ್ದಾರೆ.
ಸಚಿವ ಸ್ಥಾನದ ಆಕಾಂಕ್ಷಿಗಳಾಗಿರುವ ಕೈ ಹಿರಿಯ ನಾಯಕರು ಸ್ಪೀಕರ್ ಸ್ಥಾನವನ್ನು ಅಲಂಕರಿಸಲು ಹಿಂದೇಟು ಹಾಕಿದ್ದರು. ಇದು ಕಾಂಗ್ರೆಸ್ ನಾಯಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಆರ್.ವಿ ದೇಶಪಾಂಡೆ, ಹೆಚ್.ಕೆ ಪಾಟೀಲ್ ಅವರು ಸಭಾಪತಿ ಸ್ಥಾನವನ್ನು ನಿರಾಕರಣೆ ಮಾಡಿದ ನಂತರ ಟಿ.ಬಿ ಜಯಚಂದ್ರ ಅವರನ್ನು ಸಂಪರ್ಕಿಸಲಾಯಿತು. ಆದ್ರೆ ಅವರು ತಮ್ಮ ಮೊಬೈಲ್‌ನ್ನು ಸ್ವಿಚ್ ಆಪ್ ಮಾಡಿಕೊಂಡಿದ್ದರು.
ಇದರಂದಾಗಿ ಸ್ಪೀಕರ್ ಆಯ್ಕೆ ಕೈ ನಾಯಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿತು. ನಂತರ ಎಐಸಿಸಿ ನಾಯಕರ ಅಖಾಡಕ್ಕೆ ಇಳಿದು ತಡರಾತ್ರಿ ಯು.ಟಿ ಖಾದರ್ ನ್ನ ಕರೆಸಿಕೊಂಡು ಚರ್ಚೆ ನಡೆಸಿದರು. ಖಾಸಗಿ ಹೋಟೆಲ್‌ಗೆ ಖಾದರ್ ಅವರನ್ನು ಕರೆಸಿಕೊಂಡು ಮನವೊಲಿಕೆ ಮುಂದಾಗಿದ್ದರು. ಸ್ಪೀಕರ್ ಸ್ಥಾನ ಅಲಂಕರಿಸಲು ಹಿರಿಯ ನಾಯಕರು ನಿರಾಕರಿಸಿದ ಕಾರಣ ರಾತ್ರಿಯೇ ಬೆಂಗಳೂರಿಗೆ ಎಐಸಿಸಿ ನಾಯಕರು ಧಾವಿಸಿದ್ದರು.
ಖುದ್ದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಹಾಗೂ ಉಸ್ತುವಾರಿ ಸುರ್ಜೇವಾಲಾ ಅವರು ಹಿರಿಯ ನಾಯಕರ ಜೊತೆ ಚರ್ಚೆ ನಡೆಸಿದದರು. ಯಾರೂ ಒಪ್ಪಿಕೊಳ್ಳದ ಹಿನ್ನೆಲೆ ಕೊನೆಗೆ ಯು.ಟಿ ಖಾದರ್ ನ್ನ ಕರೆಸಿಕೊಂಡು ಸಮಾಲೋಚನೆ ಮಾಡಲಾಯಿತು. ಅಲ್ಲದೆ ಎರಡು ವರ್ಷಗಳ ನಂತರ ಸಚಿವ ಸ್ಥಾನದ ನೀಡುವುದಾಗಿ ಖಾದರ್ ಅವರಿಗೆ ವೇಣುಗೋಪಾಲ್ ಮತ್ತು ಸುರ್ಜೇವಾಲಾ ಅವರು ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಎಐಸಿಸಿ ನಾಯಕರ ಭರವಸೆಯಿಂದಾಗಿ ಸ್ಪೀಕರ್ ಸ್ಥಾನಕ್ಕೆ ಒಲ್ಲದ ಮನಸ್ಸಿನಿಂದಲೇ ಖಾದರ್ ಅವರು ಒಪ್ಪಿಕೊಂಡಿದ್ದಾರೆ.
Former Minister and five-time MLA U.T. Khader is the choice of the Congress for the post of Speaker of Karnataka Legislative Assembly. His candidature will be formalised during the Congress Legislature’s Party meeting scheduled on Wednesday (May 24). The ruling party’s nominee is, generally, unanimously elected as the Speaker.
03-08-25 09:30 pm
HK News Desk
Ravi Poojary Aide Kaviraj Arrested, Kolar Pol...
03-08-25 10:52 am
Dharmasthala News, High Court; ಧರ್ಮಸ್ಥಳ ಸುದ್ದ...
01-08-25 11:34 pm
‘Comedy Kiladigalu’, Chandrashekhar Siddi Sui...
01-08-25 10:45 pm
Kannada Producer Ganesh, Film Dharmasthala Fi...
01-08-25 09:09 pm
03-08-25 05:44 pm
HK News Desk
ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ನರೇಂದ್ರ ಮೋದಿ, ಭಾಗ...
03-08-25 04:25 pm
ಮಾಲೆಗಾಂವ್ ಪ್ರಕರಣದಲ್ಲಿ ಮೋಹನ್ ಭಾಗವತ್ ಬಂಧಿಸುವುದಕ...
01-08-25 10:48 pm
ಭಾರತ, ರಷ್ಯಾದ್ದು ಸತ್ತ ಆರ್ಥಿಕತೆ, ಒಟ್ಟಿಗೇ ನಾಶವಾಗ...
01-08-25 11:44 am
2008ರ ಮಾಲೆಗಾಂವ್ ಸ್ಫೋಟ ಪ್ರಕರಣ ; ಸಾಧ್ವಿ ಪ್ರಜ್ಞ...
31-07-25 10:08 pm
02-08-25 10:51 pm
Mangalore Correspondent
Kallapu Highway News; ಕಲ್ಲಾಪು ಹೆದ್ದಾರಿಯಲ್ಲಿ ಬ...
02-08-25 03:51 pm
Inspector Manjunath Gowda, SIT, Dharmasthala:...
02-08-25 02:31 pm
Dharmasthala Case, UDR, SIT Police News; ಧರ್ಮ...
02-08-25 01:46 pm
Kerala Comes to Mangalore: Feast at Coral, Th...
02-08-25 01:40 pm
03-08-25 10:11 pm
Mangalore Correspondent
ಮುಖ್ಯಶಿಕ್ಷಕನ ವರ್ಗಾವಣೆಗೆ ಸಂಚು ; ಶಾಲೆಯ ವಾಟರ್ ಟ...
03-08-25 08:16 pm
Mangalore Massive Lucky Scheme Fraud: ಸುರತ್ಕಲ...
02-08-25 10:04 pm
ಪ್ರಜ್ವಲ್ ರೇವಣ್ಣ ಅಪರಾಧಿ ; 14 ವರ್ಷ ಅಲ್ಲ, ಜೀವನಪರ...
02-08-25 07:20 pm
Suhas Shetty Murder, NIA Raid Mangalore: ಸುಹಾ...
02-08-25 04:43 pm