5 ವರ್ಷ ಸಿದ್ದರಾಮಯ್ಯ ಸಿಎಂ ;  ಎಂ.ಬಿ.ಪಾಟೀಲರೇ ಇದೆಲ್ಲಾ ನಿಮ್ಗೆ ಬೇಡ, ಡಿ.ಕೆ. ಬ್ರದರ್ ಎಚ್ಚರಿಕೆ

23-05-23 03:48 pm       Bangalore Correspondent   ಕರ್ನಾಟಕ

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ರಚನೆಯಾಗಿ 4 ದಿನ ಕಳೆಯುವಷ್ಟರಲ್ಲೇ ಪೂರ್ಣಾವಧಿ ಮುಖ್ಯಮಂತ್ರಿ ವಿಚಾರವಾಗಿ ಕಾಂಗ್ರೆಸ್‌ ಪಾಳಯದಲ್ಲಿ ಜೋರಾಗಿ ಚರ್ಚೆ ನಡೆಯುತ್ತಿದೆ.

ಬೆಂಗಳೂರು, ಮೇ 23: ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ರಚನೆಯಾಗಿ 4 ದಿನ ಕಳೆಯುವಷ್ಟರಲ್ಲೇ ಪೂರ್ಣಾವಧಿ ಮುಖ್ಯಮಂತ್ರಿ ವಿಚಾರವಾಗಿ ಕಾಂಗ್ರೆಸ್‌ ಪಾಳಯದಲ್ಲಿ ಜೋರಾಗಿ ಚರ್ಚೆ ನಡೆಯುತ್ತಿದೆ.

ಸಿದ್ದರಾಮಯ್ಯ ಅವರ ಆಪ್ತ ಸಚಿವ ಹಾಗೂ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂಬಿ ಪಾಟೀಲ್‌ ಅವರು ಸಿದ್ದರಾಮಯ್ಯ ಐದು ವರ್ಷ ಪೂರ್ಣಾವಧಿಗೆ ಅಧಿಕಾರ ನಡೆಸಲಿದ್ದಾರೆ ಎಂದು ಹೇಳಿಕೆ ನೀಡುವ ಮೂಲಕ ಹೊಸ ಚರ್ಚೆ ಹುಟ್ಟುಹಾಕಿದ್ದಾರೆ.ಇನ್ನೂ ಈ ವಿಚಾರವಾಗಿ ಡಿ ಕೆ ಶಿವಕುಮಾರ್‌ ಅವರ ಬಣದ ನಾಯಕರು ಗರಂ ಆಗಿದ್ದು, ಡಿ ಕೆ ಶಿವಕುಮಾರ್‌ ಅವರ ಸಹೋದರ ಹಾಗೂ ಸಂಸದ ಡಿ ಕೆ ಸುರೇಶ್‌ ಅವರು ಎಂ ಬಿ ಪಾಟೀಲ್‌ ಗೆ ಎಚ್ಚರಿಕೆಯನ್ನ ನೀಡಿದ್ದಾರೆ.

ಇನ್ನೂ ಸಿದ್ದರಾಮಯ್ಯನವರೇ ಮುಂದಿನ 5 ವರ್ಷ ಸಿಎಂ ಎಂಬ ಎಂಬಿ ಪಾಟೀಲ್ ಹೇಳಿಕೆ ವಿಚಾರವಾಗಿ ಸಂಸದ ಡಿ ಕೆ ಸುರೇಶ್‌ ಮಾತನಾಡಿ, ಮಾನ್ಯ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದಾರೆ. ಎಂ ಬಿ ಪಾಟೀಲ್ ಹೇಳಿಕೆಗೆ ಉತ್ತರ ಬೇಕು ಅಂದರೆ ನಮ್ಮ ಸುರ್ಜೇವಾಲ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳ ಬಳಿ ಮಾತನಾಡಿ, ಹೆಚ್ಚಿನ ಮಾಹಿತಿ ಕಲೆಕ್ಟ್ ಮಾಡಿ. ಎಂಬಿ ಪಾಟೀಲ್ ಹೇಳಿಕೆಗೆ ಉತ್ತರ ಕೊಡಬಲ್ಲೆ ಈಗ ಬೇಡ. ಎಂ.ಬಿ ಪಾಟೀಲ್ ಗೆ ನಾನು ಉತ್ತರ ಕೊಡಬಲ್ಲೇ. ಏನೇನು ಆಗಿದೆ ಅದೆಲ್ಲಾ ಬೇಡ. ಆದರೆ, ಇದೆಲ್ಲಾ ಬೇಡ ಅಂತ ಹೋಗಿ ಹೇಳಿ ಎಂದು ಎಚ್ಚರಿಕೆ ನೀಡಿದ್ದಾರೆ.

ಸಿದ್ದರಾಮಯ್ಯ ಅವರೇ ಮುಂದಿನ ಐದು ವರ್ಷವೂ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ, ಸಿಎಂ ಅಧಿಕಾರ ಹಂಚಿಕೆ ಪ್ರಶ್ನೆಯೇ ಇಲ್ಲ. ಈ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ ಎಂದು ಸಚಿವ ಎಂ ಬಿ ಪಾಟೀಲ್ ಹೇಳಿದ್ದಾರಲ್ಲ ಎಂದು ಮಾಧ್ಯಮದವರು ವಿಧಾನಸೌಧದ ಬಳಿ ಮಾಧ್ಯಮದವರು ಗಮನ ಸೆಳೆದಾಗ ಶಿವಕುಮಾರ್ ಅವರು ಈ ಬಗ್ಗೆ ಎಐಸಿಸಿ ಇದೆ ಎಂದು ಹೇಳಿದ್ದಾರೆ.

ಇನ್ನೂ ಇದೇ ವಿಚಾರವಾಗಿ ಸಿಎಂ ಸ್ಥಾನಸ ಆಕಾಂಕ್ಷಿ ಹಾಗೂ ನೂತನ ಡಿಸಿಎಂ ಡಿ ಕೆ ಶಿವಕುಮಾರ್‌ ಮಾತನಾಡಿ, ಯಾರಾದರೂ ಏನು ಬೇಕಾದರೂ ಹೇಳಿಕೊಳ್ಳಲಿ. ನಾನು ಆ ಬಗ್ಗೆ ಏನೂ ಮಾತಾಡುವುದಿಲ್ಲ. ಅಧಿಕಾರ ಮತ್ತಿತರ ಪಕ್ಷದ ವಿಚಾರಗಳನ್ನು ನೋಡಿಕೊಳ್ಳಲು ಎಐಸಿಸಿ ಇದೆ. ಕಾಂಗ್ರೆಸ್ ರಾಷ್ಟ್ರೀಯ ಮುಖಂಡರು ಇದ್ದಾರೆ. ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಮಾತ್ರ ನಮ್ಮ ಆದ್ಯತೆ ಎಂದು ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

CM Power Sharing Dispute, DK Suresh warns MB patil, says don't interfere. DK Suresh, Member of Parliament and brother of Deputy Chief Minister DK Shivakumar, has strongly reacted to MB Patil’s recent comment regarding the ruling tenure of Siddaramaiah. Patil had stated that Siddaramaiah will lead the state for the next five years without any power-sharing arrangement